ಪ್ರದೋಷ ವ್ರತವು ಹಿಂದೂ ಧರ್ಮದಲ್ಲಿ ಬಹಳ ಮಹತ್ವದ್ದಾಗಿದೆ ಪಂಚಾಗದ ಪ್ರಕಾರ, ವರ್ಷದಲ್ಲಿ ಒಟ್ಟು 24 ಪ್ರದೋಷ ವ್ರತಾಚರಣೆಗಳಿವೆ. ಪ್ರದೋಷ ವ್ರತವು ಪ್ರತಿ ತಿಂಗಳು ಎರಡು ಬಾರಿ ಬರುತ್ತದೆ. ಅದು ತ್ರಯೋದಶಿ ತಿಥಿ, ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ. ಈ ಪವಿತ್ರ ದಿನದಂದು ಭಕ್ತರು ಉಪವಾಸ ವ್ರತವನ್ನು ಆಚರಿಸಿ ಶಿವ ಮತ್ತು ಪಾರ್ವತಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಸಾಹಿತ್ಯಿಕ ಅರ್ಥದಲ್ಲಿ ಪ್ರದೋಷವು ಸೂರ್ಯಾಸ್ತಕ್ಕೆ ಸಂಬಂಧಿಸಿದ ಸಮಯವಾಗಿದೆ. ಸೋಮವಾರದಂದು ಬರುವ ಪ್ರದೋಷ ವ್ರತವನ್ನು ಸೋಮ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಮಂಗಳವಾರ ಆಚರಿಸುವ ಉಪವಾಸವನ್ನು ಭೌಮ ಪ್ರದೋಷ ವ್ರತ, ಗುರುವಾರ ಆಚರಿಸುವ ವ್ರತವನ್ನು ಗುರು ಪ್ರದೋಷ ವ್ರತ ಹಾಗೂ ಶುಕ್ರವಾರ ಆಚರಿಸುವ ಪ್ರದೋಷ ವ್ರತವನ್ನು ಶುಕ್ರ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಪ್ರದೋಷ ವ್ರತವನ್ನು ಚಂದ್ರನ ಹದಿಮೂರನೆಯ ದಿನದಂದು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎರಡರಲ್ಲೂ ಆಚರಿಸಲಾಗುತ್ತದೆ. ಈ ತಿಂಗಳ ಎರಡನೇ ಪ್ರದೋಶ ವ್ರತವನ್ನು ಜೂನ್ 15 ರಂದು ಆಚರಿಸಲಾಗುತ್ತದೆ. ಈ ಪ್ರದೋಷ ವ್ರತವನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಈ ಗುರು ಪ್ರದೋಷ ವ್ರತವನ್ನು ಆಚರಿಸುವ ಮೂಲಕ ಭಕ್ತರು ತಮಗೆ ಬರುವ ಆಪತ್ತುಗಳನ್ನು ಪರಿಹರಿಸಿಕೊಳ್ಳಬಹುದು. ಇದಲ್ಲದೆ ಪ್ರದೋಷ ಕಾಲದಲ್ಲಿ ಶಿವನನ್ನು ಪೂಜಿಸಿದರೆ ಪಾಪಗಳು ನಿವಾರಣೆಯಾಗಿ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಪ್ರದೋಷ ವ್ರತದ ಮಹತ್ವವನ್ನು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಪೂಜ್ಯ ಉಪವಾಸವನ್ನು ಭಕ್ತಿ ಮತ್ತು ನಂಬಿಕೆಯಿಂದ ಆಚರಿಸುವವನು ಸಂತೃಪ್ತಿ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ. ಈ ಪುಣ್ಯದಿನದಂದು ಒಲಿಯುವ ದೇವರ ಕೃಪೆ ನಮ್ಮ ಎಲ್ಲಾ ಪಾಪಗಳನ್ನು ಕೊನೆಗೊಳಿಸುತ್ತದೆ ಹಾಗೂ ನಮಗೆ ಸಮೃದ್ಧಿ, ಅದೃಷ್ಟವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.
ಮೋಕ್ಷ ಮತ್ತು ಯಶಸ್ಸನ್ನು ಪಡೆಯಲು ಪ್ರದೋಷ ವ್ರತವನ್ನು ಆಚರಿಸಲಾಗಿತ್ತದೆ. ಈ ಸಮಯದಲ್ಲಿ ಶಿವನು ಅತ್ಯಂತ ಉದಾರನಾಗಿರುತ್ತಾನೆ ಮತ್ತು ತನ್ನ ಭಕ್ತರಿಗೆ ಸಮೃದ್ಧಿ ಮತ್ತು ಸಂತೋಷವನ್ನು ಅನುಗ್ರಹಿಸುತ್ತಾನೆ ಎಂದು ಹೇಳಲಾಗುತ್ತದೆ. ಪ್ರದೋಷ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರೆ, ದೇವರು ನಿಮ್ಮೆಲ್ಲಾ ಆಸೆಗಳು ಮತ್ತು ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಸ್ತ್ರೀ ಪುರುಷರು ಸಮಾನರೇ? ಇವರ ಸಮಾನತೆ ಬಗ್ಗೆ ಶಾಸ್ತ್ರ ಪುರಾಣಗಳು ಏನು ಹೇಳುತ್ತವೆ?
ಪ್ರದೋಷ ವ್ರತದ ದಿನ ಸಾಯಂಕಾಲ ಶಿವಪೂಜೆ ಮಾಡಿದರೂ ಬೆಳಗ್ಗೆಯಿಂದಲೇ ಉಪವಾಸವನ್ನು ಆಚರಿಸಬೇಕು. ಮುಂಜಾನೆಯೇ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಇದಾದ ನಂತರ ಭಕ್ತರು ಉಪವಾಸ ಪ್ರತಿಜ್ಞೆ ಮಾಡಬೇಕು. ಸಂಜೆ ಪ್ರದೋಷಕಾಲದಲ್ಲಿ ಶಿವನನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗಾಗಿ ಸಂಜೆ ಶಿವ ದೇವಾಲಯಕ್ಕೆ ಭೇಟಿ ನೀಡಿ ಶಿವನಿಗೆ ಅಭಿಷೇಕ ಮಾಡುವುದು ಪ್ರದೋಷ ವ್ರತದ ಒಂದು ಭಾಗವಾಗಿದೆ.
ಪ್ರದೋಷವು ಪಾಪಗಳ ಶುದ್ಧೀಕರಣವನ್ನು ಸೂಚಿಸುತ್ತದೆ. ಹಾಗಾಗಿ ಈ ವ್ರತವನ್ನು ಆಚರಿಸುವ ಮೂಲಕ ನಮ್ಮ ಆತ್ಮದ ಶುದ್ಧೀಕರಣವನ್ನು ಮಾಡುವ ಮೂಲಕ ನಕರಾತ್ಮಕ ಕರ್ಮವನ್ನು ತೆಗೆದು ಹಾಕಬಹುದು. ಇದನ್ನು ರುದ್ರಾಭಿಷೇಕದೊಂದಿಗೆ ಸಾಂಕೇತಿಕ ರೀತಿಯಲ್ಲಿ ಮಾಡಲಾಗುತ್ತದೆ.
ಪಂಚಾಂಗದ ಪ್ರಕಾರ ಜೂನ್ ತಿಂಗಳ ಎರಡನೇ ಪ್ರದೋಷ ವ್ರತವನ್ನು ಜೂನ್ 15 ರಂದು ಆಚರಿಸಲಾಗುತ್ತದೆ. ಈ ಪ್ರದೋಷ ವ್ರತದಲ್ಲಿ ಸಂಜೆ 7.20 ರಿಂದ ರಾತ್ರಿ 9.21 ರವರೆಗೆ ಪೂಜೆಯ ಶುಭ ಮುಹೂರ್ತ ನಡೆಯಲಿದೆ. ಈ ಶುಭ ಸಮಯದಲ್ಲಿ ಶಿವನಿಗೆ ಪೂಜೆ ಸಲ್ಲಿಸಬಹುದು.