Vastu Shastra: ಮನೆಯಲ್ಲಿ ಗುಲಾಬಿ ಗಿಡ ನೆಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಗುಲಾಬಿ ಗಿಡ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅನೇಕರು ತಮ್ಮ ಮನೆಗಳ ಮುಂದೆ ಅಥವಾ ಬಾಲ್ಕನಿಯಲ್ಲಿ ಗುಲಾಬಿ ಗಿಡಗಳನ್ನು ನೆಡುತ್ತಾರೆ. ಆದರೆ, ಮನೆಯಲ್ಲಿ ಗುಲಾಬಿ ಗಿಡ ನೆಡುವುದು ವಾಸ್ತು ಪ್ರಕಾರ ಶುಭವೇ? ಸಕಾರಾತ್ಮಕ ಶಕ್ತಿ, ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಸಮೃದ್ಧಿ ತರಲು ಗುಲಾಬಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

Vastu Shastra: ಮನೆಯಲ್ಲಿ ಗುಲಾಬಿ ಗಿಡ ನೆಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಗುಲಾಬಿ ಗಿಡ
Image Credit source: indnursery

Updated on: Jul 30, 2026 | 9:00 AM

ಗುಲಾಬಿ ಗಿಡ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳಿರುವ ಪ್ರತಿ ಮನೆಯಲ್ಲೂ ಗುಲಾಬಿ ಗಿಡ ಇರಲೇಬೇಕು ಎನ್ನುವುದು ಹಲವರ ಆಸೆ. ಅದಕ್ಕಾಗಿಯೇ ಅನೇಕರು ತಮ್ಮ ಮನೆಗಳ ಮುಂದೆ ಅಥವಾ ಬಾಲ್ಕನಿಯಲ್ಲಿ ಗುಲಾಬಿ ಗಿಡಗಳನ್ನು ನೆಡುತ್ತಾರೆ. ಆದರೆ, “ಮನೆಯಲ್ಲಿ ಗುಲಾಬಿ ಗಿಡವನ್ನು ನೆಡಬಹುದೇ? ಇದು ವಾಸ್ತು ಪ್ರಕಾರ ಸರಿಯೇ?” ಎಂಬ ಅನುಮಾನ ಹಲವರಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ ಗುಲಾಬಿ ಗಿಡದ ಮಹತ್ವವೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆಯಲ್ಲಿ ಗುಲಾಬಿ ಗಿಡ ನೆಡುವುದರ ವಾಸ್ತು ಮಹತ್ವ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗುಲಾಬಿ ಗಿಡವನ್ನು ನೆಡುವುದು ಅತ್ಯಂತ ಶುಭ ತರಲಿದೆ. ಇದು ಮನೆಗೆ ಅದೃಷ್ಟವನ್ನು ತರುವುದಲ್ಲದೆ, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಗುಲಾಬಿ ಗಿಡವಿದ್ದರೆ ಕುಟುಂಬದ ಸದಸ್ಯರ ನಡುವೆ ಪ್ರೀತಿ, ಆಪ್ಯಾಯತೆ ಹಾಗೂ ಸಾಮರಸ್ಯ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸಕಾರಾತ್ಮಕ ಶಕ್ತಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ:

ಮನೆಯ ಆವರಣದಲ್ಲಿ ಗುಲಾಬಿ ಗಿಡವನ್ನು ಬೆಳೆಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸಕಾರಾತ್ಮಕ ವಾತಾವರಣ ಹೆಚ್ಚಾಗುತ್ತದೆ. ಇದು ಮನೆಗೆ ಧನ-ಸಂಪತ್ತನ್ನು ಆಕರ್ಷಿಸಲು ನೆರವಾಗುತ್ತದೆ. ಗುಲಾಬಿಯು ಲಕ್ಷ್ಮಿ ದೇವಿಯ ನೆಚ್ಚಿನ ಹೂವುಗಳಲ್ಲಿ ಒಂದಾಗಿದೆ. ಹಾಗಾಗಿ ಮನೆಯಲ್ಲಿ ಇದನ್ನು ಇಡುವುದರಿಂದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸದಾ ಕಾಲ ದೊರೆಯುತ್ತದೆ ಎಂದು ವಾಸ್ತು ತಜ್ಞರು ತಿಳಿಸುತ್ತಾರೆ.

ಗುಲಾಬಿ ಗಿಡ ನೆಡಲು ಸೂಕ್ತವಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರ ನೀಡುವ ಉತ್ತಮ ಫಲಿತಾಂಶಗಳು ಸಿಗಬೇಕೆಂದರೆ ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ.

  • ಪೂರ್ವ ದಿಕ್ಕು: ಮನೆಯ ಹೊರಭಾಗದ ಪೂರ್ವ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶ್ರೇಷ್ಠ.
  • ಉತ್ತರ ದಿಕ್ಕು: ಉತ್ತರ ದಿಕ್ಕಿನಲ್ಲಿಯೂ ಗುಲಾಬಿ ಗಿಡವನ್ನು ನೆಡಬಹುದು.

ಈ ಸೂಕ್ತ ದಿಕ್ಕುಗಳಲ್ಲಿ ಗುಲಾಬಿ ಗಿಡವನ್ನು ನೆಡುವುದರಿಂದ ಮನೆಗೆ ಉತ್ತಮ ಫಲಿತಾಂಶಗಳು ಹಾಗೂ ವಾಸ್ತು ಪ್ರಯೋಜನಗಳು ದೊರೆಯುತ್ತವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us