Ugadi 2024: ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭ! ಹೇಗಿರಲಿದೆ ನಿಮ್ಮ ಭವಿಷ್ಯ

ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸುಮಾರು 30 ವರ್ಷಗಳ ನಂತರ, ಹೊಸ ವರ್ಷವು ಶುಭ ರಾಜಯೋಗದಲ್ಲಿ ಪ್ರಾರಂಭವಾಗಿದೆ. ಈ ದಿನದಂದು ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗವು ಸಂಯೋಜನೆ ಗೊಂಡಿದೆ. ಹಾಗಾಗಿ ಇದು ವರ್ಷ ಪೂರ್ತಿ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ಈ ಬಾರಿ ಸಂವತ್ಸರ ರಾಜ ಮಂಗಳ ಮತ್ತು ಮಂತ್ರಿ ಶನಿದೇವ. ಹಾಗಾಗಿ ಶನಿ ಮತ್ತು ಮಂಗಳನ ಪ್ರಭಾವವು ವರ್ಷಪೂರ್ತಿ ಇರುತ್ತದೆ.

Ugadi 2024: ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭ! ಹೇಗಿರಲಿದೆ ನಿಮ್ಮ ಭವಿಷ್ಯ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 09, 2024 | 3:20 PM

ಹೊಸ ವರ್ಷವು ಕ್ರೋಧಿನಾಮ ಸಂವತ್ಸರ ಚೈತ್ರ ಶುಕ್ಲ ಪ್ರತಿಪದಾ ದಿನದಂದು ಪ್ರಾರಂಭವಾಗಿದ್ದು ವರ್ಷವಿಡೀ ಶನಿ ಮತ್ತು ಮಂಗಳನ ಪ್ರಭಾವ ಇರುತ್ತದೆ. ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸುಮಾರು 30 ವರ್ಷಗಳ ನಂತರ, ಹೊಸ ವರ್ಷವು ಶುಭ ರಾಜಯೋಗದಲ್ಲಿ ಪ್ರಾರಂಭವಾಗಿದೆ. ಈ ದಿನದಂದು ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗವು ಸಂಯೋಜನೆ ಗೊಂಡಿದೆ. ಹಾಗಾಗಿ ಇದು ವರ್ಷ ಪೂರ್ತಿ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ಈ ಬಾರಿ ಸಂವತ್ಸರ ರಾಜ ಮಂಗಳ ಮತ್ತು ಮಂತ್ರಿ ಶನಿದೇವ. ಹಾಗಾಗಿ ಶನಿ ಮತ್ತು ಮಂಗಳನ ಪ್ರಭಾವವು ವರ್ಷಪೂರ್ತಿ ಇರುತ್ತದೆ.

ವೈದಿಕ ಕ್ಯಾಲೆಂಡರ್ ಲೆಕ್ಕಾಚಾರದ ಪ್ರಕಾರ, ಹಿಂದೂ ಹೊಸ ವರ್ಷವು ಕ್ರೋಧಿನಾಮ ಸಂವತ್ಸರ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದಾದಿಂದ ಅಂದರೆ ಎ. 9 ರಂದು ಪ್ರಾರಂಭವಾಗಿದೆ. ಹಾಗಾಗಿ ಎಲ್ಲಾ ಉಪವಾಸ ಮತ್ತು ಹಬ್ಬಗಳನ್ನು ಇದರ ಆಧಾರದ ಮೇಲೆ ಆಚರಿಸಲಾಗುತ್ತದೆ. ಈ ಬಾರಿ ಹೊಸ ವರ್ಷ ರಾಜಯೋಗದಲ್ಲಿ ಆರಂಭಗೊಂಡಿರುವುದರಿಂದ ಬಹಳ ವಿಶೇಷವಾಗಿದೆ.

ಇದನ್ನೂ ಓದಿ: ಯುಗಾದಿ ಹಬ್ಬದ ದಿನ ಏನು ಮಾಡಬೇಕು, ಮಾಡಬಾರದು?

ಶುಭ ಯೋಗ, ರಾಜಯೋಗ;

ಈ ವರ್ಷ ಆಕಾಶ ಕ್ಷೇತ್ರದಲ್ಲಿ ರಾಜ ಮಂಗಳನಾದರೆ ಅವನ ಮಂತ್ರಿ ಪಟ್ಟ ಶನಿಯಾಗಿದ್ದಾನೆ. ಶುಕ್ರನು ಕಮಾಂಡರ್ ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ ಹಾಗೂ ಈ ಸಂವತ್ಸರನ ವಾಹನ ಗೂಳಿ. ಜೊತೆಗೆ ಈ ಬಾರಿ ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭವಾಗಿದೆ. ಇದಲ್ಲದೆ, ವರ್ಷದ ಮೊದಲ ದಿನದಂದು ರೇವತಿ ಮತ್ತು ಅಶ್ವಿನಿ ನಕ್ಷತ್ರ ಬಂದಿರುವುದು ಕಾಕತಾಳೀಯವಾಗಿದೆ. ಈ ದಿನ, ಚಂದ್ರನು ಗುರುವಿನ ರಾಶಿಯಾದ ಮೀನ ರಾಶಿಯಲ್ಲಿರುತ್ತಾನೆ. ಶನಿ ದೇವರು ತನ್ನದೇ ರಾಶಿಯಾದ ಕುಂಭ ರಾಶಿಯಲ್ಲಿರುತ್ತಾನೆ. ಇವೆಲ್ಲವೂ ಹೊಸ ವರ್ಷದ ಹೊಸತನಕ್ಕೆ ಮುನ್ನುಡಿ ಬರೆದಿದೆ. ಅಲ್ಲದೆ ವರ್ಷಪೂರ್ತಿ ಒಳ್ಳೆಯ ದಿನಗಳಿವೆ ಎಂಬುದನ್ನು ಸೂಚಿಸುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ