ನೂತನ ಕೆಪಿಸಿಸಿ ಪದಾಧಿಕಾರಿಗಳಿಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡುವಂತೆ ತಾಕೀತು ಮಾಡಿದ ಡಿಕೆ ಶಿವಕುಮಾರ್
ನಿಮ್ಮ ವಾಹನಗಳಲ್ಲೇ ಕಾರ್ಯ ನಿರ್ವಹಿಸಿ ಮತ್ತು ಪೆಟ್ರೋಲ್ ಖರ್ಚನ್ನು ಸಹ ನೀವೇ ನೋಡಿಕೊಳ್ಳಿ ಎಂದ ಶಿವಕುಮಾರ್, ಕೆಲಸ ಮಾಡದ ಕಾರ್ಯಾಧ್ಯಕ್ಷರಾಗಲೀ ಬೇರೆ ಪದಾಧಿಕಾರಿಗಳಾಗಲೀ ಲೋಕಸಭಾ ಚುನಾವಣೆಯ ಬಳಿಕ ಮಾಜಿಗಳೆನಿಸಿಕೊಳ್ಳುವುದು ನಿಶ್ಚಿತ ಎಂಬ ಎಚ್ಚರಿಕೆಯನ್ನು ಸಹ ನೀಡಿದರು.
ಬೆಂಗಳೂರು: ಕೆಪಿಸಿಸಿಯ ನೂತನ ಪದಾಧಿಕಾರಿಗಳನ್ನು (KPCC office-bearers) ಬ್ರೀಫ್ ಮಾಡುವಾಗ ಡಿಕೆ ಶಿವಕುಮಾರ್ (DK Shivakumar) ಬಹಳ ಖಡಕ್ಕಾಗಿ ಮಾತಾಡಿದರು. ಹೊಸದಾಗಿ ನೇಮಕಗೊಂಡಿರುವರು ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಮತ್ತು ಸಂಘಟನೆಯ (organizational work) ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಹೆಚ್ಚೆಚ್ಚು ಹೊಸಬರನ್ನು ಪಕ್ಷಕ್ಕೆ ಸೇರಿಸಬೇಕು, ನಿಮಗೆ ಹೊಣೆಗಾರಿಕೆಯನ್ನು ವಹಿಸಿರುವುದು ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ತಿರುಗಾಡಲು ಅಲ್ಲ ಎಂದು ಹೇಳಿದ ಶಿವಕುಮಾರ್, ಯಾರೂ ಕಾರು ಮತ್ತು ರೂಮುಗಳ ನಿರೀಕ್ಷೆ ಇಟ್ಟುಕೊಳ್ಳಬೇಡಿ, ನಿಮ್ಮ ವಾಹನಗಳಲ್ಲೇ ಕಾರ್ಯ ನಿರ್ವಹಿಸಿ ಮತ್ತು ಪೆಟ್ರೋಲ್ ಖರ್ಚನ್ನು ಸಹ ನೀವೇ ನೋಡಿಕೊಳ್ಳಿ ಎಂದರು. ಕೆಲಸ ಮಾಡದ ಕಾರ್ಯಾಧ್ಯಕ್ಷರಾಗಲೀ ಬೇರೆ ಪದಾಧಿಕಾರಿಗಳಾಗಲೀ ಲೋಕಸಭಾ ಚುನಾವಣೆಯ ಬಳಿಕ ಮಾಜಿಗಳೆನಿಸಿಕೊಳ್ಳುವುದು ನಿಶ್ಚಿತ ಎಂಬ ಎಚ್ಚರಿಕೆಯನ್ನು ಸಹ ಶಿವಕುಮಾರ್ ನೀಡಿದರು. ಲೋಕಸಭಾ ಚುನಾವಣೆಯ ಬಳಿಕ ಅವರು ಕೆಪಿಸಿಸಿ ಅಧ್ಯಕ್ಷನ ಸ್ಥಾನ ತ್ಯಜಿಸಲಿದ್ದಾರೆಯೇ? ಅವರು ತಮ್ಮ ಮಾತಿನ ಕೊನೆಯಲ್ಲಿ ಅದನ್ನು ಹೇಳುವುದು ಗಮನಿಸಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ಕಮಲದ ಧ್ವಜ ಹಾಕಿದ್ದಾರೆ, ಬದುಕಿದ್ದು ಸತ್ತಂತೆ: ಮಂಡ್ಯದಲ್ಲಿ ಡಿಕೆ ಶಿವಕುಮಾರ್ ವಾಗ್ದಾಳಿ