ಸ್ತ್ರೀ ಪುರುಷರು ಸಮಾನರೇ? ಇವರ ಸಮಾನತೆ ಬಗ್ಗೆ ಶಾಸ್ತ್ರ ಪುರಾಣಗಳು ಏನು ಹೇಳುತ್ತವೆ?
ಸ್ವಾಭಾವಿಕವಾಗಿ ಸ್ತ್ರೀಯರು ಪುರುಷರಿಗೆ ಸಮಾನರಲ್ಲ ಎಂಬ ಭಾವನೆ ಹಲವರ ಮನದಲ್ಲಿ ಇದೆ. ಇದು ಸರಿಯಾದ ವ್ಯವಹಾರವೇ ಎಂದು ಕೇಳಿದರೆ ಹೌದು ಮತ್ತು ಅಲ್ಲ ಎಂಬುದು ಉತ್ತರ. ಜಗತ್ತಿನ ಒಂದು ಹಂತದ ಕಾಲಮಾನದಲ್ಲಿ ಸ್ತ್ರೀಯ ಅಥವಾ ಹೆಣ್ಣು ಮಗಳ ಕುರಿತಾಗಿ ತಾತ್ಸಾರ ಮನೋಭಾವ ಇದ್ದಿದ್ದಂತು ನಿಜ. ಆದರೆ ಇದು ಅಸಂಮಜಸವಾದ ಮನೋಭೂಮಿಕೆ.
ಸ್ವಾಭಾವಿಕವಾಗಿ ಸ್ತ್ರೀಯರು ಪುರುಷರಿಗೆ ಸಮಾನರಲ್ಲ ಎಂಬ ಭಾವನೆ ಹಲವರ ಮನದಲ್ಲಿ ಇದೆ. ಇದು ಸರಿಯಾದ ವ್ಯವಹಾರವೇ ಎಂದು ಕೇಳಿದರೆ ಹೌದು ಮತ್ತು ಅಲ್ಲ ಎಂಬುದು ಉತ್ತರ. ಜಗತ್ತಿನ ಒಂದು ಹಂತದ ಕಾಲಮಾನದಲ್ಲಿ ಸ್ತ್ರೀಯ ಅಥವಾ ಹೆಣ್ಣು ಮಗಳ ಕುರಿತಾಗಿ ತಾತ್ಸಾರ ಮನೋಭಾವ ಇದ್ದಿದ್ದಂತು ನಿಜ. ಆದರೆ ಇದು ಅಸಂಮಜಸವಾದ ಮನೋಭೂಮಿಕೆ. ಇದರ ಪರಿಣಾಮವೇ ಇಂದು ಹಲವಾರು ಸಮುದಾಯಗಳಲ್ಲಿ ಮದುವೆಗೆ ಕನ್ಯೆಯಿಲ್ಲದೆ ಪರದಾಡುವ ಸ್ಥಿತಿ ಬಂದಿದೆ. ಅದೇನೇ ಇರಲಿ ಹೆಣ್ಣು ಗಂಡಿನ ವಿಚಾರದಲ್ಲಿ ಸಮಾನತೆ ಕುರಿತಾಗಿ ನಮ್ಮ ಸಂಪ್ರದಾಯ ಮತ್ತು ಪುರಾಣಗಳು ಇತಿಹಾಸಗಳು ಏನು ಹೇಳುತ್ತವೆ ಎಂದು ನೋಡೋಣ. ವಾಸ್ತವವಾಗಿ ಪುರಾಣ ಸಂಪ್ರದಾಯಗಳು ಎಂದಿಗೂ ಹೆಣ್ಣನ್ನು ಕೀಳಾಗಿ ಚಿತ್ರಿಸಿಲ್ಲ ಮತ್ತು ಭೋಗದ ವಸ್ತು ಎಂಬಂತೆ ಬಿಂಬಿಸಿಲ್ಲ. ಅದು ಕೇವಲ ತುಚ್ಛ ಮನೋಭಾವವುಳ್ಳ ಜನರ ಕೀಳು ಭಾವವಷ್ಟೇ ಆಗಿದೆ. ನಮ್ಮ ಇತಿಹಾಸ ಗ್ರಂಥವಾದ ರಾಮಾಯಣದಲ್ಲಿ ಒಂದು ಮಾತು ಹೀಗಿದೆ .
ಅಪಿ ಸ್ವರ್ಣ ಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ| ಜನನೀ ಜನ್ಮ ಭೂಮಿಶ್ಚ ಸ್ವರ್ಗಾತ್ ಅಪಿ ಗರೀಯಸೀ ||
ಈ ಮಾತನ್ನು ರಾಮ ಲಕ್ಷ್ಮಣನಿಗೆ ಹೇಳುತ್ತಾನೆ. ರಾವಣನ ಸಂಹಾರವಾದ ಮೇಲೆ ಲಕ್ಷ್ಮಣ ಹೇಳುತ್ತಾನೆ ಅಯ್ಯಾ ರಾಮ ನಾವಿನ್ನು ಅಯೋಧ್ಯೆಗೆ ತೆರಳುವ ಅನಿವಾರ್ಯತೆ ಏನಿದೆ? ಇಲ್ಲೇ ಇರೋಣ ಎಂದು. ಆಗ ರಾಮ ಹೇಳುವ ಮಾತು ಮೇಲಿನ ಶ್ಲೋಕ. ತಾತ್ಪರ್ಯ ಹೀಗಿದೆ ಲಂಕೆಯೆಂಬುದು ಸ್ವರ್ಣಮಯವಾಗಿದ್ದರೂ ಅದು ನನಗೆ ರುಚಿಸುವುದಿಲ್ಲ. ಏಕೆಂದರೆ ಜನನಿ (ತಾಯಿ) ಜನ್ಮಭೂಮಿ (ಹುಟ್ಟಿದ ಊರು) ಇವೆರಡು ಸ್ವರ್ಗಕ್ಕಿಂತಲೂ ಹೆಚ್ಚು ಎಂದು.
ಇಲ್ಲಿ ನಾವು ಗಮನಿಸಬೇಕು ಜನನಿ ಅಂದರೆ ತಾಯಿ . ಅವಳು ಒಬ್ಬಳು ಹೆಣ್ಣು. ಭೂಮಿ ಅವಳೂ ತಾಯಿಯೇ. ಅವಳೂ ಒಬ್ಬಳು ಹೆಣ್ಣೇ ಆಗಿರುವಳು. ಬಾಲ್ಯದಲ್ಲಿ ತಾಯಿ ಎದೆಹಾಲು ನೀಡಿ ಪೋಷಿಸಿದರೆ. ಬೆಳೆಯುತ್ತಾ ಭೂಮಿತಾಯಿ ತನ್ನ ಗರ್ಭದಿಂದ ಅನ್ನವಿತ್ತು ಸಲಹುವಳು. ಅಲ್ಲದೇ ಇಡೀ ಸೃಷ್ಟಿಯಲ್ಲಿ ತನ್ನೊಳಗೆ ಇನ್ನೊಂದು ಜೀವವನ್ನು(ಒಂದು ಜೀವದೊಳಗೆ ಇನ್ನೊಂದು ಜೀವವನ್ನು) ಪೋಷಿಸುವವಳು ಒಂದು ಹೆಣ್ಣು ಜೀವ ಮಾತ್ರ. ಬೇರೆ ಯಾರಿಗೂ ಆ ಸಾಮರ್ಥ್ಯವನ್ನು ಭಗವಂತ ನೀಡಿಲ್ಲ. ಆದ್ದರಿಂದ ಅವರಿರುವ ಸ್ಥಾನ ಅತ್ಯಂತ ಪವಿತ್ರವಾದದ್ದು ಎಂಬ ಕಾರಣಕ್ಕೆ ರಾಮ ಹೇಳಿರಬೇಕು ತನಗೆ ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂದು.
ಇದನ್ನೂ ಓದಿ: Yogini Ekadashi 2023: ಯೋಗಿನಿ ಏಕಾದಶಿ ಯಾವಾಗ, ಅಂದು ಮಾಡುವ ಉಪವಾಸದ ಹಿಂದಿನ ಕಥೆ, ಅದರ ಮಹತ್ವ
ವರ್ತಮಾನದಲ್ಲಿ ಇದನ್ನರಿಯದೇ ತಾಯಿನಾಡನ್ನು ಹೆತ್ತಮ್ಮನನ್ನು ಜರೆಯುವವರು ಹಲವರಿದ್ದರೂ ಅವರಿಂದ ಎಂದಿಗೂ ಇವರ ಋಣ ತೀರಿಸಲು ಸಾಧ್ಯವಿಲ್ಲ ಅಲ್ಲವೇ? ಈಗ ಯೋಚಿಸಿ ಅಂತ ಉತ್ತಮ ತಾಯ್ತನದ ಯೋಗ ಮತ್ತು ಯೋಗ್ಯತೆಯುಳ್ಳ ಒಬ್ಬ ಹೆಣ್ಣು ಮಗಳು ಒಂದು ಭೋಗದ ವಸ್ತುವೇ? ಮತ್ತು ಅವಳು ಅಬಲಳಾಗಿದ್ದರೂ ಸಬಲರನ್ನು ರೂಪಿಸುವಂತವಳು ಆಗಿರುವಾಗ ಒಬ್ಬ ಪುರುಷನಿಗೆ ಅವಳು ಸಮಾನಳೇ?
ನಿಶ್ಚಯವಾಗಿ ಹೇಳುವೆ ಸ್ತ್ರೀ ಎಂದಿಗೂ ಪುರುಷನಿಗೆ ಸಮಾನಳಲ್ಲ. ಅವಳು ಪುರುಷನಿಗಿಂತ ಅದೆಷ್ಟೋ ಉತ್ತಮಳು. ಅವಳನ್ನು ಎಂದಿಗೂ ಒಬ್ಬ ಪುರುಷನಿಗೆ ಸಮಾನವಾಗಿ ಚಿತ್ರಸಬಾರದು. ಏಕೆಂದರೆ ಅವಳು ದೇವಾಲಯದ ದೇವರಂತೆ, ಅನ್ನ ನೀಡುವ ಭೂಮಿಯಂತೆ , ಹಾಲು ನೀಡುವ ಮುಗ್ಧ ಗೋವಿನಂತೆ, ನೆರಳ ನೀಡುವ ವೃಕ್ಷದಂತೆ ಅತ್ಯಂತ ಉತ್ಕೃಷ್ಟಳು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಾಲ್ಯದಲ್ಲಿ ತವರನ್ನು ಯೌವ್ವನದಲ್ಲಿ ಪತಿಯನ್ನು ಇಳಿಯಲ್ಲಿ ಮಕ್ಕಳನ್ನು ತನ್ನ ಕಷ್ಟ ಲೆಕ್ಕಿಸದೇ ಸಲಹುವವಳು ಅಲ್ಲವೇ?
ಈಗ ಹೇಳಿ ಹೆಣ್ಣು ಪುರುಷನಿಗೆ ಸಮಾನಳೇ? ಉತ್ತರ ಅಲ್ಲ ಎಂಬುದಾಗಿಯೇ ಇರುತ್ತದೆ ಅಲ್ಲವೇ? ಪುರಾಣವಿರಲಿ ಶಾಸ್ತ್ರವಿರಲಿ ವೇದವಿರಲಿ ಹೆಣ್ಣು ಭೂಮಿ ಇತ್ಯಾದುವುಗಳಿಗೆ ಅಪಾರ ಗೌರವ ಮತ್ತು ಮುಖ್ಯ ಸ್ಥಾನವನ್ನು ನೀಡಿದೆ. ಆದ್ದರಿಂದ ತಾಯಿ ಮೊದಲ ಗುರು ಮತ್ತು ದೇವರು. ಅನ್ನ ನೀರು ಆಶ್ರಯ ನೀಡುವ ಭೂಮಿ ದೇವರು. ಹಾಲು ಕೊಡುವ ಗೋಮಾತೆ ದೇವರು. ಮಾತೆಯ ಕುರಿತು ಏನೂ ಮಾತೇ ಇಲ್ಲ. ಅವಳು ಯಾರಿಗೂ ಸಮಾನಳಲ್ಲ. ಅವಳು ಸಾಟಿಯಿಲ್ಲದ ಚೈತನ್ಯ.
ಲೇಖನ: ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು