Updated on: Apr 05, 2024 | 7:31 AM
ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇರೋ ಜನಪ್ರಿಯತೆ ತುಂಬಾನೇ ದೊಡ್ಡದು. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಇಂದು (ಏಪ್ರಿಲ್ 5) ಅವರಿಗೆ ಜನ್ಮದಿನ. ಎಲ್ಲರೂ ರಶ್ಮಿಕಾಗೆ ಶುಭಾಶಯ ಕೋರುತ್ತಿದ್ದಾರೆ. ಅವರು ಸದ್ಯ ವಿದೇಶದಲ್ಲಿ ಇದ್ದಾರೆ.
ಸೆಲೆಬ್ರಿಟಿಗಳ ಬಾಲ್ಯದ ಫೋಟೋ ವೈರಲ್ ಆಗೋದು ಸಾಮಾನ್ಯ. ಅದೇ ರೀತಿ ಬರ್ತ್ಡೇ ಸಂದರ್ಭದಲ್ಲಿ ರಶ್ಮಿಕಾ ಅವರ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಅಭಿಮಾನಿ ಬಳಗ ಹಿರಿದು. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 4 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಲೇ ಇದೆ.
ಕೆಲ ವರ್ಷಗಳ ಹಿಂದಿ ರಶ್ಮಿಕಾ ಮಂದಣ್ಣ ಅವರು ಈ ಫೋಟೋನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ‘ಈ ಕೊರೊನಾ ಹೋಗಲು ಕಾಯುತ್ತಿದ್ದೇನೆ’ ಎಂದು ಅವರು ಬರೆದುಕೊಂಡಿದ್ದರು.
ರಶ್ಮಿಕಾ ಮಂದಣ್ಣ ಅವರು ಚಿಕ್ಕ ವಯಸ್ಸಿನಲ್ಲೇ ನೃತ್ಯ ಮಾಡುತ್ತಿದ್ದರು. ಶಾಲೆಗಳಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗುತ್ತಿದ್ದರು.