ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ, ಡಿಕೆ ನೋಟು ಡಾಕ್ಟ್ರಿಗೆ ವೋಟು ನಮ್ಮ ಸ್ಟ್ರಾಟಿಜಿ ಅಗಿದೆ: ಹೆಚ್ ಡಿ ಕುಮಾರಸ್ವಾಮಿ
ಡಾ ಮಂಜುನಾಥ್ ಮತ್ತು ಬಿಜೆಪಿ ಗೆಲ್ಲಬೇಕು ಹಾಗೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಭಾವನೆ ಇಟ್ಟುಕೊಂಡಿರುವ ಅನೇಕ ಯುವಕರು ಡಾಕ್ಟರ್ ಜೊತೆ ಸೇರುತ್ತಿದ್ದಾರೆ, ಅವರ ಅವಶ್ಯಕತೆ ರಾಜ್ಯಕ್ಕಿದೆ ಎಂಬ ಅಂಶವನ್ನು ಜನ ಮನಗಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಬಿಜೆಪಿ ನಾಯಕರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ (Dr CN Manjunath) ನಗರದದಲ್ಲಿ ತಮ್ಮನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೊಂದೇ ತಮ್ಮ ಸ್ಟ್ರಾಟಿಜಿ (strategy) ಎಂದು ಹೇಳಿದರು. ಡಾ ಮಂಜುನಾಥ್ ಅವರು ಈಗಾಗಲೇ ಕ್ಷೇತ್ರದೆಲ್ಲೆಡೆ ಓಡಾಡಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಭೇಟಿಯಾಗುವ ಮೂಲಕ ವಿದ್ಯುತ್ ಸಂಚಲನ ಮೂಡಿಸಿದ್ದಾರೆ. ಡಾ ಮಂಜುನಾಥ್ ಮತ್ತು ಬಿಜೆಪಿ ಗೆಲ್ಲಬೇಕು ಹಾಗೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಭಾವನೆ ಇಟ್ಟುಕೊಂಡಿರುವ ಅನೇಕ ಯುವಕರು ಡಾಕ್ಟರ್ ಜೊತೆ ಸೇರುತ್ತಿದ್ದಾರೆ, ಅವರ ಅವಶ್ಯಕತೆ ರಾಜ್ಯಕ್ಕಿದೆ ಎಂಬ ಅಂಶವನ್ನು ಜನ ಮನಗಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಕ್ಷೇತ್ರದಲ್ಲಿ ದೊಡ್ಡಮಟ್ಟದ ಪ್ರಚಾರ ನಡೆಯುತ್ತಿದೆ ಎಂದ ಕುಮಾರಸ್ವಾಮಿ ತಮ್ಮ ಚುನಾವಣಾ ಸ್ಟ್ರಾಟಿಜಿಯನ್ನು ಪರಿಷ್ಕರಿಸಿ ‘ಡಿಕೆ ನೋಟು ಡಾಕ್ಟ್ರಿಗೆ ವೋಟು’ ಅಗಿದೆ ಎಂದು ನಗುತ್ತಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತ್ತೊಬ್ಬ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಡಾಕ್ಟರಲ್ಲ, ಪ್ರಮಾಣಪತ್ರವೂ ನಕಲಿ ಎಂದ ಬಿಜೆಪಿ!

Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ

ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
