Vinayak Chaturthi 2024: ಚೈತ್ರ ಮಾಸದ ವಿನಾಯಕ ಚತುರ್ಥಿಯನ್ನು ಈ ರೀತಿ ಆಚರಣೆ ಮಾಡಿ!
ವಿನಾಯಕ ಚತುರ್ಥಿಯ ದಿನದಂದು ಗಣೇಶನನ್ನು ಪೂಜಿಸುವವರಿಗೆ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಜೊತೆಗೆ ಸದಾಕಾಲ ಸಂತೋಷ, ಶಾಂತಿ ಮನೆಯಲ್ಲಿ ಸಮೃದ್ದಿ ಇರುತ್ತದೆ. ಹಾಗಾದರೆ ಎಪ್ರಿಲ್ ತಿಂಗಳಲ್ಲಿ ವಿನಾಯಕ ಚತುರ್ಥಿಯನ್ನು ಯಾವ ದಿನ ಆಚರಣೆ ಮಾಡಲಾಗುತ್ತದೆ? ಪೂಜೆಯ ಶುಭ ಸಮಯವೇನು? ಇಲ್ಲಿದೆ ಮಾಹಿತಿ.
ಹಿಂದೂ ಧರ್ಮದಲ್ಲಿ ವಿನಾಯಕ ಚತುರ್ಥಿಯನ್ನು ಬಹಳ ಮುಖ್ಯ ದಿನವೆಂದು ಪರಿಗಣಿಸಲಾಗಿದೆ. ಈ ದಿನವು ಪ್ರಥಮ ಪೂಜಿತ ಗಣೇಶ ದೇವನಿಗೆ ಸಮರ್ಪಿತವಾಗಿದೆ. ಪ್ರತಿ ತಿಂಗಳ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಚತುರ್ಥಿ ದಿನದಂದು, ಗಣೇಶನನ್ನು ಪೂಜಿಸುವ ಮೂಲಕ ಗಣೇಶನ ವಿಶೇಷ ಆಶೀರ್ವಾದವನ್ನು ಪಡೆಯಲಾಗುತ್ತದೆ. ಕೆಲವು ನಂಬಿಕೆಯ ಪ್ರಕಾರ, ವಿನಾಯಕ ಚತುರ್ಥಿಯ ದಿನದಂದು ಗಣೇಶನನ್ನು ಪೂಜಿಸುವವರಿಗೆ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಜೊತೆಗೆ ಸದಾಕಾಲ ಸಂತೋಷ, ಶಾಂತಿ, ಮನೆಯಲ್ಲಿ ಸಮೃದ್ದಿ ಇರುತ್ತದೆ. ಹಾಗಾದರೆ ಎಪ್ರಿಲ್ ತಿಂಗಳಲ್ಲಿ ವಿನಾಯಕ ಚತುರ್ಥಿಯನ್ನು ಯಾವ ದಿನ ಆಚರಣೆ ಮಾಡಲಾಗುತ್ತದೆ? ಪೂಜೆಯ ಶುಭ ಸಮಯವೇನು? ಇಲ್ಲಿದೆ ಮಾಹಿತಿ.
ವಿನಾಯಕ ಚತುರ್ಥಿ ಯಾವಾಗ?
ಹಿಂದೂ ಪಂಚಾಗದ ಪ್ರಕಾರ ವರ್ಷದ ಮೊದನೇಯ, ಅಂದರೆ ಚೈತ್ರ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯನ್ನು ಉದಯ ತಿಥಿಯ ಪ್ರಕಾರ, ಎ. 12 ರಂದು ಆಚರಣೆ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ, ಈ ದಿನ ಗಣೇಶನನ್ನು ಪೂಜಿಸಲು ಶುಭ ಸಮಯವು ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 1:11 ರವರೆಗೆ ಇರುತ್ತದೆ. ಎ.12ರ ವಿನಾಯಕ ಚತುರ್ಥಿಯಂದು ರಾತ್ರಿ 11:00 ಕ್ಕೆ ಚಂದ್ರಾಸ್ತ. ಆದರೆ ಈ ದಿನ ಚಂದ್ರನನ್ನು ನೋಡಬಾರದು, ಏಕೆಂದರೆ ವಿನಾಯಕ ಚತುರ್ಥಿಯ ಉಪವಾಸದ ಸಮಯದಲ್ಲಿ ಚಂದ್ರನನ್ನು ನೋಡುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಮನೆಯ ದೇವರ ಕೋಣೆಯಲ್ಲಿ ಈ ಮೂರು ವಿಗ್ರಹಗಳು ಇರಲೇಬೇಕು!
ವಿನಾಯಕ ಚತುರ್ಥಿ ಪೂಜಾ ವಿಧಾನ;
ಈ ದಿನ ಬೆಳಿಗ್ಗೆ ಬೇಗ ಎದ್ದು ದೇವರಿಗೆ ನಮಸ್ಕರಿಸುವ ಮೂಲಕ ದಿನವನ್ನು ಪ್ರಾರಂಭಿಸಬೇಕು. ಬಳಿಕ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಪೂಜಾ ಸ್ಥಳ ಅಥವಾ ನಿಮ್ಮ ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ಬೇಕಾದಲ್ಲಿ ಗಂಗಾ ಜಲವನ್ನು ಸಿಂಪಡಿಸುವ ಮೂಲಕ ದೇವರ ಕೋಣೆಯನ್ನು ಶುದ್ಧೀಕರಿಸಬಹುದು. ಬಳಿಕ ಮನೆಯಲ್ಲಿರುವ ಗಣೇಶನ ವಿಗ್ರಹದ ಮುಂದೆ ತುಪ್ಪದ ದೀಪ ಮತ್ತು ಧೂಪವನ್ನು ಹಚ್ಚಬೇಕು. ದೇವರ ಮುಂದೆ ಹೂವು, ಹಣ್ಣುಗಳನ್ನಿಟ್ಟು ದೇವರ ಪೀಠವನ್ನು ಅಲಂಕರಿಸಬೇಕು. ನೈವೇದ್ಯಕ್ಕಾಗಿ ಸಿಹಿ ತಿಂಡಿಯನ್ನು ಅರ್ಪಿಸಬೇಕು. ಮೋದಕ, ಲಡ್ಡು ಮತ್ತು ದೂರ್ವೆ ಹುಲ್ಲು ಗಣೇಶನಿಗೆ ತುಂಬಾ ಪ್ರಿಯವಾದದ್ದರಿಂದ ಅದನ್ನು ಅರ್ಪಣೆ ಮಾಡಿ ಆಶೀರ್ವಾದ ಪಡೆಯಿರಿ. ಬಳಿಕ ಗಣಪನಿಗೆ ಆರತಿ ಮಾಡಿ. ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಪಡೆಯಲು ಗಣೇಶನನ್ನು ಪ್ರಾರ್ಥಿಸಿ, ಮಾಡಿದ ಪ್ರಸಾದವನ್ನು ಎಲ್ಲರಿಗೂ ವಿತರಿಸಿ. ವಿನಾಯಕ ಚತುರ್ಥಿಯ ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದು ಮತ್ತು ಗಣೇಶನ ಭಜನೆಗಳನ್ನು ಹಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ