ಶಿವಣ್ಣನಿಗೆ ಮಹಿಳಾಭಿಮಾನಿಯ ಸಿಹಿ ಮುತ್ತು; ಹೇಗಿತ್ತು ಹ್ಯಾಟ್ರಿಕ್ ಹೀರೋ ಪ್ರತಿಕ್ರಿಯೆ?
ನಟ ಶಿವರಾಜ್ಕುಮಾರ್ ಅವರು ಪತ್ನಿ ಗೀತಾ ಪರವಾಗಿ ಶಿವಮೊಗ್ಗದಲ್ಲಿ ಮತ ಕೇಳುತ್ತಿದ್ದಾರೆ. ಹೋದಲೆಲ್ಲ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಇಂದು (ಏ.9) ಮಹಿಳಾಭಿಮಾನಿಯೊಬ್ಬರು ಶಿವಣ್ಣನ ಜತೆ ಸೆಲ್ಫಿ ತೆಗೆದುಕೊಂಡ ಬಳಿಕ ಅಭಿಮಾನದಿಂದ ಸಿಹಿ ಮುತ್ತು ನೀಡಿದ್ದಾರೆ.
ಶಿವರಾಜ್ಕುಮಾರ್ (Shivarajkumar) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ರಾಜ್ಯಾದ್ಯಂತ ಅವರನ್ನು ಇಷ್ಟಪಡುವ ಜನರು ಇದ್ದಾರೆ. ಚಿಕ್ಕ ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ‘ಹ್ಯಾಟ್ರಿಕ್ ಹೀರೋ’ ಅಚ್ಚುಮೆಚ್ಚು. ಸದ್ಯ ಶಿವಣ್ಣ ಶಿವಮೊಗ್ಗದಲ್ಲಿ ಜನರನ್ನು ಭೇಟಿ ಮಾಡುತ್ತಿದ್ದಾರೆ. ಅವರ ಪತ್ನಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಶಿವರಾಜ್ಕುಮಾರ್ ಅವರು ಪತ್ನಿಯ ಪರವಾಗಿ ಮತ ಕೇಳುತ್ತಿದ್ದಾರೆ. ಹೋದಲೆಲ್ಲ ಅವರನ್ನು ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಇಂದು (ಏಪ್ರಿಲ್ 9) ಮಹಿಳಾಭಿಮಾನಿಯೊಬ್ಬರು ಶಿವಣ್ಣನ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಅಭಿಮಾನದಿಂದ ಸಿಹಿ ಮುತ್ತು ನೀಡಿದ್ದಾರೆ. ಚುನಾವಣಾ ಪ್ರಚಾರದ ಬ್ಯುಸಿ ನಡುವೆಯೂ ಶಿವಣ್ಣ (Shivanna) ಕೂಲ್ ಆಗಿ ನಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಅಭಿಮಾನಿಯೊಬ್ಬರ ಮನೆಯಲ್ಲಿ ಹೋಳಿಗೆ ಊಟ ಸವಿದರು. ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್ ಪಡೆದು ಎಲೆಕ್ಷನ್ ಕ್ಯಾಂಪೇನ್ನಲ್ಲಿ ಶಿವಣ್ಣ ಭಾಗಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.