ಕಲಬುರಗಿ: ಗರ್ಭಗುಡಿ ಹೊಕ್ಕ ಕಳ್ಳನೊಬ್ಬ ದೇವಿ ವಿಗ್ರಹದ ಮೇಲಿನ ಒಡವೆ ಮತ್ತು ಹುಂಡಿ ಎತ್ತಿಕೊಂಡು ಪರಾರಿ

ಕಲಬುರಗಿ: ಗರ್ಭಗುಡಿ ಹೊಕ್ಕ ಕಳ್ಳನೊಬ್ಬ ದೇವಿ ವಿಗ್ರಹದ ಮೇಲಿನ ಒಡವೆ ಮತ್ತು ಹುಂಡಿ ಎತ್ತಿಕೊಂಡು ಪರಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 10, 2024 | 11:08 AM

ಕಳ್ಳನೊಬ್ಬ ಗುಡಿಯ ಮುಖ್ಯ ಬಾಗಿಲಿನ ಬೀಗ ಮುರಿದು ಗರ್ಭಗುಡಿ ಪ್ರವೇಶಿಸಿ ದೇವಿ ವಿಗ್ರಹದ ಮೇಲಿದ್ದ ಸಮಾರು ₹ 5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಅನಾಮತ್ತಾಗಿ ಎತ್ತಿ, ಹುಂಡಿಪೆಟ್ಟಿಗೆಯನ್ನೂ ತೆಗೆದುಕೊಂಡು ಪರಾರಿಯಾಗುವ ದೃಶ್ಯ ಗರ್ಭಗುಡಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.

ಕಲಬುರಗಿ: ಕಳ್ಳರಿಗೆ ದೇವ ದೇವತೆಯರ ಬಗ್ಗೆ ಭಕ್ತಿಯಿರದಿದ್ದರೆ ಭಯ ಎಲ್ಲಿಂದ ಹುಟ್ಟೀತು? ಕಳ್ಳರು ಅಂದಕಾಲತ್ತಿಲ್ ದೇವಸ್ಥಾನಗಳನ್ನು (temples) ಟಾರ್ಗೆಟ್ ಮಾಡಿಕೊಂಡು ಹುಂಡಿಗಳನ್ನು ಒಡೆದು ಹಣ ಲಪಟಾಯಿಸುವುದು, ದೇವರ ವಿಗ್ರಹ ಮೇಲಿರುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುವುದು ಅಗಲೇ ಹೇಳಿದಂತೆ ಹೊಸ ವಿಷಯವೇನಲ್ಲ. ಇಲ್ನೋಡಿ, ಕಲಬುರಗಿ ನಗರದಿಂದ (Kalaburagi) ಅಲ್ಪ ದೂರದಲ್ಲಿರುವ ಕಾಳನೂರು ತಾಂಡಾದಲ್ಲಿ (Kalanur Taanda) ಕಳ್ಳನೊಬ್ಬ ಗುಡಿಯ ಮುಖ್ಯ ಬಾಗಿಲಿನ ಬೀಗ ಮುರಿದು ಗರ್ಭಗುಡಿ ಪ್ರವೇಶಿಸಿ ದೇವಿ ವಿಗ್ರಹದ ಮೇಲಿದ್ದ ಸಮಾರು ₹ 5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಅನಾಮತ್ತಾಗಿ ಎತ್ತಿ, ಹುಂಡಿಪೆಟ್ಟಿಗೆಯನ್ನೂ ತೆಗೆದುಕೊಂಡು ಪರಾರಿಯಾಗುವ ದೃಶ್ಯ ಗರ್ಭಗುಡಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಕಳ್ಳ ತನ್ನ ಮುಖವನ್ನು ಬೆಡ್ ಶೀಟ್ ಒಂದರಿಂದ ಕವರ್ ಮಾಡಿರುವುದರಿಂದ ಗುರುತು ಸಿಗಲಾರ. ಅವನಿಗೆ ಸಿಸಿಟಿವಿ ಇರೋ ವಿಷಯ ಗೊತ್ತಿದ್ದಿರಬಹುದು. ಆದರೆ ಅವನ ಚಲನವಲನ ಸೆರೆಯಾಗಿರುವುದರಿಂದ ಟ್ರೇಸ್ ಮಾಡುವುದು ಪೊಲೀಸರಿಗೆ ಕಷ್ಟವಾಗಲಿಕ್ಕಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿಕ್ಕಬಳ್ಳಾಪುರದಲ್ಲಿ ಹಾಡಹಗಲೆ ಜ್ಯೂವೆಲರಿ ಅಂಗಡಿಗೆ ನುಗ್ಗಿದ ಕಳ್ಳನೊಬ್ಬ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದು ಹೇಗೆ?