
ಪ್ರಯಾಣದ ಸುರಕ್ಷತೆ ಮತ್ತು ಧಾರ್ಮಿಕ ನಂಬಿಕೆಗಳ ಸಮ್ಮಿಳನವನ್ನು ಪ್ರತಿಬಿಂಬಿಸುವ ಒಂದು ಆಸಕ್ತಿಕರ ಸಂಪ್ರದಾಯವೆಂದರೆ ವಾಹನಗಳ ಚಕ್ರಗಳಿಗೆ ನಿಂಬೆಹಣ್ಣು ಇಡುವುದು. ಈ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಪ್ರಯಾಣದ ಸಮಯದಲ್ಲಿ ಸಂಭವಿಸಬಹುದಾದ ಅಪಘಾತಗಳು ಮತ್ತು ಅನಾಹುತಗಳಿಂದ ರಕ್ಷಣೆ ಪಡೆಯಲು ಈ ವಿಧಾನವನ್ನು ಅನುಸರಿಸುವುದು ಅಗತ್ಯ.
ನಂಬಿಕೆಯ ಪ್ರಕಾರ, ವಾಹನದ ಮೇಲೆ ರಾಹು, ಶನಿ ಮತ್ತು ಕುಜ ಪ್ರಭಾವ ಇರುತ್ತದೆ. ಆದರೆ ಗುರುವಿನ ಅನುಗ್ರಹವೂ ಇರುತ್ತದೆ. ನಿಂಬೆಹಣ್ಣನ್ನು ಸ್ಟೀರಿಂಗ್‌ನ ಬಲಭಾಗದ ಚಕ್ರಕ್ಕೆ ಇಡುವುದರಿಂದ ಈ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಬಹುದು ಮತ್ತು ಗುರುವಿನ ಅನುಗ್ರಹವನ್ನು ಪಡೆಯಬಹುದು ಎಂದು ನಂಬಲಾಗುತ್ತದೆ. ನಿಂಬೆಹಣ್ಣನ್ನು ನಿಂಬಾಸುರ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ಇಡುವ ಮೂಲಕ ಈ ಅಸುರಿ ಶಕ್ತಿಯನ್ನು ತೊಡೆದುಹಾಕಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಈ ವಿಧಾನವು ಸರಳ ಮತ್ತು ಯಾವುದೇ ವಿಶೇಷ ಪರಿಕರಗಳ ಅಗತ್ಯವಿಲ್ಲದೆ ಮಾಡಬಹುದಾಗಿದೆ. ಹೊಸ ವಾಹನಗಳಿಗಷ್ಟೇ ಅಲ್ಲದೇ ಹಳೆಯ ವಾಹನಗಳಿಗೂ ಈ ವಿಧಾನವನ್ನು ಅನುಸರಿಸಬಹುದು. ವಾಹನವನ್ನು ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ನಿಲ್ಲಿಸಿ, ನಿಂಬೆಹಣ್ಣನ್ನು ಸ್ಟೀರಿಂಗ್‌ನ ಬಲಭಾಗದ ಚಕ್ರಕ್ಕೆ ಇಟ್ಟು ಓಂ ನಮೋ ಆಂಜನೇಯ ಎಂದು ಹೇಳುವುದರಿಂದ ದಿನಪೂರ್ತಿ ರಕ್ಷಣೆ ದೊರೆಯುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ