ಮನುಷ್ಯ ಹುಟ್ಟಿದಾಗಿನಿಂದ ಮಣ್ಣಾಗುವವರೆಗೂ ಜೀವನ ನಡೆಸಲು ಹಣ ಅತಿ ಮುಖ್ಯ. ಹೀಗಾಗಿ ಹಣ ಸಂಪಾದನೆಗಾಗಿ ಒಂದಲ್ಲಾ ಒಂದು ರೀತಿಯ ಕಸರತ್ತು ಮಾಡುತ್ತಲೇ ಇರುತ್ತಾನೆ. ಆದ್ರೆ ನಾವಿಲ್ಲಿ ಆಧ್ಯಾತ್ಮಿಕ ರೀತಿಯಲ್ಲೂ ಹಣ ಗಳಿಸಬಹುದೆಂಬ ರೋಚಕ ಮಾಹಿತಿಯನ್ನು ನೀಡುತ್ತಿದ್ದೇವೆ. ಯಾವ ರಾಶಿಯವರು ಯಾವ ದೇವರ ಆರಾಧನೆಯನ್ನು ಯಾವ ರೀತಿ ಮಾಡಿದರೆ ಆರ್ಥಿಕ ಸಮಸ್ಯೆಗಳಿಂದ ಹೊರ ಬರಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಮೀನಾ ಹಾಗೂ ತುಲಾ ರಾಶಿಯವರು ಈ ದೇವರ ಆರಾಧನೆ ಮಾಡುವುದರಿಂದ ಧನ ಲಾಭ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಮ್ಮ ರಾಶಿಯಿಂದ 2ನೇ ರಾಶಿಯನ್ನು ನಾವು ನಮ್ಮ ಧನಸ್ಥಾನ ಎನ್ನತ್ತೇವೆ. ನಮ್ಮ ರಾಶಿಯ 2ನೇ ರಾಶಿಯ ಅಧಿಪತಿಯ ಆರಾಧನೆಯಿಂದ ನಮಗೆ ಧನ ಪ್ರಾಪ್ತಿ ಯೋಗ ಬರುತ್ತದೆ. ಧನಾಧಿಪತಿ ಆರಾಧನೆ ನಮಗೆ ಧನ ಲಾಭ ತಂದುಕೊಡುತ್ತದೆ. ಮೀನಾ ರಾಶಿ ಹಾಗೂ ತುಲಾ ರಾಶಿಯವರು ಕುಜ ಗ್ರಹ(ಸುಬ್ರಹ್ಮಣ್ಯ) ಆರಾಧನೆ ಮಾಡುವುದರಿಂದ ಅವರಿಗೆ ಆರ್ಥಿಕ ಬಾಧೆ ನಿವಾರಣೆಯಾಗುತ್ತದೆ. ಮೀನಾಕ್ಕೆ ಮೇಷ ರಾಶಿ ಧನಸ್ಥಾನ. ಹಾಗೂ ತುಲಾ ರಾಶಿಗೆ ವೃಶ್ಚಿಕ ರಾಶಿ ಧನಸ್ಥಾನ. ಮೇಷ ಹಾಗೂ ವೃಶ್ಚಿಕಗೆ ಧನಾಧಿಪತಿ ಕುಜ ಗ್ರಹ. ಹೀಗಾಗಿ ಸುಬ್ರಹ್ಮಣ್ಯ ಆರಾಧನೆ ಮಾಡಬೇಕು. ಮಂಗಳವಾರಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವುದು, ಕೆಂಪು ಹೂಗಳನ್ನು ಸರ್ಪಿಸಿ ಅರ್ಚನೆ ಮಾಡುವುದು, ಫಲಪಂಚಾಮೃತ ಅಭಿಕ್ಷೇಕ ಮಾಡಿಸುವುದು ಅಥವಾ ಕೆಂಪು ವಸ್ತ್ರದಲ್ಲಿ ತೊಗರಿ ಬೇಳೆ ದಾನ ಮಾಡುವುದು. ಇದಲ್ಲದೆ ಪ್ರತಿ ದಿನ ಸ್ನಾನ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಕುಜ ಗ್ರಹ ಅಷ್ಟೋತ್ತರ, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿದರೆ ಧನ ಲಾಭ ಪ್ರಾಪ್ತಿಯಾಗುತ್ತದೆ. ಸಾಲಗಳು ತೀರುತ್ತವೆ. ಇದನ್ನೂ ಓದಿ: Banana plant: ಮನೆಯಲ್ಲಿ ಬಾಳೆ ಗಿಡ ಬೆಳೆಸಲು ಆಲೋಚಿಸುತ್ತಿದ್ದೀರಾ? ಮೊದಲು ಈ ವಾಸ್ತು ನಿಯಮಗಳನ್ನು ಪಾಲಿಸಿ
ವೃಷಭ ಹಾಗೂ ಸಿಂಹ ರಾಶಿಯವರು ಹೀಗೆ ಮಾಡಿ ಧನ ಲಾಭ ಪಡೆಯಿರಿ
ವೃಷಭ ಹಾಗೂ ಸಿಂಹ ರಾಶಿಯವರು ಬುಧನ ಆರಾಧನೆ ಮಾಡಬೇಕು. ಬುಧವಾರಗಳಲ್ಲಿ ಹಸಿರು ವಸ್ತ್ರದಲ್ಲಿ ಹೆಸರು ಕಾಳನ್ನು ಧಾನ ಮಾಡಬೇಕು. ಬುಧನ ಅಭಿಮಾನಿ ದೇವರು ವಿಷ್ಣು. ಹೀಗಾಗಿ ಭಗವಾನ್ ವಿಷ್ಣುವಿನ ಅವತಾರದ ದೇವಸ್ಥಾನಗಳಲ್ಲಿ ಬುಧವಾರದಂದು ತುಳಸಿ ಅರ್ಚನೆ ಮಾಡಿಸಬೇಕು. ಈ ರಾಶಿಯವರು ಪ್ರತಿ ದಿನ ವಿಷ್ಣು ಸಹಸ್ರನಾಮ ಪಠಿಸಬೇಕು ಅಥವಾ ಆಲಿಸಿದರೆ ಆರ್ಥಿಕ ಸಂಕಷ್ಟ ದೂರವಾಗುತ್ತದೆ.
ಮಿಥನ ರಾಶಿಯವರು ಚಂದ್ರನ ಆರಾಧನೆ ಮಾಡಿ ಲಾಭ ಪಡೆಯಿರಿ
ಮಿಥನ ರಾಶಿಯವರು ಚಂದ್ರನ ಆರಾಧನೆ ಮಾಡಬೇಕು. ಈ ರಾಶಿಯವರು ಸೋಮವಾರದಂದು ಬಿಳಿ ವಸ್ತ್ರ ಬಳಸುವುದು, ಅನ್ನದಾನ ಮಾಡಿಸುವುದು, ದೇವಸ್ಥಾನಗಳಿಗೆ ಅಕ್ಕಿ ಚೀಲಗಳನ್ನು ದಾನ ಮಾಡುವುದು ಅಥವಾ ಭಗವಾನ್ ಶಿವನಿಗೆ ಹಾಲಿನ ಅಭಿಷೇಕ ಮ್ತತು ಪೂಜೆ ಮಾಡುವುದರಿಂದಲೂ ಧನ ಲಾಭ ಪ್ರಾಪ್ತಿಯಾಗುತ್ತದೆ. ಚಂದ್ರ ಗ್ರಹದ ಅಷ್ಟೋತ್ತರ ಪಠಣ, ಶಿವ ಅಷ್ಟೋತ್ತರ ಪಠಣ ಮಾಡುವುದರಿಂದ ಮಿಥನ ರಾಶಿಯವರಿಗೆ ಧನ ಲಾಭವಾಗುತ್ತದೆ. ಹಣ ಕಾಸಿನ ಸಮಸ್ಯೆ ದೂರವಾಗುತ್ತದೆ.
ಕರ್ಕಾಟಕ ರಾಶಿಯವರು ರವಿ ಗ್ರಹದ ಆರಾಧನೆ ಮಾಡಬೇಕು
ಕರ್ಕಾಟಕ ರಾಶಿಯವರು ರವಿ ಗ್ರಹದ ಆರಾಧನೆ ಮಾಡಬೇಕು. ಭಾನುವಾರಗಳಲ್ಲಿ ಕೆಂಪು ವಸ್ತ್ರಗಳಲ್ಲಿ ಗೋಧಿ ದಾನ ಮಾಡಬೇಕು. ಆದಿತ್ಯ ಹೃದಯ ಸ್ತೋತ್ರ, ರವಿ ಗ್ರಹದ ಅಷ್ಟೋತ್ತರ ಪಠಣೆ ಮಾಡಬೇಕು. ಅಥವಾ ಭಾನುವಾರಗಳಲ್ಲಿ ಈಶ್ವರನ ದೇವಸ್ಥಾನದಲ್ಲಿ ಭಸ್ಮ ಅರ್ಚನೆ, ರುದ್ರಾಭಿಷೇಕ ಮಾಡಿಸುವುದರಿಂದ ಕರ್ಕಾಟಕ ರಾಶಿಯವರಿಗೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನೂ ಓದಿ: Parivartini Ekadashi 2021: ಪರಿವರ್ತಿನಿ ಏಕಾದಶಿ ಹಿಂದಿದೆ ವಿಷ್ಣುವಿನ ವಾಮನ ಅವತಾರದ ಕಥೆ
ಇವುಗಳನ್ನು ದಾನ ಮಾಡಿ ಧನ ಲಾಭ ಪಡೆಯಿರಿ
ಮೇಷ ಹಾಗೂ ಕನ್ಯಾ ರಾಶಿಯವರು ಶುಕ್ರನ ಆರಾಧನೆ ಮಾಡಬೇಕು. ಶುಕ್ರವಾರದಂದು ಬಿಳಿ ಬಟ್ಟೆಯಲ್ಲಿ ಅವರೆ ಕಾಳು ದಾನ ಮಾಡಬೇಕು. ಶುಕ್ರ ಗ್ರಹ ಅಷ್ಟೋತ್ತರ ಪಠಣ, ದುರ್ಗಾ ಅಷ್ಟೋತ್ತರ ಪಠಣ, ಲಕ್ಷ್ಮೀನಾರಾಯಣ ಹೃದಯಂ ಸ್ತೋತ್ರ ಪಠಣೆ ಅಥವಾ ಆಲಿಸಬೇಕು. ಶುಕ್ರವಾರದಂದು ಅಮ್ಮನವರ ದೇವಸ್ಥಾನಗಳಿಗೆ ಹೋಗಿ ಕುಂಕುಮಾರ್ಚನೆ ಮಾಡಿಸುವುದು. ಮುತೈದೆಯರಿಗೆ ಅರಿಶಿಣ, ಕುಂಕುಮ, ಎಲೆ, ತೆಂಗಿನ ಕಾಯಿಯಂತಹ ಸೌ ಮಾಂಗಲ್ಯ ದ್ರವ್ಯಗಳನ್ನು ನೀಡಿ ಕಾಲಿಗೆ ನಮಸ್ಕರಿಸಬೇಕು.
ಈ ರಾಶಿಯವರು ಕಡಲೇ ಕಾಳು ಧಾನ ಮಾಡಿ ಧನ ಲಾಭ ಪಡೆಯಬಹುದು
ಮೃಶ್ಚಿಕ ಹಾಗೂ ಕುಂಭ ರಾಶಿಯವರು ಗುರು ಗ್ರಹದ ಆರಾಧನೆ ಮಾಡಬೇಕು. ಅಂದರೆ ಗುರುವಾರಗಳಲ್ಲಿ ರಾಘವೇಂದ್ರ ಸ್ವಾಮಿ ದೇವಸ್ಥಾನಗಳಿಗೆ ಹೋಗಿ ಪ್ರದಕ್ಷಿಣೆ ನಮಸ್ಕಾರ ಮಾಡುವುದು. ಗುರುವಾರಗಳಲ್ಲಿ ಅರಿಶಿಣ ಬಣ್ಣದ ವಸ್ತ್ರಗಳಲ್ಲಿ ಕಡಲೇ ಕಾಳು ಧಾನ ಮಾಡುವುದು. ಗುರು ಗ್ರಹದ ಅಷ್ಟೋತ್ತರ ಪಠಣೆ ಮಾಡುವುದು. ರಾಘವೇಂದ್ರ ಸ್ವಾಮಿ ದೇವಸ್ಥಾನ, ದತ್ತಾತ್ರೇಯ ಸ್ವಾಮಿ ದೇವಸ್ಥಾನ, ಸಾಯಿ ಬಾಬಾ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡುವುದರಿಂದ ಧನ ಪ್ರಾಪ್ತಿ ಯೋಗ ಲಭಿಸುತ್ತದೆ.
ಧನು ರಾಶಿ ಹಾಗೂ ಮಕರ ರಾಶಿಯವರು ಶನೇಶ್ವರನ ಆರಾಧನೆ ಮಾಡಬೇಕು. ಶನಿವಾರಗಳಲ್ಲಿ ಶನೇಶ್ವರ ದೇವಸ್ಥಾನಗಳಿಗೆ ಹೋಗಿ ಪ್ರದಕ್ಷಿಣೆ ನಮಸ್ಕಾರ ಹಾಕಬೇಕು. ಹಾಗೂ ಕರಿ ಎಳ್ಳು ದಾನ ಮಾಡುಬೇಕು. ವಾರಕ್ಕೆ ಅಥವಾ ತಿಂಗಳಿಗೊಮ್ಮೆ ಗಾಣದ ಎಳ್ಳೆಣ್ಣೆಯಲ್ಲಿ ಮುಖ ನೋಡಿಕೊಂಡು ದಾನ ಮಾಡಬೇಕು. ಶನೇಶ್ವರನಿಗೆ ಪಂಚಾಮೃತ ಅಥವಾ ತೈಲಾಭಿಷೇಕ ಮಾಡಿಸುವುದು. ಈ ರಾಶಿಯವರು ಪ್ರತಿ ದಿನ ಬೆಳಗ್ಗೆ ಶನೇಶ್ವರನ ಅಷ್ಟೋತ್ತರಗಳನ್ನು ಪಠಿಸುವುದು. ಹೀಗೆ ಶನೇಶ್ವರನಿಗೆ ಸಂಬಂಧಿಸಿದಂತೆ ಆರಾಧನೆಗಳು ಎಷ್ಟು ಜಾಸ್ತಿ ಮಾಡುತ್ತೇವೋ ಅಷ್ಟು ಧನ ಲಾಭ ಪ್ರಾಪ್ತಿಯಾಗುತ್ತದೆ. ಇದನ್ನೂ ಓದಿ: ಕೈಲಾಸ ವಾಸಿ ಶಿವನಿಗೆ 7 ರೀತಿಯ ಅಭಿಷೇಕ ಮಾಡಬೇಕು? ಅದರಿಂದ ಸಿಗುವ ಫಲ-ಪ್ರಯೋಜನಗಳು ಏನು? ಇಲ್ಲಿದೆ ಮಾಹಿತಿ
ಇದೆಲ್ಲದರ ನಡುವೆ ಪ್ರತಿ ಹುಣ್ಣಿಮೆಗೆ ನಾಗಾರಾಧನೆ ಮಾಡುವುದರಿಂದ ಉತ್ತಮ ಲಾಭವಿದೆ. ಅಂದರೆ ಕಲಿ ಯುಗದಲ್ಲಿ ನಾಗಾರಾಧನೆ ಮಾಡುವ ಯಾವುದೇ ರಾಶಿ, ನಕ್ಷತ್ರದವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ ಎಂದು ಶಾಸ್ತ್ರಗಳು ಹೇಳುತ್ತವೆ. ಜೊತೆಗೆ ಧನಾಧಿಪತಿ ಗ್ರಹದ ಶಾಂತಿ ಹೋಮ ಕೂಡ ಮಾಡಿಸುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ಮಾಹಿತಿ: ಪಂಡಿತ್ ವಿಠ್ಠಲ್ ಭಟ್, ಜ್ಯೋತಿಷಿ
Published On - 8:00 am, Fri, 10 June 22