ಅಭಿಮಾನಿಗಳಿಗಾಗಿ ಸಿನಿಮಾ ಡೈಲಾಗ್ ಹೊಡೆದು, ಸಾಂಗ್ ಹೇಳಿದ ಶಿವಣ್ಣ

ಅಭಿಮಾನಿಗಳಿಗಾಗಿ ಸಿನಿಮಾ ಡೈಲಾಗ್ ಹೊಡೆದು, ಸಾಂಗ್ ಹೇಳಿದ ಶಿವಣ್ಣ

ರಾಜೇಶ್ ದುಗ್ಗುಮನೆ
|

Updated on: Apr 10, 2024 | 8:12 AM

ಶಿವರಾಜ್​ಕುಮಾರ್ ಅವರು ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಅವರು ಪತ್ನಿ ಗೀತಾ ಪರ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಶಿವಣ್ಣ ಅವರು ಪ್ರಚಾರ ಮಾಡಿದ್ದಾರೆ. ಈ ವೇಳೆ ಅವರು ಸಿನಿಮಾ ಡೈಲಾಗ್ ಹೇಳಿ, ಸಾಂಗ್ ಕೂಡ ಹಾಡಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ಅವರು ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಅವರು ಪತ್ನಿ ಗೀತಾ ಪರ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೀತಾ ಅವರು ಶಿವಮೊಗ್ಗ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ಪರ ಕಣಕ್ಕೆ ಇಳಿದಿದ್ದಾರೆ. ಶಿವಮೊಗ್ಗದ ಪ್ರತಿ ಪ್ರದೇಶಕ್ಕೂ ತೆರಳಿ ಶಿವಣ್ಣ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರು ಮತ ಕೇಳುವುದರ ಜೊತೆಗೆ ಜರನ್ನು ರಂಜಿಸೋ ಕೆಲಸವನ್ನೂ ಮಾಡುತ್ತಿದ್ದಾರೆ. ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಶಿವಣ್ಣ ಅವರು ಪ್ರಚಾರ ಮಾಡಿದ್ದಾರೆ. ಈ ವೇಳೆ ಅವರು ಸಿನಿಮಾ ಡೈಲಾಗ್ ಹೇಳಿ, ಸಾಂಗ್ ಕೂಡ ಹಾಡಿದ್ದಾರೆ. ಯುಗಾದಿ ಸಂದರ್ಭದಲ್ಲಿ ಅಭಿಮಾನಿಯ ಮನೆಯಲ್ಲಿ ಅವರು ಊಟ ಮಾಡಿದ ವಿಡಿಯೋ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ