ಮನೆಗಾಗಿ ಮನವಿ ಮಾಡಿದ ಮಹಿಳೆಯನ್ನು ಮಂಚಕ್ಕೆ ಕರೆದ ಗ್ರಾಮ ಪಂಚಾಯ್ತಿ ಸದಸ್ಯ
ಸ್ವಂತ ಸೂರಿಲ್ಲದವರಿಗೆ ಸೂರು ಕಲ್ಪಿಸುವ ನಾನಾ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರುತ್ತಲೇ ಇದ್ದು, ಇಂತಹ ಅನೇಕ ಯೋಜನೆಗಳು ಇಂದಿಗೂ ಅರ್ಹರಿಗೆ ತಲುಪಲಾರದಂತಹ ಸ್ಥಿತಿ ಒದಗಿದೆ. ಸೂರಿಲ್ಲದವರಿಗೆ ಆಶ್ರಯ ಮನೆ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಗಳಡಿಯಲ್ಲಿ ಕಡುಬಡವರಿಗೆ ಮನೆ ಮಂಜೂರು ಮಾಡಲಾಗುತ್ತೆ. ಆದ್ರೆ, ಇಲ್ಲೋರ್ವ ಗ್ರಾಮ ಪಂಚಾಯಿತಿ ಸದಸ್ಯನೋರ್ವ, ಮನೆಗಾಗಿ ಮನವಿ ಮಾಡಿದ ಮಹಿಳೆಯನ್ನ ಮಂಚಕ್ಕೆ ಕರೆದಿರುವ ಆರೋಪ ಕೇಳಿಬಂದಿದೆ.

ಕಲಬುರಗಿ, (ಮಾರ್ಚ್ 13): ಸರ್ಕಾರದ ವತಿಯಿಂದ ನೀಡಲಾಗುವ ಮನೆ ಕೇಳಲುಬಂದ ಮಹಿಳೆಗೆ ಗ್ರಾಮ ಪಂಚಾಯಿತಿ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ನಡೆದಿದೆ. ಮನೆ ಕೇಳಲು ಬಂದ ಮಹಿಳೆಗೆ ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಮಂಚಕ್ಕೆ ಕರೆದಿದ್ದಾನೆ. ಪಂಚಾಯತಿ ಮನೆ ಮಾಡಿಸಿಕೊಡುತ್ತೇನೆ ನನ್ನ ಜೊತೆ ಮಲಕೋ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳಿಸು ಎಂದಿದ್ದಾನೆ. ಈ ಸಂಬಂಧ ಮಹಿಳೆ, ನೀಲಕಂಠ ರಾಠೋಡ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಮಳಸಾಪುರ ಗ್ರಾಮದ ಮಹಿಳೆ ಮನೆ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ನೀಲಕಂಠಗೆ ಮನವಿ ಮಾಡಿದ್ದಾಳೆ. ಆಗ ನೀಲಕಂಠ, ಪಂಚಾಯತಿಯಿಂದ ಮನೆ ಮಾಡಿಸಿಕೊಡಲು ದುಡ್ಡಿಗೆ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಡಲು ಆಗದಿದ್ದರೆ ನನ್ನ ಜೊತೆ ಮಲಕೋ ಎಂದು ಒತ್ತಾಯ ಮಾಡಿದ್ದಾನೆ. ಅಲ್ಲದೇ ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನ ಕಳುಹಿಸು ಎಂದಿದ್ದಾನೆ. ಹೀಗಂತ ಮಹಿಳೆ ಆರೋಪಿಸಿದ್ದಾಳೆ.
ಇದನ್ನೂ ಓದಿ: ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ: ಬೆತ್ತಲೆ ವಿಡಿಯೋ..20 ಲಕ್ಷಕ್ಕೆ ಡಿಮ್ಯಾಂಡ್.. ಮಾಯಾಂಗನೆ ಲಾಕ್
ಇದರಿಂದ ಆಕ್ರೋಶಗೊಂಡ ಮಹಿಳೆ, ಮಳಸಾಪುರ ಗ್ರಾಮದಿಂದ ಮರಗುತ್ತಿ ಪಂಚಾಯತಿಗೆ ಆಯ್ಕೆಯಾಗಿರುವ ನೀಲಕಂಠನ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗ ಪೊಲೀಸರು ಬಿಎನ್ಎಸ್ ಕಾಯ್ದೆ 75, 78,79 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.






