ಅಪ್ಪಿ ತಪ್ಪಿಯೂ ಒಂಟಿಯಾಗಿ ಕ್ಷೇತ್ರ ದರ್ಶನ ಮಾಡಬೇಡಿ; ಕಾರಣ ಇಲ್ಲಿದೆ
ಜ್ಯೋತಿಷಿ ಬಸವರಾಜ ಗುರೂಜಿಯವರು ಹೇಳುವಂತೆ, ಒಂಟಿಯಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದು ಅಶುಭ. ಒಂಟಿ ಜೀವನ, ಒಂಟಿ ಭೋಜನ, ಮತ್ತು ಒಂಟಿ ದೇವಸ್ಥಾನ ದರ್ಶನ ಒಳ್ಳೆಯದಲ್ಲ ಎಂದು ಅವರು ಹೇಳುತ್ತಾರೆ. ವಿವಾಹಿತರು ಜೊತೆಯಾಗಿ, ಸನ್ಯಾಸಿಗಳು ಶಿಷ್ಯರೊಂದಿಗೆ, ವೃದ್ಧರು ಸಹಾಯಕರೊಂದಿಗೆ ಹೋಗಬೇಕು. ಸ್ತ್ರೀಯರು ಯಾವುದೇ ವಯಸ್ಸಿನಲ್ಲಿದ್ದರೂ ಒಂಟಿಯಾಗಿ ಹೋಗಬಾರದು. ಜೊತೆಯಾಗಿ ಹೋಗುವುದರಿಂದ ಭಗವಂತನ ಅನುಗ್ರಹ ಹೆಚ್ಚು ಸಿಗುತ್ತದೆ ಎಂಬ ನಂಬಿಕೆಯಿದೆ.

ನಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ಅಲ್ಲಿ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡುವುದು ಸಾಮಾನ್ಯ. ಕೆಲವೊಮ್ಮೆ ಕುಟುಂಬ ಸಮೇತವಾಗಿ ದೇವಾಲಯಕ್ಕೆ ಭೇಟಿ ನೀಡಿದರೆ ಇನ್ನೂ ಕೆಲವೊಮ್ಮೆ ಒಂಟಿಯಾಗಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಬರುತ್ತೇವೆ. ಆದರೆ ಒಂಟಿಯಾಗಿ ಹೋಗಿ ದೇವತಾ ದರ್ಶನ ಪಡೆಯುವುದು ಶುಭವಲ್ಲ ಎಂದು ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ಹೇಳುತ್ತಾರೆ.
ಒಂಟಿ ಜೀವನ, ಒಂಟಿಯಾಗಿ ಭೋಜನ ಸೇವನೆ ಜೊತೆಗೆ ಒಂಟಿಯಾಗಿ ಕ್ಷೇತ್ರ ದರ್ಶನ ಮಾಡುವುದು ಒಳ್ಳೆಯದಲ್ಲ ಎಂದು ಗುರೂಜಿ ಒತ್ತಿ ಹೇಳುತ್ತಾರೆ. ಈ ರೀತಿ ನೀವು ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಯಾವುದೆ ಶುಭಫಲ ದೊರೆಯುವುದಿಲ್ಲ ಎಂದು ನಂಬಲಾಗಿದೆ. ಗರೂಜಿಯವರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ವಿದ್ಯಾರ್ಥಿಗಳು ಎಲೆ-ಅಡಿಕೆ ಸೇವನೆ ಏಕೆ ಮಾಡಬಾರದು? ಮಾಹಿತಿ ಇಲ್ಲಿದೆ
ನೀವು ವಿವಾಹಿತರೇ ಎಂದು ಆಗಬೇಕಿಲ್ಲ, ಸನ್ಯಾಸಿಗಳು ತಮ್ಮ ಶಿಷ್ಯರೊಂದಿಗೆ, ಬ್ರಹ್ಮಚಾರಿಗಳು ಸ್ನೇಹಿತರೊಂದಿಗೆ, ವೃದ್ಧರು ಸಹಾಯಕರೊಂದಿಗೆ ಹೋಗಬೇಕು. ವಿವಾಹಿತ ದಂಪತಿಗಳು ಒಟ್ಟಾಗಿ ದೇವಸ್ಥಾನಕ್ಕೆ ಹೋಗುವುದು ಶುಭಕರ ಎಂದು ಪುರಾಣಗಳು ಹೇಳುತ್ತವೆ. ಒಬ್ಬಂಟಿಯಾಗಿ ಹೋಗುವುದರಿಂದ ಪೂರ್ಣ ಫಲ ಸಿಗುವುದಿಲ್ಲ. ಸ್ತ್ರೀಯರು ಯಾವುದೇ ವಯಸ್ಸಿನಲ್ಲಿದ್ದರೂ ಒಂಟಿಯಾಗಿ ಕ್ಷೇತ್ರ ದರ್ಶನ ಮಾಡಬಾರದು. ಜಂಟಿಯಾಗಿ ಹೋಗುವುದರಿಂದ ಭಗವಂತನ ಅನುಗ್ರಹ ಹೆಚ್ಚು ಸಿಗುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:36 am, Wed, 12 March 25