ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಸಹ ಪ್ರತಿವರ್ಷ ಪರೀಕ್ಷೆಗಳನ್ನು ನಡೆಸಲಿ: ಪ್ರದೀಪ್ ಈಶ್ವರ್
ಇಂಗ್ಲಿಷ್ ಭಾಷೆಯಲ್ಲಿ ತಯಾರಾಗುವ ಪ್ರಶ್ನೆಪತ್ರಿಕೆಯನ್ನು ವರ್ಬ್ಯಾಟಿಮ್ ಅಗಿ ಭಾಷಾಂತರಿಸಿದರೆ ಪ್ರಮಾದಗಳು ಸಹಜ, ಎಐ ಸಹ ಸರಿಯಾದ ಭಾಷಾಂತರ ಮಾಡಲ್ಲ, ಹಾಗಾಗಿ ಭಾಷಾಂತರ ಕೆಲಸಕ್ಕೆ ಭಾಷಾ ತಜ್ಞ ಮತ್ತು ಆಯಾ ವಿಷಯ ತಜ್ಞರನ್ನು ಜೊತೆಯಲ್ಲಿ ಕೂರಿಸಬೇಕು ಎಂದು ಪ್ರದೀಪ್ ಈಶ್ವರ್ ಹೇಳುತ್ತಾರೆ. ನಾಲ್ಕೈದು ವರ್ಷಗಳಿಗೊಮ್ಮೆ ಕೆಪಿಎಸ್ಸಿ ಪರೀಕ್ಷೆ ನಡೆಸಿದರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಭ್ಯರ್ಥಿಗಳಲ್ಲಿ ಗೊಂದಲ ಮೂಡುತ್ತದೆ ಎಂದು ಸಹ ಅವರು ಹೇಳಿದರು.
ಬೆಂಗಳೂರು, 13 ಮಾರ್ಚ್: ಬಜೆಟ್ ಅಧಿವೇಶನದಲ್ಲಿ ಭಾಗಿಯಾಗುವ ಮೊದಲು ಮಾಧ್ಯಮಗಳ ಜೊತೆ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಪ್ರಮಾದ ಮತ್ತು ಅವ್ಯವಹಾರಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಸರ್ಕಾರ ಅನ್ಯಾಯಕ್ಕೊಳಗಾಗಿರುವ ಅಭ್ಯರ್ಥಿಗಳ ಪರ ನಿಲ್ಲುವ ಭರವಸೆ ವ್ಯಕ್ತಪಡಿಸಿದರು. ಪರಿಶ್ರಮ ಅಕಾಡೆಮಿ (Parishrama Academy) ನಡೆಸುವ ಪ್ರದೀಪ್ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯಲು ಹಲವು ಸಲಹೆಗಳನ್ನು ಮಾಧ್ಯಮದ ಜೊತೆ ಶೇರ್ ಮಾಡಿ, ಅವುಗಳನ್ನು ಸದನದ ಗಮನಕ್ಕೂ ತರುವುದಾಗಿ ಹೇಳಿದರು. ಕೇಂದ್ರ ಲೋಕಸೇವಾ ಆಯೋಗದಂತೆ ಕರ್ನಾಟಕ ಲೋಕಸೇವಾ ಆಯೋಗವೂ ಪ್ರತಿವರ್ಷ ಪರೀಕ್ಷೆ ನಡೆಸಬೇಕು ಮತ್ತು ಕ್ಯಾಲೆಂಡರ್ ಆಫ್ ಈವೆಂಟ್ಸ್ ಅನ್ನು ಮೊದಲೇ ಪ್ರಕಟಿಸಬೇಕು ಎನ್ನುವ ಅವರು ಎಲ್ಲ ಪ್ರಕ್ರಿಯೆಯನ್ನು 8-10 ತಿಂಗಳಲ್ಲಿ ಮುಗಿಸಬೇಕು ಎಂದು ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: KPSC ಅನ್ಯಾಯದ ಕುರಿತು ರಾಜ್ಯಪಾಲರಿಗೆ ದೂರು: KAS ಮರು ಪರೀಕ್ಷೆಯಾಗುತ್ತಾ?