ನೀರು ತುಂಬಿಸಿಕೊಳ್ಳಲು ಹೋದ ಮಹಿಳೆ ಸಾವು; ದೋಷವೆಲ್ಲ ಸ್ಥಳೀಯರದ್ದೇ ಎಂದು ಸಚಿವ ಜಮೀರ್ ಅಹ್ಮದ್
ಮೊನ್ನೆಯಷ್ಟೇ ಸಚಿವ ಜಮೀರ್ ಅನಂದಪುರಕ್ಕೆ ಭೇಟಿ ನೀಡಿ ಅಕ್ರಮವಾಗಿ ವಿದ್ಯುತ್ ಬಳಸುವುದರ ವಿರುದ್ಧ ಎಚ್ಚರಿಕೆಯನ್ನೂ ನೀಡಿದ್ದರಂತೆ. ಜಮೀರ್ ಬಲಭಾಗದಲ್ಲಿ ನಿಂತಿದ್ದ ಗಾಯತ್ರಿ ಹೆಸರಿನ ಮಹಿಳೆಯೊಬ್ಬರು ಕೋಲೆ ಬಸವನಂತೆ ಮಂತ್ರಿ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಾರೆ. ಸಚಿವನಿಗೆ ಉತ್ತರ ಹೊಳೆಯದಂತಾದಾಗ ಪ್ರಶ್ನೆ ಕೇಳಿದ ಮಾಧ್ಯಮದವರೊಂದಿಗೆ ಏರುಧ್ವನಿಯಲ್ಲಿ ಮಾತಾಡುವ ಪ್ರಯತ್ನವೂ ನಡೆಯುತ್ತದೆ.
ಬೆಂಗಳೂರು, 13 ಮಾರ್ಚ್: ಚಾಮರಾಜಪೇಟೆಯ ಆನಂದಪುರ ಏರಿಯಾದಲ್ಲಿ ಇಂದು ಬೆಳಗಿನ ಜಾವ ನೀರು ತರಲು ಹೋದಾಗ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಸ್ಥಳಕ್ಕೆ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಎಲ್ಲ ದೋಷವನ್ನು (blame) ಸ್ಥಳೀಯರ ಮೇಲೆ ಹಾಕಿದರು. ಅಕ್ರಮವಾಗಿ ಮೂರ್ನಾಲ್ಕು ಅಂತಸ್ತು ಮನೆಕಟ್ಟಿ ನೀರು ಮೇಲೆ ಹತ್ತದ ಕಾರಣ ಅಕ್ರಮವಾಗಿ ಮೋಟಾರಗಳನ್ನು ಬಳಸಿ ವಿದ್ಯುತ್ ಕಂಬದಿಂದ ಮೋಟಾರುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸಿ ನೀರು ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಡಿಯುವ ನೀರು ಹಿಡಿಯಲು ಹೋದ ಮಹಿಳೆ ವಿದ್ಯುತ್ ಪ್ರವಹಿಸಿ ಸಾವು, ಜಮೀರ್ ಅಹ್ಮದ್ರನ್ನು ದೂರಿದ ಸ್ಥಳೀಯರು