ಭಾರತವನ್ನು ದೇವಾಲಯಗಳ ನಾಡು ಎಂದು ಕರೆಯಲಾಗುತ್ತದೆ. ದೇವಾಲಯಗಳ ರಹಸ್ಯಗಳು ಮತ್ತು ಪವಾಡಗಳ ಕಥೆಗಳು ಇಲ್ಲಿ ಜನಪ್ರಿಯವಾಗಿವೆ. ಕೆಲವು ದೇವಾಲಯ ತನ್ನ ವಾಸ್ತು ಶೈಲಿ ಹಾಗೂ ಪವಾಡಗಳಿಂದಲೇ ಪ್ರಪಂಚದಾದ್ಯಂತ ಜನಪ್ರಿಯವಾಗಿವೆ. ಇದೀಗ ಅಂತದ್ದೇ ಸಂಪತ್ತಿನ ದೇವರಾದ ಕುಬೇರನ ದೇವಾಲವೊಂದು ಭಾರತದಾದ್ಯಂತ ಜನಪ್ರಿಯವಾಗಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ದಾರಿದ್ರ್ಯ ತೊಲಗುತ್ತದೆ ಎಂಬುದು ಜನರ ನಂಬಿಕೆ. ಇದಲ್ಲದೆ, ಕುಬೇರನಿಗೆ ನಾಣ್ಯಗಳನ್ನು ಅರ್ಪಿಸುವುದು ಮತ್ತು ಇತರ ವಿಭಿನ್ನ ಸಂಪ್ರದಾಯಗಳು ಇಲ್ಲಿ ಆಕರ್ಷಕವಾಗಿವೆ.
ಸಂಪತ್ತಿನ ದೇವರಾದ ಕುಬೇರನ ಈ ದೇವಾಲಯವು ಉತ್ತರಾಖಂಡದ ದೇವಭೂಮಿಯ ಅಲ್ಮೋರಾದಿಂದ 40 ಕಿಮೀ ದೂರದಲ್ಲಿದೆ. ಈ ದೇವಾಲಯವನ್ನು ಜಾಗೇಶ್ವರ ಧಾಮ ಎಂದು ಕರೆಯಲಾಗುತ್ತದೆ. ಹಣಕಾಸಿನ ಸಮಸ್ಯೆಯನ್ನು ಹೋಗಲಾಡಿಸುವ ಬಯಕೆಯಿಂದ ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಕುಬೇರನ ಆಶೀರ್ವಾದ ಪಡೆದ ವ್ಯಕ್ತಿಯು ಕೀರ್ತಿ, ಸಂಪತ್ತು ಇತ್ಯಾದಿಗಳನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಪ್ರತಿದಿನ ಭಕ್ತರು ಈ ದೇವಾಲಯಕ್ಕೆ ವಿವಿಧ ಇಷ್ಟಾರ್ಥಗಳೊಂದಿಗೆ ಭೇಟಿ ನೀಡುತ್ತಾರೆ ಮತ್ತು ಭಗವಾನ್ ಕುಬೇರನನ್ನು ಪ್ರಾರ್ಥಿಸುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ವ್ಯಕ್ತಿಯು ಆರ್ಥಿಕವಾಗಿ ಏಳಿಗೆ ಹೊಂದುತ್ತಾನೆ ಮತ್ತು ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ ಎಂದು ನಂಬಲಾಗಿದೆ.
ಈ ದೇವಾಲಯದಲ್ಲಿ ಕುಬೇರನನ್ನು ಪೂಜಿಸುವುದು ಮಾತ್ರವಲ್ಲದೆ ಪೂಜೆ ಮಾಡಿದವರಿಗೆ ಚಿನ್ನ ಅಥವಾ ಬೆಳ್ಳಿ ನಾಣ್ಯಗಳನ್ನು ಅರ್ಪಿಸುತ್ತಾರೆ. ಆ ನಾಣ್ಯಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ. ಇಷ್ಟಾರ್ಥಗಳನ್ನು ಪೂರೈಸಿದ ನಂತರ, ಭಕ್ತರು ಮತ್ತೆ ದೇವಸ್ಥಾನಕ್ಕೆ ಹೋಗಿ ಕುಬೇರನಿಗೆ ಅಕ್ಕಿಯಿಂದ ಮಾಡಿದ ಪಾಯಸವನ್ನು ಅರ್ಪಿಸುತ್ತಾರೆ.
ಇದನ್ನೂ ಓದಿ: ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಬೆಳ್ಳಿ ಧರಿಸಬಾರದು; ಜೀವನ ದುಃಖದಿಂದಲೇ ಸಾಗುತ್ತದೆ!
ಜಾಗೇಶ್ವರ್ ಧಾಮ್ ಸಂಕೀರ್ಣದಲ್ಲಿರುವ 125 ದೇವಾಲಯ ಗುಂಪುಗಳಲ್ಲಿ ಸಂಪತ್ತಿನ ಅಧಿಪತಿಯಾದ ಕುಬೇರನ ದೇವಾಲಯವಾಗಿದೆ. ಇದು ಭಾರತದ ಎಂಟನೇ ಕುಬೇರ ದೇವಾಲಯವಾಗಿದೆ. ಈ ದೇವಾಲಯವು 9 ನೇ ಶತಮಾನಕ್ಕೆ ಸೇರಿದೆ ಎಂದು ಹೇಳಲಾಗುತ್ತದೆ. ಈ ಪುರಾತನ ದೇವಾಲಯವು ಭಕ್ತರ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಕುಬೇರನು ಇಲ್ಲಿ ಏಕಮುಖ ಶಿವಲಿಂಗದಲ್ಲಿ ಶಕ್ತಿಯ ರೂಪದಲ್ಲಿರುತ್ತಾನೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ