AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಈ ಅಭ್ಯಾಸಗಳೇ ಮನೆಯಲ್ಲಿ ದುಷ್ಟ ಶಕ್ತಿಯ ಹೆಚ್ಚಳಕ್ಕೆ ಕಾರಣವಾಗಬಹುದು!

ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಆರು ಅಭ್ಯಾಸಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ತಡವಾಗಿ ಎದ್ದೇಳುವುದು, ಹಿರಿಯರನ್ನು ಅವಮಾನಿಸುವುದು, ಪ್ರಾಣಿಗಳಿಗೆ ಹಿಂಸೆ, ಅಸೂಯೆ, ಉಗುರು ಕಚ್ಚುವುದು ಮತ್ತು ನೀರನ್ನು ವ್ಯರ್ಥ ಮಾಡುವುದು ಇವುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿಯೊಂದು ಅಭ್ಯಾಸದ ಪರಿಣಾಮಗಳನ್ನು ಮತ್ತು ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂಬುದನ್ನು ವಿವರಿಸಲಾಗಿದೆ.

ನಿಮ್ಮ ಈ ಅಭ್ಯಾಸಗಳೇ ಮನೆಯಲ್ಲಿ ದುಷ್ಟ ಶಕ್ತಿಯ ಹೆಚ್ಚಳಕ್ಕೆ ಕಾರಣವಾಗಬಹುದು!
Negative Energy Home
ಅಕ್ಷತಾ ವರ್ಕಾಡಿ
|

Updated on: Mar 13, 2025 | 8:52 AM

Share

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾದಂತೆ ಖಿನ್ನತೆ, ಚಿಂತನೆ, ಆರ್ಥಿಕ ಅಥವಾ ಆರೋಗ್ಯ ಸಮಸ್ಯೆಗಳಂತಹ ವಿವಿಧ ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದ್ದರಿಂದ ಸದಾ ಮನೆ ಪಾಸಿಟಿವ್​ ಶಕ್ತಿಯಿಂದ ತುಂಬಿರಬೇಕಾದರೆ ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಬದಲಾವಣೆಯನ್ನು ಮಾಡಬೇಕು. ಯಾಕೆಂದರೆ ನಿಮ್ಮ ಕೆಲವು ಅಭ್ಯಾಸಗಳೇ ಮನೆಯಲ್ಲಿ ದುಷ್ಟ ಶಕ್ತಿಯ ಹೆಚ್ಚಳಕ್ಕೆ ಕಾರಣವಾಗಬಹುದು. ಆದ್ದರಿಂದ ಏನೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಆರತಿ ದಹಿಯಾ ವಿವರಿಸುತ್ತಾರೆ.

ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು:

ನೀವು ಪ್ರತಿದಿನ ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸವನ್ನು ಹೊಂದಿದ್ದರೆ, ಅದು ನಿಮಗೆ ಮಾತ್ರವಲ್ಲದೇ ನಿಮ್ಮ ಮನೆಯಲ್ಲೂ ಸಮಸ್ಯೆಗಳನ್ನು ಉಂಟುಮಾಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯೋದಯಕ್ಕೆ ಮುಂಚೆ ಎಚ್ಚರಗೊಂಡು ಮಧ್ಯರಾತ್ರಿಯ ಮೊದಲು ಮಲಗಬೇಕು.

ಹಿರಿಯರನ್ನು ಅವಮಾನಿಸುವುದು:

ಒಬ್ಬ ವ್ಯಕ್ತಿಯು ತನ್ನ ಗುರುಗಳನ್ನು ಅಗೌರವಿಸಿದರೆ ಅಥವಾ ಹಿರಿಯರನ್ನು ಅವಮಾನಿಸಿದರೆ, ಅದು ಜಾತಕದಲ್ಲಿ ಹಾನಿಯನ್ನುಂಟು ಮಾಡುತ್ತದೆ ಎಂದು ನಂಬಲಾಗಿದೆ.” ಈ ಗ್ರಹದ ದುಷ್ಟತನವು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ, ಇದರಿಂದಾಗಿ ನೀವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗುವುದಿಲ್ಲ. ಈ ದೋಷವು ನಿಮ್ಮ ಕೆಲಸದಲ್ಲಿ ಸಮಸ್ಯೆಗಳನ್ನು ಮತ್ತು ವೃತ್ತಿಜೀವನದ ವೈಫಲ್ಯವನ್ನು ಉಂಟುಮಾಡಬಹುದು.

ಪ್ರಾಣಿಗಳಿಗೆ ಹಿಂಸೆ:

ನೀವು ನಿಮ್ಮ ಮನೆಯಲ್ಲಿ ಯಾವುದೇ ಪ್ರಾಣಿಗಳನ್ನು ಸಾಕಿದರೆ ಅದಕ್ಕೆ ಹಾನಿ ಮಾಡಬೇಡಿ. ಮುಗ್ಧ ಪ್ರಾಣಿಗಳಿಗೆ ಹಾನಿ ಮಾಡಿದರೆ, ಅದು ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ನಿಮ್ಮ ಈ ಅಭ್ಯಾಸವು ಕೇತುವಿನ ದುಷ್ಪರಿಣಾಮಗಳಿಗೂ ಕಾರಣವಾಗಬಹುದು, ಇದು ಜೀವನದಲ್ಲಿ ಅನಾನುಕೂಲತೆಯನ್ನು ಉಂಟುಮಾಡುತ್ತದೆ.

ಅಸೂಯೆ ಪಡುವುದು:

ಇತರರ ಯಶಸ್ಸಿಗೆ ನೀವು ಅನುಭವಿಸುವ ಅಸೂಯೆ ಕೂಡ ಸಮಸ್ಯೆಯಾಗಿದೆ. ಇದು ನಿಮ್ಮನ್ನು ಕೊಲ್ಲುವುದಲ್ಲದೇ ನಿಮ್ಮ ಮನೆಯಲ್ಲೂ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಬೇರೆಯವರ ಪ್ರಗತಿಗೆ ಅಡ್ಡಿಪಡಿಸುವ ಬಗ್ಗೆ ಯೋಚಿಸಿದರೆ, ಅದು ರಾಹು ದೋಷವಾಗಿ ನಿಮ್ಮ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಅಪ್ಪಿ ತಪ್ಪಿಯೂ ಒಂಟಿಯಾಗಿ ಕ್ಷೇತ್ರ ದರ್ಶನ ಮಾಡಬೇಡಿ; ಕಾರಣ ಇಲ್ಲಿದೆ

ಉಗುರು ಕಚ್ಚುವುದು:

ಹಲವರಿಗೆ ಉಗುರು ಕಚ್ಚುವ ಕೆಟ್ಟ ಅಭ್ಯಾಸವಿರುತ್ತದೆ. ಅದು ಎಷ್ಟು ಹಾನಿಕಾರಕ ಎಂಬುದು ತಿಳಿದಿಲ್ಲ. ನಿಮಗೂ ಈ ಅಭ್ಯಾಸವಿದ್ದರೆ, ತಕ್ಷಣ ಅದನ್ನು ಬದಲಾಯಿಸಿ, ಏಕೆಂದರೆ ಇದು ನಿಮ್ಮ ಜಾತಕದಲ್ಲಿ ರಾಹುವನ್ನು ದುರ್ಬಲಗೊಳಿಸಬಹುದು. ಈ ಅಭ್ಯಾಸವು ನಿಮಗೆ ಶನಿ ಗ್ರಹದ ಹಾನಿಯನ್ನುಂಟುಮಾಡಬಹುದು. ಜೊತೆಗೆ ಮನೆಯ ಒಳಗೆ ಕುಳಿತು ಉಗುರು ಕಚ್ಚುವುದು ಹಾಗೂ ಅಲ್ಲಲ್ಲಿ ಉಗುರುಗಳನ್ನು ಬಿಸಾಕುವ ಅಭ್ಯಾಸವನ್ನೂ ಬಿಟ್ಟು ಬಿಡಿ.

ನೀರಿನ ವ್ಯರ್ಥ:

ನೀವು ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡಿದರೆ, ನಿಮಗೆ ಎಂದಿಗೂ ಮನಸ್ಸಿನ ಶಾಂತಿ ಇರುವುದಿಲ್ಲ ಮತ್ತು ಮನೆಯಲ್ಲಿ ಅನಗತ್ಯ ಜಗಳಗಳು ನಡೆಯುತ್ತವೆ. ನೀವು ನೀರು ವ್ಯರ್ಥ ಮಾಡಿದಷ್ಟು ನಿಮ್ಮ ಮನೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚುತ್ತಾ ಹೋಗುತ್ತದೆ.

(ಹಕ್ಕು ನಿರಾಕರಣೆ : ಈ ಮಾಹಿತಿ ಜ್ಯೋತಿಷ್ಯ, ನಂಬಿಕೆ ಆಧಾರಿತವಾಗಿದೆ. ಟಿವಿ9 ಕನ್ನಡದ ಅಭಿಪ್ರಾಯವಾಗಿರುವುದಿಲ್ಲ.)

ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​