ಕೃಷಿ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕರ ಕೊಡುಗೆಯಾದರೂ ಏನು? ಹೆಚ್ ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಜನರಿಗೆ ಕುಡಿಯುಲು ನೀರಿಲ್ಲ, ಮಂಡ್ಯದಲ್ಲಿ ಬೆಳೆಗಳೆಲ್ಲ ಒಣಗಿ ನಾಶವಾಗಿವೆ, ರಾಜ್ಯದೆಲ್ಲೆಡೆ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ ಇದಕ್ಕೆಲ್ಲ ಯಾರು ಕಾರಣ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಬರ ಪರಿಹಾರ ನಿಧಿಯ ಬಗ್ಗೆ ಮಾತಾಡಿದ ಅವರು ಕೇಂದ್ರ ಹಣಕಾಸು ಆಯೋಗ ನೀಡುವ ಮಾರ್ಗಸೂಚಿಗಳ ಆಧಾರದಲ್ಲಿ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಹಣ ಬಿಡುಗಡೆ ಮಾಡುತ್ತವೆ ಎಂದು ಅವರು ಹೇಳಿದರು,

ಕೃಷಿ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕರ ಕೊಡುಗೆಯಾದರೂ ಏನು? ಹೆಚ್ ಡಿ ಕುಮಾರಸ್ವಾಮಿ
|

Updated on: Apr 10, 2024 | 12:22 PM

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಚುನಾಯಿತನಾದರೆ ಎನ್ ಡಿಎ ಸರ್ಕಾರದಲ್ಲಿ (NDA government) ಕೃಷಿ ಸಚಿವನಾಗುವೆ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೊಂಡಿದ್ದಕ್ಕೆ ಕಾಂಗ್ರೆಸ್ ನಾಯಕರು ಗೇಲಿ ಮಾಡಿದ್ದನ್ನು ನಾವು ವರದಿ ಮಾಡಿದ್ದೇವೆ. ಅದಕ್ಕೆ ಇಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಕೃಷಿ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕರ ಕೊಡುಗೆ ಏನು? ಮಹಾದಾಯಿ ಯೋಜನೆಯನ್ನು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ (BJP-JDS coalition government) ಅಧಿಕಾರದಲ್ಲಿದ್ದಾಗ ಚಾಲನೆ ಕೊಟ್ಟಿದ್ದು, ತುಂಗಭದ್ರ ಮೇಲ್ದಂಡೆ ಯೋಜನೆ ಶುರುಮಾಡಿದ್ದ್ದು ತಾನು ಮತ್ತು ಬಿಎಸ್ ಯಡಿಯೂರಪ್ಪ ಎಂದು ಹೇಳಿದ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರು ಕೃಷಿ ಮತ್ತು ಕೃಷಿಕರ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದರು.

ರಾಜ್ಯದಲ್ಲಿ ಜನರಿಗೆ ಕುಡಿಯುಲು ನೀರಿಲ್ಲ, ಮಂಡ್ಯದಲ್ಲಿ ಬೆಳೆಗಳೆಲ್ಲ ಒಣಗಿ ನಾಶವಾಗಿವೆ, ರಾಜ್ಯದೆಲ್ಲೆಡೆ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ ಇದಕ್ಕೆಲ್ಲ ಯಾರು ಕಾರಣ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಬರ ಪರಿಹಾರ ನಿಧಿಯ ಬಗ್ಗೆ ಮಾತಾಡಿದ ಅವರು ಕೇಂದ್ರ ಹಣಕಾಸು ಆಯೋಗ ನೀಡುವ ಮಾರ್ಗಸೂಚಿಗಳ ಆಧಾರದಲ್ಲಿ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಹಣ ಬಿಡುಗಡೆ ಮಾಡುತ್ತವೆ, ಸಿದ್ದರಾಮಯ್ಯ ಸರ್ಕಾರ ₹18,000 ಕೋಟಿ ಗಳಿಗೆ ಬೇಡಿಕೆ ಸಲ್ಲಿಸಿದೆ, ಕೇವಲ ಒಂದು ರಾಜ್ಯಕ್ಕೆ ಕೇಂದ್ರ ಸರ್ಕಾರ ಅಷ್ಟು ದೊಡ್ಡ ಮೊತ್ತ ಕೊಡುವುದು ಸಾಧ್ಯವೇ? ಎಂದು ಕುಮಾರಸ್ವಾಮಿ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜನರಿಗೆ ಹೆದರಿಸುವುದನ್ನು ಬಿಟ್ಟು ಡಿಕೆ ಸಹೋದರರು ಬೇರೆ ಯಾವ ಜನಸೇವೆ ಮಾಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ

Follow us