ಸಾತ್ವಿಕ್ ಬದುಕಿ ಬರಲೆಂದು ಹರಕೆ ಕಟ್ಟಿದ್ದ ಯುವಕರು: ರಸ್ತೆಯೂದ್ದಕ್ಕೂ ದೀರ್ಘದಂಡ ನಮಸ್ಕಾರ
ಸಾತ್ವಿಕ ಬದುಕಿ ಬರಲಿ ಎಂದು ಸಾಕಷ್ಟು ಜನರು ದೇವರಿಗೆ ಪಾರ್ಥನೆ ಸಲ್ಲಿಸಿದ್ದರು. ಅದೇ ರೀತಿಯಾಗಿ ಮೃತ್ಯು ಕೂಪದಿಂದ ಸಾತ್ವಿಕ್ ಪಾರಾಗಲಿ ಎಂದು ಇಂಡಿ ತಾಲೂಕಿನ ಐರಸಂಗ ಗ್ರಾಮದ ಯುವಕರಾದ ಮಹೇಶ್ ಹಾಗೂ ಅಶೋಕ್ ಹರಕೆ ಕಟ್ಟಿದ್ದರು. ಸಾತ್ವಿಕ ಜೀವಂತವಾಗಿ ಬದುಕಿ ಬಂದ ಬಳಿಕ ಇದೀಗ ಯುವಕರು ಹರಕೆ ತೀರಿಸಿದ್ದಾರೆ.
ವಿಜಯಪುರ, ಏಪ್ರಿಲ್ 05: ಕಳೆದ ಏಪ್ರಿಲ್ 3ರ ಸಾಯಂಕಾಲ ಜಮೀನಿನಲ್ಲಿರುವ ತೆರೆದ ಕೊಳವೆ ಬಾವಿಯಲ್ಲಿ (Borewell) ಜಾರಿ ಬಿದ್ದಿದ್ದ ಪುಟ್ಟ ಬಾಲಕ ಸಾತ್ವಿಕ್ 20 ಗಂಟೆಗಳ ಕಾಲ ತಲೆ ಕೆಳಗಾವಿ ಬಿದ್ದು ಪವಾಡ ಸದೃಶ್ಯವಾಗಿ ಜೀವಂತವಾಗಿ ಬಂದದ್ದು ವಿಸ್ಮಯ ಎಂದೇ ಹೇಳಬಹುದು. ಸಾತ್ವಿಕ ಬದುಕಿ ಬರಲಿ ಎಂದು ಸಾಕಷ್ಟು ಜನರು ದೇವರಿಗೆ ಪಾರ್ಥನೆ ಸಲ್ಲಿಸಿದ್ದರು. ಅದೇ ರೀತಿಯಾಗಿ ಮೃತ್ಯು ಕೂಪದಿಂದ ಸಾತ್ವಿಕ್ ಪಾರಾಗಲಿ ಎಂದು ಇಂಡಿ ತಾಲೂಕಿನ ಐರಸಂಗ ಗ್ರಾಮದ ಯುವಕರಾದ ಮಹೇಶ್ ಹಾಗೂ ಅಶೋಕ್ ಹರಕೆ ಕಟ್ಟಿದ್ದರು. ಸಾತ್ವಿಕ ಜೀವಂತವಾಗಿ ಬದುಕಿ ಬಂದ ಬಳಿಕ ಇದೀಗ ಯುವಕರು ಐರಸಂಗ ಗ್ರಾಮದಿಂದ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಮಠದವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos