ನಿಮ್ಮ ಮಗುವಿಗೆ ಶ್ರೀಕೃಷ್ಣನಿಗೆ ಪ್ರೀಯವಾದ ಹೆಸರಿಡಿ! ಇಲ್ಲಿದೆ 10 ವಿಶಿಷ್ಟ ಹೆಸರುಗಳು

ನೀವೂ ಕೂಡ ಮಗುವಿನ ನಾಮಕರಣ ಮಾಡಲು ಹೆಸರನ್ನು ಹುಡುಕುತ್ತಿದ್ದರೆ ಅಥವಾ ಈ ಬಗ್ಗೆ ಯೋಚಿಸುತ್ತಿದ್ದರೆ, ಇಲ್ಲಿ ಭಗವಾನ್ ಶ್ರೀಕೃಷ್ಣನ 10 ಹೆಸರುಗಳನ್ನು ನೀಡಲಾಗಿದ್ದು, ಇವು ಆಧುನಿಕ ಕಾಲಕ್ಕೂ ಸರಿ ಹೊಂದುತ್ತವೆ ಜೊತೆಗೆ ದೇವರ ನಾಮ ಬರುವಂತ ಹೆಸರಿಟ್ಟಂತಾಗುತ್ತದೆ. ಅದೂ ಅಲ್ಲದೆ ಇವುಗಳ ಅರ್ಥವೂ ತುಂಬಾ ಸುಂದರವಾಗಿದೆ. ಹಾಗಾದರೆ ಆ 10 ವಿಶಿಷ್ಟ ಹೆಸರುಗಳಾವವು? ಇದರ ಅರ್ಥವೇನು? ಇಲ್ಲಿದೆ ಮಾಹಿತಿ.

ನಿಮ್ಮ ಮಗುವಿಗೆ ಶ್ರೀಕೃಷ್ಣನಿಗೆ ಪ್ರೀಯವಾದ ಹೆಸರಿಡಿ! ಇಲ್ಲಿದೆ 10 ವಿಶಿಷ್ಟ ಹೆಸರುಗಳು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2024 | 10:24 AM

“ಯತೋ ನಾಮ ತತೋ ಗುಣ” ಎಂಬ ಮಾತನ್ನು ನೀವು ಕೇಳಿರಬಹುದು. ಇದರ ಅರ್ಥ, ವ್ಯಕ್ತಿಯ ಹೆಸರಿನಂತೆ ಅವನ ಗುಣವಿರುತ್ತದೆ. ಹಾಗಾಗಿ ಪೋಷಕರು ತಮ್ಮ ಮಗುವಿಗೆ ಅರ್ಥ ಪೂರ್ಣವಾದ ಹೆಸರಿಡುವುದು ಬಹಳ ಮುಖ್ಯ. ಆದ್ದರಿಂದ, ನೀವೂ ಕೂಡ ಮಗುವಿನ ನಾಮಕರಣ ಮಾಡಲು ಹೆಸರನ್ನು ಹುಡುಕುತ್ತಿದ್ದರೆ ಅಥವಾ ಈ ಬಗ್ಗೆ ಯೋಚಿಸುತ್ತಿದ್ದರೆ, ಇಲ್ಲಿ ಭಗವಾನ್ ಶ್ರೀಕೃಷ್ಣನ 10 ಹೆಸರುಗಳನ್ನು ನೀಡಲಾಗಿದ್ದು, ಇವು ಆಧುನಿಕ ಕಾಲಕ್ಕೂ ಸರಿ ಹೊಂದುತ್ತವೆ ಜೊತೆಗೆ ದೇವರ ನಾಮ ಬರುವಂತ ಹೆಸರಿಟ್ಟಂತಾಗುತ್ತದೆ. ಅದೂ ಅಲ್ಲದೆ ಇವುಗಳ ಅರ್ಥವೂ ತುಂಬಾ ಸುಂದರವಾಗಿದೆ. ಹಾಗಾದರೆ ಆ 10 ವಿಶಿಷ್ಟ ಹೆಸರುಗಳಾವವು? ಇದರ ಅರ್ಥವೇನು? ಇಲ್ಲಿದೆ ಮಾಹಿತಿ.

ವಿಯಾನ್ಶ್ – ನಿಮ್ಮ ಶಿಶುವಿಗೆ ಶ್ರೀಕೃಷ್ಣನ ಈ ಸುಂದರವಾದ ಹೆಸರನ್ನು ನೀವು ಇಡಬಹುದು. ಈ ಹೆಸರಿನ ಅರ್ಥ ಯಾವಾಗಲೂ ಉತ್ಸಾಹದಿಂದ ಕೂಡಿರುವವನು ಎಂಬುದಾಗಿದೆ. ನಿಮ್ಮ ಮಗುವಿಗೆ ಈ ಹೆಸರಿಟ್ಟರೆ, ಅವನಲ್ಲಿಯೂ ಇದೇ ರೀತಿಯ ಗುಣಗಳನ್ನು ಕಾಣಬಹುದು.

ಆರಿವ್- ಈ ಹೆಸರು ಆಧುನಿಕ ಕಾಲಕ್ಕೂ ಸರಿಹೊಂದುವಂತಿದೆ. ಅಲ್ಲದೆ ಇದು ಭಗವಾನ್ ಕೃಷ್ಣನ ಹೆಸರಾಗಿದೆ. ಇದರ ಅರ್ಥ ಬುದ್ಧಿವಂತ ಮತ್ತು ನ್ಯಾಯವನ್ನು ಎತ್ತಿ ಹಿಡಿಯುವವನು ಎಂಬುದಾಗಿದೆ.

ರಸೇಶ್- ಶ್ರೀಕೃಷ್ಣನು ಯಾವಾಗಲೂ ನಗುತ್ತಿರುತ್ತಾನೆ ಹಾಗಾಗಿ ಅವನನ್ನು ರಸೇಶ್ ಎಂದು ಹೇಳಲಾಗುತ್ತದೆ. ಈ ಹೆಸರಿನ ಅರ್ಥ ಸಂತೋಷದ ಅಧಿಪತಿ ಅಥವಾ ಯಾವಾಗಲೂ ಸಂತಸದಿಂದ ಇರುವವನು ಎಂಬುದಾಗಿದೆ. ನಿಮ್ಮ ಮಗುವಿಗೂ ಈ ಹೆಸರನ್ನು ಇಡಬಹುದು.

ಅದ್ವೈತ – ಈ ಹೆಸರು ಬಹಳ ವಿಶಿಷ್ಟವಾಗಿದ್ದು. ಈ ಹೆಸರಿರುವ ಮಕ್ಕಳನ್ನು ಕಾಣುವುದು ಸಹ ವಿರಳ. ಇದು ಭಗವಾನ್ ಕೃಷ್ಣನ ಹೆಸರಾಗಿದ್ದು ಇದರರ್ಥ ಆತ್ಮ ಮತ್ತು ದೇವರ ನಡುವಿನ ವ್ಯತ್ಯಾಸವನ್ನು ತಿಳಿದಿರುವವನು, ವ್ಯಕ್ತಿತ್ವವನ್ನು ವಿಭಜಿಸಲು ಸಾಧ್ಯವಿಲ್ಲದವನು ಎಂಬುದಾಗಿದೆ.

ಪ್ರಭಾವ್ – ಭಗವಾನ್ ಕೃಷ್ಣನ ಈ ಹೆಸರಿನ ಅರ್ಥ ಅತ್ಯುತ್ತಮ ಅಥವಾ ಜನಪ್ರಿಯ ಎಂಬುದಾಗಿದೆ. ಇದನ್ನು ಕೂಡ ನಿಮ್ಮ ಮಗುವಿಗೆ ಇಡಬಹುದು.

ಅಚ್ಯುತ – ಭಗವಾನ್ ಕೃಷ್ಣನ ಈ ಹೆಸರು ಕೂಡ ತುಂಬಾ ಒಳ್ಳೆಯದು. ಈ ಹೆಸರಿನ ಅರ್ಥ ಎಂದಿಗೂ ತಪ್ಪು ಮಾಡದವನು ಎಂಬುದಾಗಿದೆ. ಇದು ಹಳೆಯ ಹೆಸರಂತೆ ಕಂಡರೂ ಕೂಡ ಇತ್ತೀಚಿನ ದಿನಗಳಲ್ಲಿ ಇಂತಹ ಹೆಸರು ಬಳಕೆಯಾಗುತ್ತಿದೆ.

ಸುಮೇಧ- ಪೋಷಕರು ತಮ್ಮ ಮಗುವಿಗೆ ಶ್ರೀಕೃಷ್ಣನ ಈ ಹೆಸರನ್ನು ಇಡಬಹುದು. ಇದರ ಅರ್ಥ ಸರ್ವಜ್ಞ ಅಥವಾ ಎಲ್ಲವನ್ನು ತಿಳಿದವನು ಎಂಬುದಾಗಿದೆ.

ಧರ್ಮಜ್ಞ- ಶ್ರೀಕೃಷ್ಣನಿಗೆ ಧರ್ಮದ ಜ್ಞಾನವಿದ್ದ ಕಾರಣ ಅವನನ್ನು ಧರ್ಮಜ್ಞ ಎಂದೂ ಕರೆಯಲಾಗುತ್ತದೆ. ನಿಮ್ಮ ಮಗುವಿಗೆ ನೀವು ಈ ಹೆಸರನ್ನು ಈಡಬಹುದು, ಇದರರ್ಥ ಧರ್ಮವನ್ನು ತಿಳಿದಿರುವವನು ಎಂಬುದಾಗಿದೆ.

ಇದನ್ನೂ ಓದಿ: ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭ! ಹೇಗಿರಲಿದೆ ನಿಮ್ಮ ಭವಿಷ್ಯ

ಸರ್ವ- ಈ ಹೆಸರು ಕೂಡ ತುಂಬಾ ವಿಭಿನ್ನವಾಗಿದೆ, ನೀವು ಮಗುವಿಗೆ ಈ ಹೆಸರನ್ನು ಇಡಬಹುದು. ಈ ಹೆಸರಿನ ಅರ್ಥ ಅತ್ಯುತ್ತಮ, ಅಥವಾ ಸರ್ವವ್ಯಾಪಿ ಎಂಬ ಅರ್ಥವನ್ನು ನೀಡುತ್ತದೆ.

ರಿಭವ್ – ಈ ಹೆಸರಿನ ಅರ್ಥ ಸೂರ್ಯನಂತೆ ಪ್ರಕಾಶವಾಗಿರುವವನು ಎಂಬುದಾಗಿದೆ. ಇದನ್ನು ನೀವು ಮಗುವಿಗೆ ಇಡುವ ಮೂಲಕ ಉತ್ತಮ ಗುಣಗಳನ್ನು ನೀಡಬಹುದು.

ಶ್ರೀಕೃಷ್ಣನ ಈ 10 ಹೆಸರುಗಳಲ್ಲಿ ನಿಮಗೆ ಇಷ್ಟವಾದ ಹೆಸರನ್ನು ಮಗುವಿಗೆ ಇಡಬಹುದು. ಈ ಹೆಸರು ಎಷ್ಟು ವಿಭಿನ್ನವಾಗಿದೆಯೋ ಅಷ್ಟೇ ಅರ್ಥಪೂರ್ಣವಾಗಿವೆ. ಆದ್ದರಿಂದ ಈ ಹೆಸರನ್ನು ಇಡುವ ಮೂಲಕ ಕೃಷ್ಣನಂತಹ ಗುಣಗಳನ್ನು ಸಹ ಪಡೆಯಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ