Kannada News Photo gallery Karnataka News In Kannada: Vijayapura District Administration Honored by the real heroes who split the huge rocks and brought Sathwik alive
ಬೃಹತ್ ಬಂಡೆ-ಕಲ್ಲುಗಳನ್ನು ಸೀಳಿ ಸಾತ್ವಿಕ್ನನ್ನು ಜೀವಂತವಾಗಿ ತಂದ ರಿಯಲ್ ಹೀರೋಗಳು ಇವರೇ
ಕೊಳೆವೆ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದ ಪುಟಾಣಿ ಕಂದ ಸಾತ್ವಿಕ್ ಸಾವು ಗೆದ್ದಿದ್ದಾನೆ. ಮೃತ್ಯುಂಜಯನಾಗಿ ಬಂದಿದ್ದಾನೆ. ನಿರಂತರ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಗೆ ಯಶಸ್ಸು ಸಿಕ್ಕಿದೆ. ಕಂದ ಇಲ್ದೆ ಕಂಗಾಲಾಗಿದ್ದ ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಮಗುವನ್ನು ಸುರಕ್ಷಿತವಾಗಿ ಹೊರತಂದ ವಿವಿಧ ರಕ್ಷಣಾ ತಂಡಗಳಿಗೆ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸಲಾಗಿದೆ.