Yogini Ekadashi 2023: ಯೋಗಿನಿ ಏಕಾದಶಿ ಯಾವಾಗ, ಅಂದು ಮಾಡುವ ಉಪವಾಸದ ಹಿಂದಿನ ಕಥೆ, ಅದರ ಮಹತ್ವ

ಹಿಂದೂ ಧರ್ಮದಲ್ಲಿ ಯೋಗಿನಿ ಏಕಾದಶಿ ಉಪವಾಸ ಆಚರಣೆಗೆ ವಿಶೇಷ ಮಹತ್ವವಿದೆ. ಈ ದಿನದಂದು ವಿಷ್ಣು ದೇವರನ್ನು ಪೂಜಿಸಲಾಗುತ್ತದೆ. ಈ ದಿನ ಉಪವಾಸವನ್ನು ಆಚರಿಸುವವರು ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ ಎನ್ನುವ ನಂಬಿಕೆಯಿದೆ.

Yogini Ekadashi 2023: ಯೋಗಿನಿ ಏಕಾದಶಿ ಯಾವಾಗ, ಅಂದು ಮಾಡುವ ಉಪವಾಸದ ಹಿಂದಿನ ಕಥೆ, ಅದರ ಮಹತ್ವ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2023 | 7:15 AM

ಹಿಂದೂ ಧರ್ಮದಲ್ಲಿ ಏಕಾದಶಿಯ ದಿನಕ್ಕೆ ಹೆಚ್ಚಿನ ಪ್ರಾಮುಖ್ಯವಿದೆ. ಏಕಾದಶಿ ತಿಥಿ ಪ್ರತಿ ತಿಂಗಳಿಗೆ ಎರಡು ಬಾರಿ ಬರುತ್ತದೆ. ಕೃಷ್ಣ ಪಕ್ಷದಲ್ಲಿ ಒಂದು ಮತ್ತು ಶುಕ್ಷ ಪಕ್ಷದಲ್ಲಿ ಒಂದು. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿಗಳಿವೆ. ಅದರಲ್ಲಿ ಯೋಗಿನಿ ಏಕಾದಶಿಯು ಒಂದು. ಹಿಂದೂ ಸಂಪ್ರದಾಯದಲ್ಲಿ ಯೋಗಿನಿ ಏಕಾದಶಿಯ ಉಪವಾಸಕ್ಕೆ ಹೆಚ್ಚಿನ ಮಹತ್ವವಿದೆ. ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮೀ ದೇವಿ ಸಂತುಷ್ಟರಾಗುತ್ತಾರೆ ಮತ್ತು ಬಯಸಿದ ಫಲಿತಾಂಶಗಳನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ. ಯೋಗಿನಿ ಏಕಾದಶಿಯ ದಿನದಂದು ಪೂಜೆ ಮತ್ತು ಉಪವಾಸ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷ ಲಭಿಸುತ್ತದೆ. ಹಾಗೂ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಇಂತಹ ಪವಿತ್ರ ಯೋಗಿನಿ ಏಕಾದಶಿಯ ಉಪವಾಸದ ಕಥೆ, ಮಹತ್ವ ಹಾಗೂ ಶುಭ ಮುಹೂರ್ತದ ಬಗ್ಗೆ ತಿಳಿಯೋಣ.

ಯೋಗಿನಿ ಏಕಾದಶಿಯ ಉಪವಾಸದ ಕಥೆ:

ಒಂದಾನೊಂದು ಕಾಲದಲ್ಲಿ ಅಲ್ಕಾಪುರಿ ಪಟ್ಟಣದಲ್ಲಿ ರಾಜ ಕುಬೇರನು ಆಳ್ವಿಕೆ ನಡೆಸುತ್ತಿದ್ದನು. ಆತ ಮಹಾನ್ ಶಿವಭಕ್ತನಾಗಿದ್ದನು. ಆತನ ರಾಜ್ಯದಲ್ಲಿ ಹೇಮ ಎಂಬ ಹೆಸರಿನ ಮಾಲಿ ತೋಟದ ಕೆಲಸ ಮಾಡುತ್ತಿದ್ದನು. ಮಾಲಿಗೆ ವಿಶಾಲಾಕ್ಷಿ ಎಂಬ ಹೆಸರಿನ ಸುಂದರ ಹೆಂಡತಿಯಿದ್ದಳು. ರಾಜ ಕುಬೇರನ ಆಜ್ಞೆಯಂತೆ ಸ್ವತಃ ಹೇಮನು ಶಿವನ ಪೂಜೆಗಾಗಿ ಪ್ರತಿದಿನ ತೋಟದಿಂದ ಹೂವುಗಳನ್ನು ತರುತ್ತಿದ್ದನು. ದಿನಂಪ್ರತಿ ಇದೇ ರೀತಿ ಅವರ ಕಾರ್ಯ ನಡೆಯುತ್ತಿತ್ತು. ಆದರೆ ಒಂದು ದಿನ ಮುಂಜಾನೆ ತೋಟದಿಂದ ಹೂವುಗಳನ್ನು ಕಿತ್ತುಕೊಂಡು ಬಂದರೂ, ಪತ್ನಿಯ ಸೌಂದರ್ಯಕ್ಕೆ ಮರುಳಾಗಿ ಆಕೆಯ ಜೊತೆ ಸಲ್ಲಾಪದಲ್ಲಿ ತೊಡಗಿದ್ದ, ಹೇಮನಿಗೆ ರಾಜನ ಆಸ್ಥಾನಕ್ಕೆ ಹೂವುಗಳನ್ನು ತಲುಪಿಸಬೇಕೆಂಬ ಯೋಚನೆಯೇ ಬರಲಿಲ್ಲ.

ಮದ್ಯಾಹ್ನವಾದರೂ ಮಾಲಿ ಪೂಜೆಗೆ ಹೂವುಗಳನ್ನು ತೆಗೆದುಕೊಂಡು ಬಾರದೇ ಇರುವುದನ್ನು ಕಂಡು, ಈತ ಇನ್ನೂ ಬರದೇ ಇರಲು ನಿಜವಾದ ಕಾರಣವೇನು ಎಂದು ತಿಳಿದ ಕುಬೇರ ರಾಜನು ಕೋಪಗೊಂಡು ಹೇಮನಿಗೆ ಶಾಪ ನೀಡಿದನು. ದೇವರ ಮೇಲಿನ ಭಕ್ತಿಗಿಂತ ಕಾಮಕ್ಕೆ ಪ್ರಾಧಾನ್ಯತೆ ನೀಡಿದ್ದೀಯಾ, ನಿನಗೆ ಕುಷ್ಟ ರೋಗ ಬರಲಿ ಎಂದು ಘೋರ ಶಾಪವನ್ನು ನೀಡುತ್ತಾರೆ. ಕುಬೇರನ ಶಾಪದಂತೆ ಹೇಮನಿಗೆ ಕುಷ್ಟರೋಗ ಅಂಟಿಕೊಂಡಿತು. ಆತನ ಹೆಂಡತಿಯು ಬಿಟ್ಟು ಹೋದಳು. ಭೂಮಿಯ ಮೇಲೆ ಹೇಮನು ಅನೇಕ ಕಷ್ಟಗಳನ್ನು ಅನುಭವಿಸಿದನು. ಒಂದು ದಿನ ಹೀಗೆ ಅಳೆದಾಡುತ್ತಿರುವಾಗ ಹೇಮನು ಮಾರ್ಕಂಡೇಯ ಋಷಿಯನ್ನು ನೋಡಿದನು. ಆತನು ತನ್ನ ಸಂಕಟವನ್ನೆಲ್ಲಾ ಅವರಿಗೆ ವಿವರಿಸಿ ತನ್ನ ತಪ್ಪಿಗೆ ಪ್ರಾಯಶ್ಚಿತದ ದಾರಿಯನ್ನು ಕೇಳಿದನು. ಆಗ ಮಾರ್ಕಂಡೇಯ ಋಷಿ ಆತನಿಗೆ ಯೋಗಿನಿ ಏಕಾದಶಿಯ ಉಪವಾಸದ ಶ್ರೇಷ್ಠತೆಯನ್ನು ತಿಳಿಸಿದರು. ವಿಷ್ಣುವಿಗೆ ಮೀಸಲಾದ ಈ ಯೋಗಿನಿ ಏಕಾದಶಿಯ ಉಪವಾಸವು ನಿನ್ನ ಎಲ್ಲಾ ಪಾಪಗಳನ್ನು ತೊಡೆದುಹಾಕುತ್ತದೆ. ಮತ್ತು ನೀನು ದೇವರ ಕೃಪೆಯಿಂದ ಸ್ವರ್ಗವನ್ನು ಪಡೆಯುತ್ತೀಯಾ ಎಂದು ಹೇಳಿದರು. ಋಷಿಯ ಮಾತಿನಂತೆ ಹೇಮನು ಯೋಗಿನಿ ಏಕಾದಶಿ ಉಪವಾಸವನ್ನು ಪೂರ್ಣಭಕ್ತಿಯಿಂದ ಆಚರಿಸಿ, ವಿಷ್ಣುವಿನ ಕೃಪೆಗೆ ಪಾತ್ರನಾಗಿ ತನ್ನ ಪಾಪಗಳಿಂದ ಮುಕ್ತನಾದನು.

ಇದನ್ನೂ ಓದಿ:Spirituality: ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಆಧ್ಯಾತ್ಮಿಕತೆ ಉತ್ತಮ

ಯೋಗಿನಿ ಏಕಾದಶಿಯ ಮಹತ್ವ:

ಯೋಗಿನಿ ಏಕಾದಶಿಯ ಉಪವಾಸವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಉಪವಾಸವನ್ನು ಆಚರಿಸುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ಲಭಿಸುತ್ತದೆ. ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ 88 ಸಾವಿರ ಬ್ರಾಹ್ಮಣರಿಗೆ ಅನ್ನ ನೀಡಿದ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಮತ್ತೊಂದೆಡೆ, ಯೋಗಿನಿ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತದೆ ಮತ್ತು ಉಪವಾಸವನ್ನು ಆಚರಿಸುವ ವ್ಯಕ್ತಿ ಮರಣದ ನಂತರ ಸ್ವರ್ಗವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಈ ವ್ರತವನ್ನು ಆಚರಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹವೂ ದೊರೆಯುತ್ತದೆ.

ಯೋಗಿನಿ ಏಕಾದಶಿ 2023 ದಿನಾಂಕ ಮತ್ತು ಮುಹೂರ್ತ:

ಯೋಗಿನಿ ಏಕಾದಶಿಯನ್ನು ಈ ಬಾರಿ 14 ಜೂನ್ 2023ರ ಬುಧವಾರದಂದು ಆಚರಿಸಲಾಗುತ್ತದೆ. ಈ ಏಕಾದಶಿಯಂದು ಉಪವಾಸ ಮಾಡುವವರ ಎಲ್ಲಾ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಯೋಗಿನಿ ಏಕಾದಶಿಯು ಜೂನ್ 13, 2023 ರಂದು ಬೆಳಗ್ಗೆ 9.28 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜೂನ್ 14, 2023 ರಂದು ಬೆಳಗ್ಗೆ 8.48 ಕ್ಕೆ ಕೊನೆಗೊಳ್ಳುತ್ತದೆ. ಜೂನ್ 15 ರಂದು ಬೆಳಗ್ಗೆ 4.52 ರಿಂದ 7.34 ರ ವರೆಗೆ ವ್ರತ ಪಾರಣ (ಉಪವಾಸ ಮುರಿಯುವ) ಮುಹೂರ್ತ ನಡೆಯಲಿದೆ.

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ