ನವರಾತ್ರಿಯ(Navaratri) 9ನೇ ಹಾಗೂ ಕೊನೆಯ ದಿನದಂದು ತಾಯಿ ಸಿದ್ಧಿದಾತ್ರಿಯ(Siddhidatri Devi) ಪೂಜೆ ಮಾಡಲಾಗುವುದು. ಈ ದಿನವನ್ನು ತುಂಬಾ ಸಂಭ್ರಮ ಹಾಗೂ ಸಡಗರಿಂದ ಆಚರಣೆ ಮಾಡಲಾಗುತ್ತದೆ. ಸಿದ್ದಿ ಎಂದರೆ ಸಾರ್ಥಕತೆ ಎಂದು, ದಾತ್ರಿ ಎಂದರೆ ಕೊಡುವವಳು ಎಂದು. ಸಿದ್ಧಿದಾತ್ರಿ ಎಂದರೆ ಜೀವನದ ಸಾರ್ಥಕತೆಯನ್ನು ಕೊಡುವವಳು ಎಂದು. ಇಲ್ಲಿ ಜೀವನ ಸಾರ್ಥಕತೆ ಎಂದರೆ ಜ್ಞಾನವನ್ನು ಪಡೆದು ಮೋಕ್ಷ ಸಾಧನೆ ಅಥವಾ ಜೀವನ್ಮುಕ್ತಿಯನ್ನು ಸಾಧಿಸುವುದು ಎಂದು.
ದುರ್ಗಾದೇವಿಯು ಈಶ್ವರ ದೇವರ ದೇಹವನ್ನು ಪ್ರವೇಶಿಸಿ ಅರ್ಧ ಭಾಗದಲ್ಲಿ ನೆಲೆನಿಂತರು ಎನ್ನಲಾಗುತ್ತದೆ. ತಾಯಿ ಸಿದ್ಧಿದಾರ್ಥಿಯು ಕೆಂಪು ತಾವರೆ ಮೇಲೆ ವಿರಾಜಮಾನರಾಗಿರುವರು. ಅವರು ಸಿಂಹವಾಹಿನಿಯಾಗುವರು. ಅವರ ಕೈಯಲ್ಲಿ ಶಂಖ, ರಾಜದಂಡ ಮತ್ತು ತಾವರೆಯಿರುವುದು.
ಸಿದ್ಧಿಧಾತ್ರಿ ದೇವಿ ಪೂಜೆ ವಿಧಾನ
ತಾಯಿ ಸಿದ್ಧಿಧಾತ್ರಿ ಪೂಜೆಗೆ ಮಲ್ಲಿಗೆ ಹೂವನ್ನು ಬಳಸಬೇಕು. ಸುಗಂಧ ಭರಿತವಾಗಿರುವ ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿದ ಬಳಿಕ ಏಕಾಗ್ರತೆ ಹಾಗೂ ಭಕ್ತಿಯಿಂದ ಪೂಜೆ ಮಾಡಬೇಕು. ಷೋಡಸೋಪಚಾರ ಪೂಜೆ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ, ಕುಟುಂಬದ ಸಮೃದ್ಧಿ ಹಾಗೂ ಯಶಸ್ಸಿಗೆ ಪ್ರಾರ್ಥಿಸಬೇಕು. ಇದು ನವರಾತ್ರಿಯ ಅಂತಿಮ ದಿನವಾಗಿರುವ ಕಾರಣದಿಂದಾಗಿ ದೈವಿಕ ಶಕ್ತಿಯು ಕಂಡುಬರುವುದು ಮಾತ್ರವಲ್ಲದೆ, ಸಂಭ್ರಮ ಹಾಗೂ ತೃಪ್ತಿ ಇರುವುದು. ಇದನ್ನೂ ಓದಿ: Devi Mahagauri Avtar: ನವರಾತ್ರಿಯ 8ನೇ ದಿನದ ಮಹಾಗೌರಿ ಪೂಜೆ ಮಾಡುವುದು ಹೇಗೆ? ಇಲ್ಲಿವೆ ಮಂತ್ರಗಳು
ನವರಾತ್ರಿಯ 9ನೇ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಶಾಸ್ತ್ರೀಯ ವಿಧಿ-ವಿಧಾನದಿಂದ ಹಾಗೂ ಪೂರ್ಣನಿಷ್ಠೆಯಿಂದ ಸಾಧನೆ ಮಾಡುವ ಸಾಧಕರಿಗೆ ಸಿದ್ಧಿಗಳು ಪ್ರಾಪ್ತಿ ಆಗುತ್ತವೆ. ಬ್ರಹ್ಮಾಂಡದ ಮೇಲೆ ವಿಜಯವನ್ನು ಪಡೆಯುವ ಸಾಮಥ್ರ್ಯ ಅವನಲ್ಲಿ ಬಂದು ಬಿಡುತ್ತದೆ. ಪ್ರತಿಯೊಬ್ಬ ಮನುಷ್ಯನು ತಾಯಿ ಸಿದ್ಧಿದಾತ್ರಿಯ ಕೃಪೆಯನ್ನು ಪಡೆದುಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು. ಅವಳ ಆರಾಧನೆಯ ಕಡೆಗೆ ಮುಂದುವರಿಯಬೇಕು. ಇವಳ ಕೃಪೆಯಿಂದ ಅತ್ಯಂತ ದುಃಖರೂಪೀ ಸಂಸಾರದಿಂದ ನಿರ್ಲಿಪ್ತನಾಗಿದ್ದುಕೊಂಡು ಎಲ್ಲ ಸುಖವನ್ನು ಭೋಗಿಸುತ್ತಾ ಅವನು ಮೋಕ್ಷವನ್ನು ಪಡೆಯಬಲ್ಲನು.
ನವದುರ್ಗೆಯಲ್ಲಿ ಸಿದ್ಧಿದಾತ್ರಿ ದೇವಿಯೂ ಕೊನೆಯವಳಾಗಿದ್ದಾಳೆ. ಬೇರೆ ಎಂಟು ದುರ್ಗೆಯರ ಪೂಜೆ ಉಪಾಸನೆಯನ್ನು ಶಾಸ್ತ್ರೀಯ ವಿಧಿ – ವಿಧಾನಕ್ಕನುಸಾರ ಮಾಡುತ್ತಾ ಭಕ್ತರು ನವರಾತ್ರಿಯ ಒಂಭತ್ತನೇ ದಿನ ಇವಳ ಉಪಾಸನೆಯಲ್ಲಿ ಪ್ರವೃತ್ತರಾಗುತ್ತಾರೆ. ಈ ಸಿದ್ಧಿದಾತ್ರೀ ದೇವಿಯ ಉಪಾಸನೆಯನ್ನು ಪೂರ್ಣಗೊಳಿಸಿದ ಬಳಿಕ ಭಕ್ತರ, ಸಾಧಕರ, ಲೌಕಿಕ – ಪಾರಲೌಕಿಕ ಎಲ್ಲ ಪ್ರಕಾರದ ಕಾಮನೆಯಗಳ ಪೂರ್ತಿ ಆಗಿ ಹೋಗುತ್ತದೆ ಎನ್ನುವ ನಂಬಿಕೆಯಿದೆ.
ತಾಯಿ ಸಿದ್ಧಿಧಾತ್ರಿಯ ಮಂತ್ರಗಳು
ಓಂ ದೇವಿ ಸಿದ್ಧಿಧಾತ್ರಿಯೈ ನಮಃ
ಓಂ ದೇವಿ ಸಿದ್ಧಿಧಾತ್ರಿಯೈ ನಮಃ
ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ
ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ
ಸಿದ್ಧಿಧಾತ್ರಿ ದೇವಿಯ ಸ್ತುತಿ
ಯಾ ದೇವಿ ಸರ್ವ ಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ