Astrology: ಈ ನಾಲ್ಕು ರಾಶಿಯವರು ಸಂಗಾತಿಗಳಾಗಿ ಬಂದರೆ ಅದೃಷ್ಟ ಖುಲಾಯಿಸುತ್ತೆ!

ಬದುಕಿನಲ್ಲಿ ನಿಮಗೆ ಪ್ರೀತಿಯ ಸಂಗಾತಿಯ ಸಿಕ್ಕರೆ, ನಿಮ್ಮ ಜೋಡಿ ಅನ್ಯೋನ್ಯವಾಗಿದ್ದರೆ ಜೀವನದ ಪ್ರತಿಯೊಂದು ಘಟ್ಟವೂ ಸುಲಭವಾಗಿರುತ್ತದೆ. ಇದಕ್ಕೆ ಪೂರಕವೆಂಬಂತೆ ಜೀವನವನ್ನು ಚೆನ್ನಾಗಿ ಮುನ್ನೆಡೆಸಲು ಅತ್ಯುತ್ತಮ ಸಂಗಾತಿಯಾಗಬಹುದಾದ ನಾಲ್ಕು ರಾಶಿಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

Astrology: ಈ ನಾಲ್ಕು ರಾಶಿಯವರು ಸಂಗಾತಿಗಳಾಗಿ ಬಂದರೆ ಅದೃಷ್ಟ ಖುಲಾಯಿಸುತ್ತೆ!
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 11, 2024 | 5:44 PM

ಪ್ರತಿಯೊಂದು ರಾಶಿಯವರೂ ಕೂಡ ತಮ್ಮದೇ ಆದ ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ. ಕೆಲವರಲ್ಲಿ ಉದ್ಯೋಗ ಬಲ ಚೆನ್ನಾಗಿದ್ದರೆ ಇನ್ನು ಕೆಲವರಲ್ಲಿ ಬದುಕನ್ನು ಚೆನ್ನಾಗಿ ಮುನ್ನಡೆಸುವ ಕಲೆ ಕರಗತವಾಗಿರುತ್ತದೆ. ಮತ್ತೊಂದಿಷ್ಟು ರಾಶಿಯವರು ಒಳ್ಳೆಯ ಬಾಳ ಸಂಗಾತಿಯಾಗುತ್ತಾರೆ. ಬದುಕಿನಲ್ಲಿ ನಿಮಗೆ ಪ್ರೀತಿಯ ಸಂಗಾತಿಯ ಸಿಕ್ಕರೆ, ನಿಮ್ಮ ಜೋಡಿ ಅನ್ಯೋನ್ಯವಾಗಿದ್ದರೆ ಜೀವನದ ಪ್ರತಿಯೊಂದು ಘಟ್ಟವೂ ಸುಲಭವಾಗಿರುತ್ತದೆ. ಇದಕ್ಕೆ ಪೂರಕವೆಂಬಂತೆ ಜೀವನವನ್ನು ಚೆನ್ನಾಗಿ ಮುನ್ನೆಡೆಸಲು ಅತ್ಯುತ್ತಮ ಸಂಗಾತಿಯಾಗಬಹುದಾದ ನಾಲ್ಕು ರಾಶಿಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಕರ್ಕ ರಾಶಿ: ಕರ್ಕಾಟಕ ರಾಶಿಯ ಜನರು ಯಾವುದೇ ಸಂಬಂಧವಾಗಲಿ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಬಯಸುತ್ತಾರೆ. ಅವರ ಅದ್ಭುತ ಸ್ವಭಾವದಲ್ಲಿ ತಮ್ಮ ಸಂಗಾತಿಗೆ ಮೊದಲ ಸ್ಥಾನ ನೀಡಿ, ಹೆಚ್ಚಿನ ಪ್ರಾಮುಖ್ಯತೆ ನೀಡಿರುತ್ತಾರೆ. ತನ್ನ ಸಂಗಾತಿಯ ಭಾವನೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಅವರು ಉತ್ತಮ ಜೀವನ ಸಂಗಾತಿಯಾಗಲು ಅರ್ಹರು ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ.

ತುಲಾ ರಾಶಿ – ಈ ರಾಶಿಯವರು ಪ್ರತಿಯೊಂದು ಸಂಬಂಧದಲ್ಲಿ ಸಮಾನವಾದ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಅವರ ಜೀವನ ಸಂಗಾತಿಯೊಂದಿಗಿನ ಸಂಬಂಧವೂ ಕೂಡ ಬಹಳ ಯಶಸ್ವಿಯಾಗುತ್ತದೆ. ಬಾಳ ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಾದಗಳಿದ್ದರೂ ಸಹ, ಅದನ್ನು ತಿಳುವಳಿಕೆಯಿಂದ ಪರಿಹರಿಸುತ್ತಾರೆ. ಜೊತೆಗೆ ಉತ್ತಮ ಸಂಗಾತಿ ಎಂದು ಅನಿಸಿಕೊಂಡಿರುತ್ತಾರೆ.

ಇದನ್ನೂ ಓದಿ: ಮನೆಯಲ್ಲಿ ತುಳಸಿ ಗಿಡವಿದ್ದರೆ, ನವರಾತ್ರಿಯ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ!

ವೃಶ್ಚಿಕ ರಾಶಿ: ಈ ರಾಶಿಯ ಜನರು ತುಂಬಾ ಭಾವನಾತ್ಮಕ ಮತ್ತು ನಿಷ್ಠಾವಂತರಾಗಿರುತ್ತಾರೆ. ಅವರ ಸಂಗಾತಿಯ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ಜೊತೆಗೆ ಅವರು ತಮ್ಮ ಪ್ರೀತಿಗಾಗಿ ಯಾವುದೇ ರೀತಿಯ ಕಷ್ಟ ಬಂದರೂ ಕೂಡ ಹೋರಾಡಲು ಸಿದ್ಧರಾಗಿರುತ್ತಾರೆ. ಅವರ ಜೀವನ ಸಂಗಾತಿಯೊಂದಿಗಿನ ಸಂಬಂಧ ತುಂಬಾ ಬಲವಾಗಿರುತ್ತದೆ. ತಮ್ಮ ಸಂಗಾತಿಯ ಮೇಲಿನ ಅವರ ಪ್ರೀತಿಗೆ ಯಾವುದೇ ಮಿತಿಯಿರುವುದಿಲ್ಲ.

ಧನು ರಾಶಿ: ಈ ರಾಶಿಯವರು ತಮ್ಮ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುತ್ತಾರೆ. ಈ ಜನರು ತಮ್ಮ ಪ್ರೇಮ ಸಂಬಂಧಗಳನ್ನು ಉತ್ತಮವಾಗಿ ಕಾಪಾಡಿಕೊಳ್ಳುತ್ತಾರೆ. ನಿಮ್ಮಸಂಗಾತಿ ಮಕರ ರಾಶಿಯವರಾಗಿದ್ದರೆ ಇನ್ನು ಉತ್ತಮ. ಅವರು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ನೋಡಿಕೊಳ್ಳುತ್ತಾರೆ. ಜೀವನದ ಪ್ರತಿಯೊಂದು ಹಂತದಲ್ಲೂ ನಿಮ್ಮನ್ನು ಬೆಂಬಲಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:05 pm, Thu, 11 April 24

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ