
ಶ್ರೀಕೃಷ್ಣನ ಜನ್ಮ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ವಿಷ್ಣುವಿನ ಏಂಟನೇ ಅವತಾರವಾದ ಶ್ರೀ ಕೃಷ್ಣ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನಿಸಿದ ದಿನವಾಗಿದೆ. ಕೃಷ್ಣನ ಭಕ್ತರು ಈ ಹಬ್ಬವನ್ನು ಪ್ರಪಂಚದಾದ್ಯಂತ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಈ ದಿನ ಶ್ರೀಕೃಷ್ಣನ ಬಾಲ ರೂಪವನ್ನು ಪೂಜಿಸುವ ಮೂಲಕ ಕೃಷ್ಣನ ಅನುಗ್ರಹವನ್ನು ಪಡೆದುಕೊಳ್ಳಬಹುದು.
ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಆಗಸ್ಟ್ 15 ರಂದು ರಾತ್ರಿ 11:49 ಕ್ಕೆ ಪ್ರಾರಂಭವಾಗುತ್ತದೆ. ಆದರೆ, ಈ ತಿಥಿ ಆಗಸ್ಟ್ 16 ರಂದು ರಾತ್ರಿ 9:34 ಕ್ಕೆ ಕೊನೆಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉದಯ ತಿಥಿಯ ಆಧಾರದ ಮೇಲೆ ನೋಡಿದರೆ ಆಗಸ್ಟ್ 16 ರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ಜನ್ಮಾಷ್ಟಮಿಯಂದು ಪೂಜೆಗೆ ಶುಭ ಸಮಯ ಆಗಸ್ಟ್ 16 ರಂದು ಬೆಳಿಗ್ಗೆ 12:04 ರಿಂದ ಪ್ರಾರಂಭವಾಗಿ 12:47 ರವರೆಗೆ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ, ನಿಮಗೆ ಪೂಜೆಗೆ ಒಟ್ಟು 43 ನಿಮಿಷಗಳು ಸಿಗುತ್ತವೆ. ಈ ಸಮಯ ಪೂಜೆಗೆ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಮಕ್ಕಳಲ್ಲಿ ಕಂಡುಬರುವ ಬಾಲಾರಿಷ್ಟ ದೋಷಕ್ಕೆ ಸರಳ ಪರಿಹಾರ ಇಲ್ಲಿದೆ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ