‘ಆ ನಟನಿಗೆ ಎಲ್ಲವೂ ಗೊತ್ತು, ಆದ್ರೂ ಮಾತಾಡ್ತಿಲ್ಲ’: ಪುನೀತ್ ಫ್ಯಾನ್ಸ್ ಆರೋಪ
ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ವೈರಲ್ ಆಗಿದೆ. ‘ಯಾರೋ ಇದರ ಹಿಂದೆ ಇದ್ದಾರೆ. ಉದ್ದೇಶಪೂರ್ವಕವಾಗಿಯೇ ಇದನ್ನೆಲ್ಲ ಮಾಡಿಸುತ್ತಿದ್ದಾರೆ. ಯಾರೂ ಇದನ್ನೆಲ್ಲ ಸುಮ್ಮನೆ ಮಾಡಲ್ಲ. ತಮ್ಮ ಹಿಂದೆ ಯಾರೋ ಇದ್ದಾರೆ ಎಂಬ ಧೈರ್ಯದಿಂದಲೇ ಇಂಥ ಕೆಲಸ ಮಾಡುತ್ತಿದ್ದಾರೆ’ ಎಂಬುದು ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಆರೋಪ.
ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು (Puneeth Rajkumar Fans) ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಬಗ್ಗೆ ಕೆಲವು ಕಿಡಿಗೇಡಿಗಳು ಅವಹೇಳನಕಾರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದೇ ಇದಕ್ಕೆ ಕಾರಣ ಆಗಿದೆ. ದರ್ಶನ್ (Darshan) ಅಭಿಮಾನಿ ಎಂದು ಕೇಳಿಕೊಂಡಿರುವ ನೆಟ್ಟಿಗರು ಅಶ್ವಿನಿ ಬಗ್ಗೆ ಕೀಳುಮಟ್ಟದ ಪೋಸ್ಟ್ಗಳನ್ನು ಹಾಕಿದ್ದಾರೆ. ಆ ಬಗ್ಗೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ‘ಆ ನಟ ಕೂಡ ಇದರ ಬಗ್ಗೆ ಮಾತಾಡುತ್ತಿಲ್ಲ. ಅವನಿಗೆ ಮತ್ತು ಅವನ ಹಿಂಬಾಲಕರಿಗೆ ಇದು ಎಲ್ಲವೂ ಗೊತ್ತು. ಯಾರು ಈ ಕೆಲಸ ಮಾಡಿದ್ದಾರೆ? ಇದರ ಹಿಂದೆ ಇರುವವರು ಯಾರು ಎಂಬುದು ಅವನಿಗೆ ಗೊತ್ತು. ಅವರ ಮನೆಯಲ್ಲಿ ಅಕ್ಕ-ತಂಗಿಯರು ಇಲ್ಲವೇ? ಅವರ ತಾಯಿ ಇಲ್ಲವೇ? ಇದನ್ನೆಲ್ಲ ಅವರು ಯೋಚನೆ ಮಾಡಬೇಕು. ತಾಕತ್ತು ಇದ್ದರೆ ಎದುರು ಬಂದ ಫೇಸ್ ಮಾಡಲಿ. ನಿಮ್ಮಂಥವರಿಂದಲೇ ನಿಮ್ಮ ಹೀರೋಗೆ ಇವತ್ತು ಕೆಟ್ಟ ಹೆಸರು ಬರುತ್ತಿರುವುದು’ ಎಂದು ಅಪ್ಪು ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.