Kannada News Spiritual July Festival List 2025: List of Important festivals celebrated in July month
July Festival List 2025: ಜುಲೈ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಭಾರತದಲ್ಲಿ ವರ್ಷ ಪೂರ್ತಿ ವಿವಿಧ ಹಬ್ಬಗಳು, ವ್ರತ ಆಚರಣೆಗಳು ಇದ್ದೆ ಇರುತ್ತದೆ. ಹೌದು, ಭಾರತೀಯರು ಹಬ್ಬಗಳನ್ನು ಅತಂತ್ಯ ಶ್ರದ್ಧಾ, ಭಕ್ತಿ ಹಾಗೂ ನಂಬಿಕೆಯಿಂದ ಆಚರಿಸುತ್ತಾರೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ಹೀಗಾಗಿ ಪ್ರತಿಯೊಬ್ಬರು ತಿಂಗಳ ಕೊನೆಯಲ್ಲಿ ಮುಂಬರುವ ತಿಂಗಳಲ್ಲಿ ಯಾವೆಲ್ಲಾ ಹಬ್ಬ ಆಚರಣೆಗಳಿವೆ ಎನ್ನುವುದು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ವರ್ಷದ ಏಳನೇ ತಿಂಗಳಾದ ಜುಲೈನಲ್ಲಿ ವಿವಿಧ ಹಬ್ಬ ಆಚರಣೆಗಳಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ತಿಂಗಳು ಉರುಳಿದ್ದೆ ತಿಳಿಯುವುದಿಲ್ಲ. ಇನ್ನೇನು ಒಂದೆರಡು ದಿನ ಕಳೆದರೆ ಜೂನ್ ತಿಂಗಳು ಮುಗಿದು, ನಾವು ನೀವೆಲ್ಲರೂ ಜುಲೈ ತಿಂಗಳಿಗೆ ಕಾಲಿಡುತ್ತೇವೆ. ವರ್ಷದ ಏಳನೇ ತಿಂಗಳಾದ ಜುಲೈನಲ್ಲಿ ಪ್ರಮುಖವಾದ ಹಬ್ಬಗಳು (festivals), ವ್ರತ ಆಚರಣೆಗಳಿವೆ. ಹಿಂದೂ ಪಂಚಾಂಗದ(Hindu Calendar) ಪ್ರಕಾರವಾಗಿ ಜುಲೈ ತಿಂಗಳು ಆಷಾಢ ಮಾಸ ಕೊನೆಗೊಂಡು ಶ್ರಾವಣ ಮಾಸದ ಆರಂಭವನ್ನು ಸೂಚಿಸುತ್ತದೆ. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳು ಸಾಲಾಗಿ ಬರುತ್ತದೆ. ಈ ತಿಂಗಳಲ್ಲಿಪ್ರಮುಖ ಹಬ್ಬವಾದ ನಾಗರ ಪಂಚಮಿ ಸೇರಿದಂತೆ ಹತ್ತು ಹಲವು ಹಬ್ಬಗಳು, ವ್ರತ ಆಚರಣೆಗಳಿವೆ.
ಜುಲೈ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಜುಲೈ 02 – ಆಷಾಢ ಅಷ್ಟಾಹ್ನಿಕ ಆರಂಭ
ಜುಲೈ 03- ಮಾಸಿಕ ದುರ್ಗಾಷ್ಟಮಿ
ಜುಲೈ 06- ಗೌರಿ ವ್ರತ ಆರಂಭ
ಜುಲೈ 06- ದೇವಶಯನಿ ಏಕಾದಶಿ
ಜುಲೈ 07 – ವಾಸುದೇವ ದ್ವಾದಶಿ
ಜುಲೈ 08 – ಜಯಪಾರ್ವತಿ ವ್ರತ ಆರಂಭ
ಜುಲೈ 08 – ಭೌಮ ಪ್ರದೋಷ ವ್ರತ
ಜುಲೈ 10 – ಕೋಕಿಲ ವ್ರತ
ಜುಲೈ 10 – ಗುರು ಪೂರ್ಣಿಮೆ
ಜುಲೈ 10 – ವ್ಯಾಸ ಪೂಜೆ
ಜುಲೈ 10 – ಗೌರಿ ವ್ರತ ಮುಕ್ತಾಯ
ಜುಲೈ 10 – ಆಷಾಢ ಅಷ್ಟಾಹ್ನಿಕ ಮುಕ್ತಾಯ
ಜುಲೈ 10- ಆಷಾಢ ಪೂರ್ಣಿಮಾ ವ್ರತ
ಜುಲೈ 10 – ಆಷಾಢ ಪೂರ್ಣಿಮೆ
ಜುಲೈ 10 – ಅನ್ವಧನ್
ಜುಲೈ 10- ಚಕ್ಷುಷ ಮನ್ವಾದಿ
ಜುಲೈ 11- ಶ್ರಾವಣ ಆರಂಭ
ಜುಲೈ 11- ಇಷ್ಟಿ
ಜುಲೈ 13- ಜಯಪಾರ್ವತಿ ವ್ರತ ಮುಕ್ತಾಯ
ಜುಲೈ 14 – ಮೊದಲ ಶ್ರಾವಣ ಸೋಮವಾರ ವ್ರತ
ಜುಲೈ 14 – ಗಜಾನನ ಸಂಕಷ್ಟಿ ಚತುರ್ಥಿ
ಜುಲೈ 15 – ಮೊದಲ ಮಂಗಳ ಗೌರಿ ವ್ರತ
ಜುಲೈ 16 – ಕರ್ಕ ಸಂಕ್ರಾಂತಿ
ಜುಲೈ 17 – ಕಲಾಷ್ಟಮಿ
ಜುಲೈ 17 – ಮಾಸಿಕ ಕೃಷ್ಣ ಜನ್ಮಾಷ್ಠಮಿ
ಜುಲೈ 20 – ಮಾಸಿಕ ಕಾರ್ತಿಗೈ
ಜುಲೈ 21- ಎರಡನೇ ಶ್ರಾವಣ ಸೋಮವಾರ ವ್ರತ
ಜುಲೈ 21- ರೋಹಿಣಿ ವ್ರತ
ಜುಲೈ 21 – ಕಾಮಿಕಾ ಏಕಾದಶಿ
ಜುಲೈ 22 – ಎರಡನೇ ಮಂಗಳ ಗೌರಿ ವ್ರತ
ಜುಲೈ 22 – ಭೌಮ ಪ್ರದೋಷ ವ್ರತ
ಜುಲೈ 23 – ಸಾವನ್ ಶಿವರಾತ್ರಿ
ಜುಲೈ 23 – ಮಾಸಿಕ ಶಿವರಾತ್ರಿ
ಜುಲೈ 24 – ಹರಿಯಾಲಿ ಅಮಾವಾಸ್ಯೆ
ಜುಲೈ 24 – ಆದಿ ಅಮವಾಸಯಿ
ಜುಲೈ 24- ದರ್ಶ ಅಮಾವಾಸ್ಯೆ
ಜುಲೈ 24 – ಅನ್ವಧನ್
ಜುಲೈ 24 – ಶ್ರಾವಣ ಅಮಾವಾಸ್ಯೆ
ಜುಲೈ 25 – ಇಷ್ಟಿ
ಜುಲೈ 26 – ಚಂದ್ರ ದರ್ಶನ
ಜುಲೈ 27 – ಹರಿಯಾಲಿ ತೀಜ್
ಜುಲೈ 28 – ಮೂರನೇ ಶ್ರಾವಣ ಸೋಮವಾರ ವ್ರತ
ಜುಲೈ 28 – ಅಂಡಾಳ್ ಜಯಂತಿ
ಜುಲೈ 28 – ವಿನಾಯಕ ಚತುರ್ಥಿ
ಜುಲೈ 29 – ನಾಗರ ಪಂಚಮಿ
ಜುಲೈ 29 – ಮೂರನೇ ಮಂಗಳ ಗೌರಿ ವ್ರತ
ಜುಲೈ 30 – ಕಲ್ಕಿ ಜಯಂತಿ
ಜುಲೈ 30 – ಸ್ಕಂದ ಷಷ್ಠಿ
ಜುಲೈ 31 – ತುಳಸಿದಾಸ ಜಯಂತಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ