Samudrika Shastra: ಹೆಬ್ಬೆರಳು ಹೀಗಿದ್ದರೆ ಎಂದಿಗೂ ಹಣದ ಕೊರತೆ ಬರುವುದಿಲ್ಲವಂತೆ!

ಹಸ್ತಮುದ್ರಿಕಾ ಶಾಸ್ತ್ರದ ಪ್ರಕಾರ, ನಿಮ್ಮ ದೇಹದ ಭಾಗಗಳು ವ್ಯಕ್ತಿತ್ವದ ಅನೇಕ ರಹಸ್ಯಗಳನ್ನು ಹೇಳುತ್ತವೆ. ಕೈಯಲ್ಲಿರುವ ಹೆಬ್ಬೆರಳು ಸಹ ನಮ್ಮ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಹೆಬ್ಬೆರಳಿನ ಆಕಾರ ಮತ್ತು ರಚನೆಯಿಂದ ವ್ಯಕ್ತಿತ್ವವನ್ನು ಹೇಳಲಾಗುತ್ತದೆ ಎಂದರೆ ನಂಬುತ್ತೀರಾ? ಹಾಗಾದರೆ ಇದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Samudrika Shastra: ಹೆಬ್ಬೆರಳು ಹೀಗಿದ್ದರೆ ಎಂದಿಗೂ ಹಣದ ಕೊರತೆ ಬರುವುದಿಲ್ಲವಂತೆ!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2024 | 3:13 PM

ಹಸ್ತಮುದ್ರಿಕಾ ಶಾಸ್ತ್ರದ ಪ್ರಕಾರ, ನಿಮ್ಮ ದೇಹದ ಭಾಗಗಳು ವ್ಯಕ್ತಿತ್ವದ ಅನೇಕ ರಹಸ್ಯಗಳನ್ನು ಹೇಳುತ್ತವೆ. ನಮ್ಮ ಅಂಗೈ ರೇಖೆಯಿಂದ ಹಿಡಿದು ಕಣ್ಣಿನ ಆಕಾರದವರೆಗೆ ಎಲ್ಲದರಿಂದಲೂ ನಾವು ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಅದೇ ರೀತಿ, ಕೈಯಲ್ಲಿರುವ ಹೆಬ್ಬೆರಳು ಸಹ ನಮ್ಮ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಹೆಬ್ಬೆರಳಿನ ಆಕಾರ ಮತ್ತು ರಚನೆಯಿಂದ ವ್ಯಕ್ತಿತ್ವವನ್ನು ಹೇಳಲಾಗುತ್ತದೆ ಎಂದರೆ ನಂಬುತ್ತೀರಾ? ಹಾಗಾದರೆ ಇದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೆಬ್ಬೆರಳು ಕೆಳಭಾಗದಲ್ಲಿ ಅಗಲವಾಗಿದ್ದು ಮೇಲ್ಭಾಗದಲ್ಲಿ ತೆಳುವಾಗಿದ್ದರೆ ಅಂತಹ ಜನರ ವ್ಯಕ್ತಿತ್ವ ಬಹಳ ಆಕರ್ಷಕವಾಗಿರುತ್ತದೆ ಎಂದು ಹೇಳಲಾಗುತ್ತದೆ. ತಮ್ಮ ಮಾತಿನಿಂದಲೇ ಎಲ್ಲರನ್ನೂ ಸೆಳೆಯುತ್ತಾರೆ. ಸ್ನೇಹಿತರು ಮತ್ತು ಸ್ನೇಹವನ್ನು ಕಾಪಾಡಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಆದರೆ ಸೋಮಾರಿತನ ಮಾತ್ರ ಇವರನ್ನು ಬಿಡುವುದಿಲ್ಲ.

ಹೆಬ್ಬೆರಳು ಮೇಲಿನಿಂದ ಕೆಳಕ್ಕೆ ಒಂದೇ ಗಾತ್ರದಲ್ಲಿದ್ದರೆ ಅತ್ಯಂತ ಕಠಿಣ ಪರಿಶ್ರಮಿಗಳಾಗಿರುತ್ತಾರೆ. ತಮ್ಮದೇ ಆದ ವ್ಯವಹಾರವನ್ನು ನೋಡಿಕೊಳ್ಳುವಲ್ಲಿ ಯಶಸ್ವಿಗಳಾಗುತ್ತಾರೆ. ಇವರಲ್ಲಿ ಪ್ರಾಮಾಣಿಕತೆ ಹೇರಳವಾಗಿರುತ್ತದೆ. ಜೊತೆಗೆ ಇವರಿಗೆ ಕಲೆಯ ಕಡೆಗೆ ಒಲವಿರುತ್ತದೆ. ಆದರೆ ಇವರು ಜನರೊಂದಿಗೆ ಬೆರೆಯುವುದು ತುಂಬಾ ಕಡಿಮೆ.

ಗಾತ್ರದಲ್ಲಿ ಚಿಕ್ಕದಾದ ಹೆಬ್ಬೆರಳನ್ನು ಹೊಂದಿರುವವರು ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಎಲ್ಲಾ ವಿಷಯಗಳಲ್ಲಿಯೂ ದೃಢನಿಶ್ಚಯ ಹೊಂದಿರುವವರಾಗಿರುತ್ತಾರೆ. ಜೊತೆಗೆ ಪ್ರತಿ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಅದೇ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪ್ರತಿಯೊಂದು ಸಂಬಂಧವನ್ನು ಕೂಡ ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ತಿಳಿದಿರುತ್ತದೆ.

ಹೆಬ್ಬೆರಳು ಹಿಂದಕ್ಕೆ ಬಾಗಿದ ರೀತಿಯಲ್ಲಿರುವ ಜನರು ಉದಾರ ಸ್ವಭಾವದವರಾಗಿರುತ್ತಾರೆ. ಯಾವಾಗಲೂ ಇತರರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಅವರ ಸ್ವಭಾವದಿಂದಾಗಿ, ಸಾಮಾಜಿಕ ಮಟ್ಟದಲ್ಲಿಯೂ ಒಳ್ಳೆಯ ಹೆಸರು ಮಾಡುತ್ತಾರೆ. ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಾರೆ.

ಇದನ್ನೂ ಓದಿ: ನಿಮ್ಮ ಮಗುವಿಗೆ ಶ್ರೀಕೃಷ್ಣನಿಗೆ ಪ್ರೀಯವಾದ ಹೆಸರಿಡಿ! ಇಲ್ಲಿದೆ 10 ವಿಶಿಷ್ಟ ಹೆಸರುಗಳು

ಹೆಬ್ಬೆರಳು ತಳದಲ್ಲಿ ತೆಳುವಾಗಿ ಮೇಲ್ಭಾಗದಲ್ಲಿ ದಪ್ಪವಾಗಿರುವ ಜನರು ಏಕಾಂತ ಜೀವನವನ್ನು ಬಯಸುತ್ತಾರೆ. ಅಂತಹ ಜನರು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ.ಹೆಚ್ಚು ಮಾತನಾಡುವುದಿಲ್ಲ. ಆದರೆ ಅವರಿಗೆ ಹತ್ತಿರವಾದ ಜನರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿರುತ್ತಾರೆ.

ಉದ್ದವಾಗಿರುವ ಹೆಬ್ಬೆರಳನ್ನು ಹೊಂದಿರುವ ಜನರು ತುಂಬಾ ಆಕರ್ಷಕವಾಗಿರುತ್ತಾರೆ. ಪ್ರತಿಯೊಂದು ಸನ್ನಿವೇಶವನ್ನು ಸುಲಭವಾಗಿ ನಿಭಾಯಿಸುತ್ತಾರೆ. ಅದೇ ರೀತಿ ಇವರಿಗೆ ಹಣದ ಕೊರತೆ ಎಂದಿಗೂ ಬರುವುದಿಲ್ಲ ಎನ್ನುತ್ತದೆ ಹಸ್ತಮುದ್ರಿಕಾ ಶಾಸ್ತ್ರ.

ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ಟಿವಿ9 ಇದನ್ನು ಖಚಿತಪಡಿಸುವುದಿಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!