Ram Navami 2024: ರಾಮ ನವಮಿಯ ದಿನ ಈ ವಿಧಾನದಿಂದ ರಾಮನನ್ನು ಪೂಜಿಸಿ!

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2024 | 10:53 AM

ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಹಾಗಾಗಿಯೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಬಾರಿ ರಾಮನವಮಿಯಂದು ಬಹಳ ಅಪರೂಪದ ಯೋಗ ಕೂಡಿ ಬಂದಿದ್ದು, ಜನರಿಗೆ ಶುಭವಾಗಲಿದೆ.

Ram Navami 2024: ರಾಮ ನವಮಿಯ ದಿನ ಈ ವಿಧಾನದಿಂದ ರಾಮನನ್ನು ಪೂಜಿಸಿ!
Ram Navami 2024
Follow us on

ಚೈತ್ರ ನವರಾತ್ರಿಯ ಕೊನೆಯ ದಿನ ಅಂದರೆ ಎ. 17 ರಂದು ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ವಿಷ್ಣುವು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಹಾಗಾಗಿಯೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಬಾರಿ ರಾಮನವಮಿಯಂದು ಬಹಳ ಅಪರೂಪದ ಯೋಗ ಕೂಡಿ ಬಂದಿದ್ದು, ಜನರಿಗೆ ಶುಭವಾಗಲಿದೆ.

ರಾಮನವಮಿ ಪೂಜೆಗೆ ಶುಭ ಸಮಯ:

ಪಂಚಾಂಗದ ಪ್ರಕಾರ, ಎ. 17 ರಾಮನವಮಿಯ ದಿನ ಬೆಳಿಗ್ಗೆ 11:40 ರಿಂದ ಮಧ್ಯಾಹ್ನ 1:40 ರ ನಡುವೆ ಅಭಿಜಿತ್ ಮುಹೂರ್ತವಿದೆ. ಈ ಮಧ್ಯೆ, ರಾಮ ಜನ್ಮೋತ್ಸವವನ್ನು ಆಚರಿಸಿ, ಭಗವಾನ್ ರಾಮ ಲಲ್ಲಾನ ಪೂಜೆ ಮಾಡಿ. ಈ ದಿನ ಮನೆ ನಿರ್ಮಾಣ ಅಥವಾ ಉದ್ಘಾಟನೆ, ಅಂಗಡಿ ಉದ್ಘಾಟನೆ, ಕಾರ್ಖಾನೆಯ ಪೂಜೆ, ಅಂಗಡಿ ಪೂಜೆಯಂತಹ ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳನ್ನು ಮಾಡಬಹುದಾಗಿದೆ.

ರಾಮ ನವಮಿ ಪೂಜಾ ಸಾಮಗ್ರಿಗಳು:

ಪೂಜೆಯಲ್ಲಿ ಶ್ರೀಗಂಧ, ತುಳಸಿ, ಅಕ್ಷತೆ, ಕರ್ಪೂರ, ಹೂವು, ಹಾರ, ಕುಂಕುಮವನ್ನು ಇಟ್ಟುಕೊಳ್ಳಿ. ನಿಮ್ಮ ಮನೆಯಲ್ಲಿರುವ ಶ್ರೀ ರಾಮನ ಹಿತ್ತಾಳೆ ಅಥವಾ ಬೆಳ್ಳಿಯ ವಿಗ್ರಹದ ಅಭಿಷೇಕಕ್ಕೆ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ ಮತ್ತು ಗಂಗಾ ಜಲದ ವ್ಯವಸ್ಥೆ ಮಾಡಿಕೊಳ್ಳಿ. ಸಿಹಿತಿಂಡಿ, ಹಳದಿ ಬಟ್ಟೆ, ಧೂಪದ್ರವ್ಯ, ದೀಪ, ಸುಂದರಕಾಂಡ ಅಥವಾ ರಾಮಾಯಣ ಪುಸ್ತಕ, ವೀಳ್ಯದೆಲೆ, ಲವಂಗ, ಏಲಕ್ಕಿ ಎಲ್ಲವೂ ಪೂಜೆಗೆ ಬೇಕಾಗುತ್ತದೆ.

ಇದನ್ನೂ ಓದಿ: ಮನೆಯ ದೇವರ ಕೋಣೆಯಲ್ಲಿ ಈ ಮೂರು ವಿಗ್ರಹಗಳು ಇರಲೇಬೇಕು!

ರಾಮನವಮಿಯ ಪೂಜಾ ವಿಧಾನ:

ರಾಮನವಮಿಯ ದಿನ ಬ್ರಹ್ಮಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ತಾಮ್ರದ ಪಾತ್ರೆಯಲ್ಲಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಭಗವಾನ್ ರಾಮನ ದರ್ಶನ ಪಡೆದ ನಂತರ, ಮನೆಗೆ ಬಂದು ಅಲ್ಲಿಯ ದೇವರನ್ನು ಅಲಂಕರಿಸಿ, ಗಣೇಶನಿಗೆ ಮೊದಲ ಪೂಜೆ ಮಾಡಿ. ನಂತರ ಶ್ರೀರಾಮನನ್ನು ಪೂಜಿಸಿರಿ. ದೇವರಿಗೆ ಹಾಲು ಮತ್ತು ಮೊಸರನ್ನು ಬೆರೆಸಿ ಅಭಿಷೇಕ ಮಾಡಿ. ಬಳಿಕ ವಿವಿಧ ರೀತಿಯ ಹೂವುಗಳಿಂದ ಮೂರ್ತಿಯನ್ನು ಅಲಂಕರಿಸಿ, ರಾಮನಾಮವನ್ನು 108 ಬಾರಿ ಪಠಿಸಿ. ಇದರ ನಂತರ, ಆರತಿ ಮಾಡಿ ಪ್ರಸಾದವನ್ನು ಎಲ್ಲರಿಗೂ ವಿತರಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:55 pm, Sun, 14 April 24