ಜಗಜಟ್ಟಿಗಳ ಸೆಣೆಸಾಟ: ಮುಗಿಲು ಮುಟ್ಟಿದ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ; ಇಲ್ಲಿದೆ ಝಲಕ್
ಶತಮಾನಗಳಿಂದಲೂ ಇರುವ ಈ ಗ್ರಾಮೀಣ ಕ್ರೀಡೆ ಇಂದು ನೋಡಲು ಸಿಗುವುದು ಬಹಳ ಅಪರೂಪವಾಗಿದೆ. ಆದರೆ, ಈ ಜಾತ್ರೆಯಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ, ಹೊರರಾಜ್ಯದಿಂದಲೂ ಕುಸ್ತಿಪಟುಗಳು ಭಾಗವಹಿಸುತ್ತಾರೆ. ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಜಗಜಟ್ಟಿಗಳ ಸೆಣಸಾಟ ಗಮನ ಸೆಳೆಯಿತು.

ಬೀದರ್ ಕುಸ್ತಿ ಪಂದ್ಯ
- ಜಗಜಟ್ಟಿಗಳ ಸೆಣಸಾಟ, ಮುಗಿಲು ಮುಟ್ಟಿದ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ, ಕುಸ್ತಿ ಪಟುಗಳನ್ನು ಹುರಿದುಂಬಿಸಿದ ಹಲಗೆ ನಾದ. ಹೀಗೆ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕವರೊಂದಿಗೆ ಕೈ, ಕೈ ಹಿಡಿದು ಕಾದಾಟಕ್ಕೆ ನಿಂತಿರುವ ಪಟುಗಳು, ಇದನ್ನ ನೋಡಲು ಮುಗಿಬಿದ್ದಿರುವ ಸಾವಿರಾರು ಜನರು. ಈ ದೃಶ್ಯ ಕಂಡು ಬಂದಿದ್ದು ಬೀದರ್ ತಾಲೂಕಿನ ಅಷ್ಟೂರು ಗ್ರಾಮದ ಪವಾಡ ಪುರುಷ ಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯವಾಗಿ ಹುಡುಗ-ಹುಡುಗಿಯರ ಕುಸ್ತಿ ಪಂದ್ಯಾವಳಿಯಲ್ಲಿ.
- ಕ್ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಜಗಜಟ್ಟಿಗಳ ಸೆಣಸಾಟ ಗಮನ ಸೆಳೆಯಿತು. ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಪಾರ ಜನರು ಕುಸ್ತಿ ಅಖಾಡದತ್ತ ಆಗಮಿಸಿ ಪಂದ್ಯಾವಳಿ ವೀಕ್ಷಿಸಿದರು.
- ಅಖಾಡ ಕುಸ್ತಿ ಪಟುಗಳಿಂದ ತುಂಬಿಕೊಂಡಿತ್ತು. ಇನ್ನೂ ಈ ಕುಸ್ತಿ ಪಂದ್ಯಾವಳಿಯಲ್ಲಿ 1 ನೂರು ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಬಹುಮಾನವನ್ನ ಇಟ್ಟಿದ್ದರು. ಈ ಕುಸ್ತಿಯಲ್ಲಿ ದೂರದ ಊರುಗಳಿಂದ ಹಾಗೂ ಅನ್ಯ ರಾಜ್ಯದಿಂದ ಬಂದಿದ್ದವರಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ಕೊಡಲಾಯಿತು. ಇದ್ದಕ್ಕೂ ಮೊದಲು ಹಲಗೆ, ತಬಲ ವಾದ್ಯಗಳನ್ನು ಬಾರಿಸಿ, ಕುಸ್ತಿ ಪಟುಗಳನ್ನು ಜನರಿಗೆ ಪರಿಚಯಿಸಲಾಯಿತು. ಘಟಾನುಘಟಿ ಸ್ಪರ್ಧಿಗಳು ಪರಸ್ಪರ ಕೈ ಮಿಲಾಯಿಸುವ ಮೂಲಕ ಜಂಗಿ ಕುಸ್ತಿಗೆ ಚಾಲನೆ ನೀಡಲಾಯಿತು.
- ಇಲ್ಲಿ ಹಣ ನೀಡುತ್ತಾರೆ ಎಂಬುದಕ್ಕಿಂತ ಕುಸ್ತಿ ಆಡಿ ತಮ್ಮ ಸಾಮರ್ಥ್ಯ ತೊರಿಸುತ್ತಾರೆ ಎಂದು ಆಯೋಜನಕರು ಹೇಳುತ್ತಿದ್ದಾರೆ. ಈ ಕುಸ್ತಿ ಪಂದ್ಯಾವಳಿಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು 40ವರ್ಷ ವಯಸ್ಸಿನ ವರೆಗೂ ಕುಸ್ತಿ ಪಟುಗಳು ಭಾಗವಹಿಸಿ ತಮ್ಮ ಸಾಮರ್ಥ್ಯವನ್ನ ಪ್ರದರ್ಶಿಸಿದರು. ಬೆಳಗಾವಿ, ಕೊಲ್ಲಾಪುರ, ಸಾಂಗ್ಲಿ, ಹರಪನಹಳ್ಳಿ, ದಾವಣಗೆರೆ, ಹೊಸಪೇಟೆ, ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು.
- ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಇಲ್ಲಿ ಭಾಗವಹಿಸಿದ್ದರು. ಪಕ್ಕಾ ಗ್ರಾಮೀಣ ಕ್ರೀಡೆಯಾದ ಕುಸ್ತಿಯನ್ನ ನೋಡಲು ಸಾವಿರಾರೂ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷ ಕೂಡ ಮಹಾರಾಷ್ಟ್ರ, ಆಂದ್ರ ಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಕುಸ್ತಿ ಆಡಲು ಪಟುಗಳು ಬಂದಿದ್ದು, ತಮಗೆ ತಕ್ಕ ಸಾಮರ್ಥ್ಯ ಪಟುವನ್ನ ಆಯ್ಕೆ ಮಾಡಿಕೊಂಡು ಕುಸ್ತಿಗೆ ಇಳಿದಿದ್ದಾರೆ.
- ಆರಂಭಿಕ ಪಂದ್ಯದಲ್ಲಿ ಭಾರಿ ಸೆಣೆಸಾಟ ನಡೆಸಿದ ಕುಸ್ತಿ ಕುಸ್ತಿಪಟುಗಳನ್ನ ನೋಡಿದ ಪ್ರೇಕ್ಷಕರು ಕುಸ್ತಿಪ್ರೇಮಿಗಳು ಕೇಕೆ, ಶಿಳ್ಳೆ ಹಾಕಿ ಹುರಿದುಂಬಿಸಿದರು. ಹಲವು ಕುಸ್ತಿ ಪಟುಗಳು ಅನಿರೀಕ್ಷಿತ ಫಲಿತಾಂಶ ನೀಡುವ ಮೂಲಕ ನೆರದಿದ್ದವರನ್ನು ಚಕಿತಗೊಳಿಸಿದರು. ಸತತ ಎರಡೂವರೆ ಗಂಟೆಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ 100 ಕ್ಕೂ ಹೆಚ್ಚು ಪಟುಗಳು ಭಾಗವಹಿಸಿದ್ದರು.
- ನಶಿಸಿ ಹೋಗುತ್ತಿರುವ ಇಂತಹ ಕ್ರೀಡೆಗಳು ಇನ್ನೂ ಹಳ್ಳಿಯಲ್ಲಿ ಜಿವಂತವಾಗಿವೇ ಅನ್ನುವುದಕ್ಕೆ ಇದು ಕೂಡ ಸಾಕ್ಷಿ. ಇತ್ತ ಗ್ರಾಮಿಣ ಭಾಗದ ಯುವಕರು ನೆಚ್ಚಿನ ಕ್ರಿಡೆಗಳಲ್ಲಿ ಒಂದಾದ ಕುಸ್ತಿಗೂ ಕೂಡ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಅಂದಾಗ ಮಾತ್ರ ಇಂತಹ ಕ್ರೀಡೆಯನ್ನ ಬೆಳೆಸಿ ಉಳಿಸಲು ಸಾಧ್ಯವಾಗುತ್ತದೆ.










