
ಜಾತಕದಲ್ಲಿ ಕೆಲವು ಗ್ರಹ ಮತ್ತು ನಕ್ಷತ್ರಗಳು ದುರ್ಬಲ ಸ್ಥಾನದಲ್ಲಿದ್ದರೆ ಅವುಗಳಿಂದಾಗಿ, ವಿವಾಹದಲ್ಲಿ ಅನೇಕ ಅಡೆತಡೆಗಳಲಾಗುತ್ತವೆ. ಆದ್ದರಿಂದ ಶುಕ್ರವಾರ ಮಹಾಲಕ್ಷ್ಮಿಯನ್ನು ಪೂಜಿಸುವುದು ಒಳ್ಳೆಯದು. ಶುಕ್ರವಾರ ಶುಕ್ರನನ್ನು ಪೂಜಿಸುವ ದಿನವೂ ಹೌದು. ಆ ದಿನ ಕೆಲವು ಪರಿಹಾರಗಳನ್ನು ಅನುಸರಿಸುವುದರಿಂದ ಮದುವೆಯಲ್ಲಿನ ಅಡೆತಡೆಗಳನ್ನು ತಡೆಯಬಹುದು. ದೇವಿಯ ಪೂಜೆಯ ಜೊತೆಗೆ ದೀಪ ಮತ್ತು ನೈವೇದ್ಯಗಳನ್ನು ಅರ್ಪಿಸಿ, ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಶುಕ್ರವಾರ ಪೂಜೆ ಮಾಡಿ. ಇದು ಶುಕ್ರನ ಬಲವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಶುಕ್ರವಾರದಂದು ಚಿಕ್ಕ ಮಕ್ಕಳಿಗೆ ಮಜ್ಜಿಗೆ, ಹಾಲು, ಮೊಸರು ಇತ್ಯಾದಿಗಳನ್ನು ದಾನ ಮಾಡಿ. ನೀವು ಬಟ್ಟೆ ಮತ್ತು ಆಭರಣಗಳನ್ನು ಸಹ ನೀಡಬಹುದು. ಇದು ವಿವಾಹದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಶುಕ್ರವಾರ, ತುಳಸಿ ಗಿಡದ ಬಳಿ ದೀಪಾರಾಧನೆ ಮಾಡಿ. ನಂತರ ವಿಷ್ಣುವನ್ನು ಪೂಜಿಸಿ. ಇದು ನಿಮಗೆ ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಯಾವುದೇ ಪೂಜೆಯನ್ನು ಪ್ರಾರಂಭಿಸಲು ಬಯಸಿದರೆ, ಮೊದಲು ಗಣೇಶನನ್ನು ಪೂಜಿಸಿ. ಶುಕ್ರವಾರ ಗಣಪತಿಯನ್ನು ಪೂಜಿಸುವುದರಿಂದ ಮದುವೆಯಲ್ಲಿನ ಅಡೆತಡೆಗಳು ದೂರಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಇದನ್ನೂ ಓದಿ: ಪಾದಗಳನ್ನು ಬಾಗಿಲಿನ ಕಡೆಗೆ ಇಟ್ಟುಕೊಂಡು ಮಲಗಬಾರದು ಎಂದು ಹೇಳುವುದೇಕೆ?
ಶುಕ್ರವಾರದಂದು ಶುಕ್ರ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದು ಒಳ್ಳೆಯದು. ಈ ಮಂತ್ರಗಳು ಮದುವೆಗೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ. ಇದಲ್ಲದೇ ಶುಕ್ರವಾರದಂದು ವೆಂಕಟೇಶ್ವರ ದೇವರನ್ನು ಪೂಜಿಸುವುದರಿಂದ ಮದುವೆ ಬೇಗನೆ ಆಗುತ್ತದೆ. ಆದರೆ ಈ ಪರಿಹಾರಗಳನ್ನು ಅನುಸರಿಸುವಾಗ ನಂಬಿಕೆ ಮತ್ತು ತಾಳ್ಮೆಯನ್ನು ಹೊಂದಿರುವುದು ಒಳ್ಳೆಯದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Thu, 25 September 25