ವಿದ್ಯಾರ್ಥಿಗಳು ಎಲೆ-ಅಡಿಕೆ ಸೇವನೆ ಏಕೆ ಮಾಡಬಾರದು? ಮಾಹಿತಿ ಇಲ್ಲಿದೆ
ಬಸವರಾಜ ಗುರೂಜಿ ಅವರು ವಿದ್ಯಾರ್ಥಿಗಳು ತಾಂಬೂಲ ಸೇವನೆಯನ್ನು ತಪ್ಪಿಸಬೇಕೆಂದು ಸಲಹೆ ನೀಡುತ್ತಾರೆ. ಪ್ರಾಚೀನ ಶಾಸ್ತ್ರಗಳಲ್ಲಿ "ಛಾತ್ರೈ ತಾಂಬೂಲಂ ನಭಕ್ಷಣೀಯಂ" ಎಂಬ ಶ್ಲೋಕವಿದೆ. ತಾಂಬೂಲದಲ್ಲಿರುವ ಸುಣ್ಣ, ಅಡಿಕೆ ಮುಂತಾದ ಪದಾರ್ಥಗಳು ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸಬಹುದು ಮತ್ತು ಅವರ ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ. ಆದರೆ ಗೃಹಸ್ಥರು ಮತ್ತು ವಯಸ್ಕರಿಗೆ ಯಾವುದೇ ನಿರ್ಬಂಧವಿಲ್ಲ.

ಸಾಮಾನ್ಯವಾಗಿ ಊಟ ಆದ ಬಳಿಕ ವೀಳ್ಯದೆಲೆ -ಅಡಿಕೆ ತಿನ್ನುತ್ತಾರೆ. ಮದುವೆ, ಮುಂಜಿ ಇರಲಿ, ನಾಮಕರಣ, ಪೂಜೆ ಇರಲಿ ವೀಳ್ಯದೆಲೆ ಇಲ್ಲದೆ ಯಾವ ಶುಭ ಸಮಾರಂಭವೂ ನಡೆಯುವುದಿಲ್ಲ. ವೀಳ್ಯದೆಲೆಯನ್ನು ತಾಂಬೂಲ, ತಮಲಪಾಕು, ನಾಗವಲ್ಲಿ, ನಾಗರಬೆಲ್ ಎಂದು ಸಹ ಕರೆಯುತ್ತಾರೆ. ವೀಳ್ಯದೆಲೆಯನ್ನು ಊಟದ ನಂತರ ಉಪಹಾರವಾಗಿ ಬಳಸಲಾಗುತ್ತದೆ. ಪರಿಮಳಯುಕ್ತ ಸುವಾಸೆಯು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ.
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದು ನಿಷಿದ್ಧ ಎಂದು ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ಹೇಳುತ್ತಾರೆ. ಆದರೆ ವಿದ್ಯಾರ್ಥಿಗಳು ತಾಂಬೂಲ ಅಥವಾ ವೀಳ್ಯದೆಲೆಯನ್ನು ಏಕೆ ತಿನ್ನಬಾರದು ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲವೆಂದರೆ ಬಸವರಾಜ ಗುರೂಜಿಯವರು ನೀಡಿರುವ ಸಂಪೂರ್ಣ ವಿವರಗಳು ಈ ವಿಡಿಯೋದಲ್ಲಿದೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಯವರು ಜಾಗರೂಕರಾಗಿರಿ!
ಗುರೂಜಿ ಹೇಳುವಂತೆ, ಪ್ರಾಚೀನ ಶಾಸ್ತ್ರಗಳಲ್ಲಿ, “ಛಾತ್ರೈ ತಾಂಬೂಲಂ ನಭಕ್ಷಣೀಯಂ” ಎಂಬ ಶ್ಲೋಕವಿದೆ, ಈ ಶ್ಲೋಕ ವಿದ್ಯಾರ್ಥಿಗಳು ತಾಂಬೂಲವನ್ನು ತಿನ್ನಬಾರದು ಎಂಬ ಅರ್ಥವನ್ನು ನೀಡುತ್ತದೆ. ಇದಕ್ಕೆ ಕಾರಣ, ತಾಂಬೂಲದಲ್ಲಿರುವ ವಿವಿಧ ಪದಾರ್ಥಗಳಾದ ಸುಣ್ಣ, ಅಡಿಗೆ ಇತ್ಯಾದಿ. ಇದು ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸಬಹುದು ಮತ್ತು ಅವರ ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ. ಇದಲ್ಲದೇ ಎಲೆ ಅಡಿಕೆ ತಿನ್ನುವುದರಿಂದ ಕಾಮೋದ್ರೇಕ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಆದಾಗ್ಯೂ, ಗೃಹಸ್ಥರು ಮತ್ತು ವಯಸ್ಕರಿಗೆ ತಾಂಬೂಲ ಸೇವನೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಸಲಹೆ ನೀಡುತ್ತಾರೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ