AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂಜೆಯಲ್ಲಿ ಕರ್ಪೂರ ಯಾಕೆ ಬಳಸಲಾಗುತ್ತದೆ? ವಿಡಿಯೋ ನೋಡಿ

ಪೂಜೆಯಲ್ಲಿ ಕರ್ಪೂರ ಯಾಕೆ ಬಳಸಲಾಗುತ್ತದೆ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Apr 10, 2024 | 6:44 AM

Share

ಕರ್ಪೂರ ದಿಂದ ಆರತಿ ಬೆಳಗುವುದು ಕೂಡ ಒಂದು ಸಂಪ್ರದಾಯವಾಗಿದ್ದು, ಇದನ್ನು ಯುಗಯುಗಗಳಿಂದಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಹಾಗಾದರೆ ಕರ್ಪೂರವನ್ನು ಪೂಜೆಯಲ್ಲಿ ಬಳಸುವುದಾರೂ ಯಾಕೆ..? ಇದರ ತಾರ್ಕಿಕ ಹಾಗೂ ವೈಜ್ಞಾನಿಕ ಅಂಶಗಳನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ....

ಕರ್ಪೂರ ಗೌರಮ್ಮ ಕರುಣಾವತಾರ |ಸಂಸಾರ ಸಾರಂ ಭುಜಗೇಂದ್ರ ಹರಂ ||ಸದಾ ವಸಂತಂ ಹೃದಯಾರವಿಂದೆ | ಭಾವಂ ಭವಾನಿ ಸಹಿತಂ ನಮಾಮಿ. ಈ ಮಂತ್ರವನ್ನು ಮನೆಯಲ್ಲಿ ಪೂಜೆ ಮಾಡುವಾಗ ಕರ್ಪೂರ ಆರತಿ ಬೆಳಗುವ ಸಮಯದಲ್ಲಿ ಹೇಳಲಾಗುತ್ತದೆ. ಹಲವಾರು ಆಚರಣೆ ಹಾಗೂ ಸಂಪ್ರದಾಯಗಳಿಂದ ಕೂಡಿದ ಪವಿತ್ರ ಧರ್ಮ ಹಿಂದೂ ಧರ್ಮ. ಈ ಧರ್ಮದಲ್ಲಿ ಆಚರಿಸಲಾಗುವ ಪ್ರತಿಯೊಂದು ಆಚರಣೆಯೂ ಕೂಡ ತಾರ್ಕಿಕ ಅಂಶವನ್ನು ಒಳಗೊಂಡಿದೆ. ಅದರೆ ಕೆಲವರಿಗೆ ಈ ಆಚರಣೆಗಳನ್ನು ಯಾಕೆ ಮಾಡಲಾಗತ್ತದೆ ಎನ್ನುವುದರ ಅರಿವಿರುವುದಿಲ್ಲ. ಹಿಂದೂ ಧರ್ಮದಲ್ಲಿ ಪೂಜಾ ಸಮಯದಲ್ಲಿ ಕರ್ಪೂರಕ್ಕೆ ಬಹಳ ಮಹತ್ವ ಕೊಡುತ್ತಾರೆ. ಮಂಗಳಾರತಿ ಸಮಯದಲ್ಲಿ ಹೆಚ್ಚಾಗಿ ಕರ್ಪೂರವನ್ನೇ ಬಳಸುತ್ತಾರೆ. ಪೂಜೆಯ ವೇಳೆ ಅಥವಾ ಆರತಿ ಬೆಳಗುವ ಸಮಯದಲ್ಲಿ ಕರ್ಪೂರವನ್ನು ಯಾಕೆ ಉಪಯೋಗಿಸಲಾಗುತ್ತದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಕರ್ಪೂರ ದಿಂದ ಆರತಿ ಬೆಳಗುವುದು ಕೂಡ ಒಂದು ಸಂಪ್ರದಾಯವಾಗಿದ್ದು, ಇದನ್ನು ಯುಗಯುಗಗಳಿಂದಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಹಾಗಾದರೆ ಕರ್ಪೂರವನ್ನು ಪೂಜೆಯಲ್ಲಿ ಬಳಸುವುದಾರೂ ಯಾಕೆ..? ಇದರ ತಾರ್ಕಿಕ ಹಾಗೂ ವೈಜ್ಞಾನಿಕ ಅಂಶಗಳನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ..