Pooja Room: ಮನೆಯ ದೇವರ ಕೋಣೆಯಲ್ಲಿ ಈ ಮೂರು ವಿಗ್ರಹಗಳು ಇರಲೇಬೇಕು!
ಎಲ್ಲಾ ದೇವರ ವಿಗ್ರಹಗಳನ್ನು ಇಡುವ ಮೊದಲು ನಿಮ್ಮ ಮನೆಯಲ್ಲಿ ಈ ಮೂರು ದೇವರ ವಿಗ್ರಹ ಇರಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಕೆಲವು ದೇವರ ವಿಗ್ರಹಗಳು ದೇವರ ಕೋಣೆಯಲ್ಲಿ ಇರಬೇಕು. ಈ ನಿಯಮಗಳನ್ನು ನೀವು ಸರಿಯಾಗಿ ಅನುಸರಿಸಿದರೆ ಅದಕ್ಕೆ ತಕ್ಕನಾದ ಫಲ ಪ್ರಾಪ್ತಿಯಾಗುತ್ತದೆ. ಹಾಗಾಗಿ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಕಡ್ಡಾಯವಾಗಿ ಯಾವ ದೇವರನ್ನು ಇಡಬೇಕು ಎಂಬುದನ್ನು ತಿಳಿದುಕೊಳ್ಳಿ? ಇಲ್ಲಿದೆ ಸಂಪೂರ್ಣ ಮಾಹಿತಿ.
ದೇವರ ಕೋಣೆ ಮನೆಯ ಹೃದಯದಂತೆ. ಹಾಗಾಗಿ ಅದು ಅಚ್ಚುಕಟ್ಟಾಗಿ ಇದ್ದಲ್ಲಿ ಎಲ್ಲವೂ ಸರಿಯಾಗಿರುತ್ತದೆ. ಇನ್ನು ಕೆಲವು ಮನೆಗಳಲ್ಲಿ ದೇವರ ವಿವಿಧ ಭಂಗಿಯಲ್ಲಿರುವ ಫೋಟೋಗಳಿರುತ್ತವೆ. ಆದರೆ ಎಲ್ಲಾ ದೇವರ ವಿಗ್ರಹಗಳನ್ನು ಇಡುವ ಮೊದಲು ನಿಮ್ಮ ಮನೆಯಲ್ಲಿ ಈ ಮೂರು ದೇವರ ವಿಗ್ರಹ ಇರಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಕೆಲವು ದೇವರ ವಿಗ್ರಹಗಳು ದೇವರ ಕೋಣೆಯಲ್ಲಿ ಇರಬೇಕು. ಈ ನಿಯಮಗಳನ್ನು ನೀವು ಸರಿಯಾಗಿ ಅನುಸರಿಸಿದರೆ ಅದಕ್ಕೆ ತಕ್ಕನಾದ ಫಲ ಪ್ರಾಪ್ತಿಯಾಗುತ್ತದೆ. ಹಾಗಾಗಿ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಕಡ್ಡಾಯವಾಗಿ ಯಾವ ದೇವರನ್ನು ಇಡಬೇಕು ಎಂಬುದನ್ನು ತಿಳಿದುಕೊಳ್ಳಿ? ಇಲ್ಲಿದೆ ಸಂಪೂರ್ಣ ಮಾಹಿತಿ.
ಹಿಂದೂ ಧರ್ಮದಲ್ಲಿ, ನಾವು ನಮ್ಮ ದೇವರ ಕೋಣೆ ಅಥವಾ ಮಂದಿರದಲ್ಲಿ ಅನೇಕ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಪೂಜೆಗಾಗಿ ಇಡುತ್ತೇವೆ. ಆದರೆ ಈ ವಿಗ್ರಹಗಳನ್ನು ಇಡುವಾಗ, ವಿಗ್ರಹವನ್ನು ಹೇಗೆ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಬಗ್ಗೆಯೂ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಈ ವಿಗ್ರಹ ಇಡುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಹಾಗಾಗಿ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ.
- ಗಣೇಶನ ಆಶೀರ್ವಾದ ಎಲ್ಲಾ ಕೆಲಸಕ್ಕೂ ಮುಖ್ಯ. ಅಲ್ಲದೆ ಗಣೇಶ ಪ್ರಥಮ ಪೂಜಿತನಾಗಿರುವುದರಿಂದ ಅವನ ವಿಗ್ರಹ ಅಥವಾ ಫೋಟೋ ಮನೆಯಲ್ಲಿ ಇರಬೇಕು. ಜೊತೆಗೆ ಪ್ರತಿನಿತ್ಯವೂ ತಪ್ಪದೆ ಪೂಜೆ ಮಾಡಬೇಕು.
- ಮನೆಯ ದೇವರ ಕೋಣೆಯಲ್ಲಿ ಕುಳಿತುಕೊಂಡಿರುವ ಲಕ್ಷ್ಮೀ ದೇವಿಯ ವಿಗ್ರಹ ಇದ್ದರೆ ಒಳ್ಳೆಯದು. ಇದಕ್ಕೆ ಶುಕ್ರವಾರದ ದಿನ ಕಮಲದ ಹೂವುಗಳನ್ನು ಅರ್ಪಿಸಿ. ಗಣೇಶನ ಬಲಭಾಗದಲ್ಲಿ ಲಕ್ಷ್ಮೀಯ ವಿಗ್ರಹವನ್ನು ಇರಿಸಿ.
- ಕುಬೇರ ದೇವನನ್ನು ಸಂಪತ್ತಿನ ಅಧಿಪತಿ ಎಂದು ಕರೆಯಲಾಗುತ್ತದೆ. ಕುಬೇರ ದೇವರ ವಿಗ್ರಹವನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇರಿಸಿ. ಅಲ್ಲದೆ, ನಿಮ್ಮ ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿದ್ದರೆ ಈ ನಿಯಮ ಅನುಸರಿಸುವುದು ತುಂಬಾ ಒಳ್ಳೆಯದು. ನಿಮ್ಮ ಮನೆಯಯಲ್ಲಿ ಹಣದ ಹೊಳೆಯೇ ಹರಿಯುತ್ತದೆ.
- ಈ ಮೂರು ದೇವ, ದೇವತೆಗಳ ವಿಗ್ರಹಗಳು ನಿಮ್ಮ ದೇವರ ಕೋಣೆಯಲ್ಲಿ ಇದ್ದಲ್ಲಿ ನಿಮ್ಮ ಇಡೀ ಕುಟುಂಬ ಸಂತೋಷದ ಜೀವನವನ್ನು ನಡೆಸುತ್ತದೆ. ತಪ್ಪದೆ ಈ ವಿಗ್ರಹ ಅಥವಾ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ