ಅನೇಕ ಬಾರಿ ಕಣ್ಣುಗಳು ಅದುರುವುದು ಅಥವಾ ಹೊಡೆದುಕೊಳ್ಳುತ್ತದೆ. ಜ್ಯೋತಿಷ್ಯದ ಪ್ರಕಾರ ಈ ರೀತಿ ಕಣ್ಣು ಹೊಡೆದುಕೊಳ್ಳುವುದಕ್ಕೆ ಸಹ ಅನೇಕ ಅರ್ಥಗಳಿದೆ. ಪುರುಷರಿಗಿಂತ ವಿಶೇಷವಾಗಿ ಮಹಿಳೆಯರ ಎಡಗಣ್ಣು ಅದುರಿದ್ರೆ ಅಥವಾ ಕಂಪಿಸಿದರೆ ಅದರ ಅರ್ಥವೇನು? ಇದು ಶುಭ ಸೂಚನೆಯೋ ಅಥವಾ ಅಶುಭ ಸೂಚನೆಯೋ? ಎಂಬ ಸಾಕಷ್ಟು ಗೊಂದಲ ನಿಮ್ಮಲ್ಲಿರಬಹುದು. ಇದರ ಅರ್ಥವೇನು ಎಂಬುದಕ್ಕೆ ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ಉತ್ತರ ನೀಡಿದ್ದಾರೆ.
ಎಡಗಣ್ಣು ಮತ್ತು ಬಲಗಣ್ಣುಗಳನ್ನು ಸೂರ್ಯ ಭಾಗ ಮತ್ತು ಚಂದ್ರ ಭಾಗ ಎಂದು ಕರೆಯಲಾಗುತ್ತದೆ. ಮಹಿಳೆಯರಲ್ಲಿ ಎಡಗಣ್ಣು ಅಂದರೆ ಚಂದ್ರ ಭಾಗ ಅದುರಿದ್ರೆ ತುಂಬಾ ಶುಭ ಫಲ ಎಂದು ಬಸವರಾಜ ಗುರೂಜಿ ಹೇಳುತ್ತಾರೆ. ರಾಮಾಯಣದಲ್ಲಿ ಸೀತೆಗೆ ಎಡಗಣ್ಣು ಕಂಪಿಸಿದ ಕಥೆಯನ್ನು ಕೂಡ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹನುಮಾನ್ ಚಾಲೀಸಾವನ್ನು ಯಾವಾಗ, ಹೇಗೆ ಮತ್ತು ಎಷ್ಟು ಬಾರಿ ಪಠಿಸಬೇಕು?
ಮಹಿಳೆಯರಿಗೆ ಎಡಗಣ್ಣು ಅದುರಿದ್ರೆ ವಿವಾಹ ಯೋಗ ಹೀಗೆ ಸಾಕಷ್ಟು ಅದೃಷ್ಟಗಳು ಒಲಿದು ಬರಲಿದೆ. ಇದಲ್ಲದೇ ಎಡಗಣ್ಣು ಕಂಪಿಸಿದಾಗ ತಕ್ಷಣ ಎರಡು ನಿಮಿಷ ನಿಮ್ಮ ಇಷ್ಟ ದೇವರ ಜಪ ಮಾಡಿ. ಇದಲ್ಲದೇ ಮನೆಯಲ್ಲಿ ದೇವರಿಗೆ ತುಪ್ಪದ ದೀಪ ಹಚ್ಚಿ. ಇದು ಶಾಸ್ತ್ರ ಆಧಾರಿತ ನಂಬಿಕೆಯಾಗಿದ್ದು, ಪ್ರತಿಯೊಬ್ಬರ ನಂಬಿಕೆಗೆ ಅನುಸಾರವಾಗಿ ಬದಲಾಗಬಹುದು ಎಂದು ಬಸವರಾಜ ಗುರೂಜಿಯವರು ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ