ಮನೆಯಲ್ಲಿ ತುಳಸಿ ಗಿಡವಿದ್ದರೆ, ನವರಾತ್ರಿಯ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ!
ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ರೂಪವೆಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡವಿದ್ದರೆ, ನವರಾತ್ರಿಯ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ನವದುರ್ಗೆಯ ಪೂಜೆಯ ಜೊತೆಗೆ ನೀವು ತುಳಸಿಯನ್ನು ಹೇಗೆ ಪೂಜಿಸಬೇಕು? ಯಾವ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು? ವಿವರವಾದ ಮಾಹಿತಿ ಇಲ್ಲಿದೆ.
ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ರೂಪವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಹಿಂದೂ ಧರ್ಮಿಯರ ಮನೆಯಲ್ಲಿ ತುಳಸಿ ಗಿಡವನ್ನು ಪೂಜೆ ಮಾಡುತ್ತಾರೆ. ಅದೇ ರೀತಿ ಈ ನವರಾತ್ರಿಯ ಸಮಯದಲ್ಲಿ ತುಳಸಿ ಗಿಡವನ್ನು ಸಹ ಪೂಜಿಸಲಾಗುತ್ತದೆ. ನವದುರ್ಗೆಯ ಪೂಜೆಯ ಜೊತೆಗೆ ನೀವು ತುಳಸಿಯನ್ನು ಹೇಗೆ ಪೂಜಿಸಬೇಕು? ಯಾವ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು? ವಿವರವಾದ ಮಾಹಿತಿ ಇಲ್ಲಿದೆ.
ನವರಾತ್ರಿಯ ಸಮಯದಲ್ಲಿ ತುಳಸಿಯನ್ನು ಪೂಜಿಸುವುದು ಹೇಗೆ?
ಈ ಸಮಯದಲ್ಲಿ ತುಳಸಿ ಗಿಡವಿರುವ ಸ್ಥಳವನ್ನು ಸ್ವಚ್ಛ ಮಾಡಿ, ದುರ್ಗಾ ದೇವಿಯ ಮುಂದೆ ದೀಪ ಹಚ್ಚುವುದರ ಜೊತೆಗೆ ತುಳಸಿ ಗಿಡದ ಬಳಿಯೂ ಒಂದು ದೀಪವನ್ನು ಹಚ್ಚಿಡಿ. ಮನೆಯಲ್ಲಿ ತುಳಸಿ ಗಿಡವಿಲ್ಲದಿದ್ದರೆ, ನವರಾತ್ರಿಯ ಸಮಯದಲ್ಲಿ ನೀವು ಗಿಡವನ್ನು ಖರೀದಿಸಿ ಮನೆಗೆ ತಂದು ಪೂಜಿಸುವುದರಿಂದ ವಾಸ್ತುವಿಗೆ ಸಂಬಂಧಿಸಿದ ದೋಷಗಳು ಪರಿಹಾರವಾಗುತ್ತದೆ. ಮನೆಯಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.
ಇದನ್ನೂ ಓದಿ: ಹೆಬ್ಬೆರಳು ಹೀಗಿದ್ದರೆ ಎಂದಿಗೂ ಹಣದ ಕೊರತೆ ಬರುವುದಿಲ್ಲವಂತೆ!
ತುಳಸಿ ಪೂಜೆಯ ಪ್ರಯೋಜನಗಳೇನು?
ನವರಾತ್ರಿಯ ಸಮಯದಲ್ಲಿ ತುಳಸಿಯ ಮುಂದೆ ದೀಪ ಹಚ್ಚಿಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದಿಲ್ಲ. ಜೊತೆಗೆ ಲಕ್ಷ್ಮೀ ದೇವಿ ಮತ್ತು ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಆದ್ದರಿಂದ ಪ್ರತಿದಿನ ತುಳಸಿಗೆ ಧೂಪದ್ರವ್ಯ ದೀಪವನ್ನು ಮರೆಯದೆ ಹಚ್ಚಬೇಕು.
ನವರಾತ್ರಿ ಸಮಯದಲ್ಲಿ ತುಳಸಿ ಪೂಜೆ ಮಾಡುವುದರಿಂದ, ಮನೆಯಲ್ಲಿ ಯಾವುದಕ್ಕೂ ಬಡತನ ಇರುವುದಿಲ್ಲ, ಆರೋಗ್ಯ ಚೆನ್ನಾಗಿರುತ್ತದೆ. ಇದರೊಂದಿಗೆ, ನವರಾತ್ರಿಯ ಸಮಯದಲ್ಲಿ ಎಲೆಗಳನ್ನು ಮುರಿಯಬೇಡಿ ಆದರೆ ಬಿದ್ದ ಎಲೆಗಳನ್ನು ಬಳಸಬಹುದು.
ನವರಾತ್ರಿಯ ಸಮಯದಲ್ಲಿ ಗುರುವಾರದಂದು, ತುಳಸಿ ಗಿಡಕ್ಕೆ ನೀರು ಮತ್ತು ಹಸಿ ಹಾಲನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಜೊತೆಗೆ ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ಸಂಜೆ ತುಳಸಿ ಗಿಡದ ಮುಂದೆ ದೀಪ ಹಚ್ಚಿಡಿ, ಇದರಿಂದ ದುಷ್ಟ ಶಕ್ತಿಗಳು ಎಂದಿಗೂ ಮನೆಯೊಳಗೆ ಪ್ರವೇಶಿಸುವುದಿಲ್ಲ.
ಮನೆಯಲ್ಲಿರುವ ಜನರು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ತುಳಸಿಯ ಮುಂದೆ ದೀಪ ಹಚ್ಚಿಡಿ. ಇದರಿಂದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ