Mysuru Dasara 2022: ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ, ಜಂಬೂಸವಾರಿಗೆ ಭರ್ಜರಿ ಸಿದ್ಧತೆ

| Updated By: ಆಯೇಷಾ ಬಾನು

Updated on: Oct 04, 2022 | 10:11 AM

ವಿಶ್ವವಿಖ್ಯಾತ ದಸರಾರಲ್ಲಿ ಈ ಸಲ ವಜ್ರಮುಷ್ಠಿ ಕಾಳಗಕ್ಕೆ ಅನುಮತಿ ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ನಿಂತಿದ್ದ ಜಟ್ಟಿ ಕಾಳಗಕ್ಕೆ ಉಸ್ತಾದ್ ಮಂಜು ಜೆಟ್ಟಿ ಸಮ್ಮುಖದಲ್ಲಿ ಜೊತೆ ಕಟ್ಟುವಿಕೆ ಕಾರ್ಯ ನಡೆದಿದೆ.

ಇಂದು ಮೈಸೂರಿನಲ್ಲಿ ಆಯುಧಪೂಜೆ ಸಂಭ್ರಮ ಮನೆ ಮಾಡಿದೆ. ಆಯುಧಪೂಜೆ ಹಿನ್ನಲೆ ಅರಮನೆಯಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆಯೇ ಅರಮನೆಯಲ್ಲಿರೋ ಆಯುಧಗಳನ್ನ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನಿಸಿ ಪೂಜೆ ಸಲ್ಲಿಸಲಾಗುತ್ತೆ. ಬಳಿಕ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಕೂಡ ಪೂಜೆ ಸಲ್ಲಿಸಲಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಟ್ಯಾಬ್ಲೋಗಳನ್ನ ಪರಿಶೀಲಿಸಿದ್ರು.

ವಿಶ್ವವಿಖ್ಯಾತ ದಸರಾರಲ್ಲಿ ಈ ಸಲ ವಜ್ರಮುಷ್ಠಿ ಕಾಳಗಕ್ಕೆ ಅನುಮತಿ ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ನಿಂತಿದ್ದ ಜಟ್ಟಿ ಕಾಳಗಕ್ಕೆ ಉಸ್ತಾದ್ ಮಂಜು ಜೆಟ್ಟಿ ಸಮ್ಮುಖದಲ್ಲಿ ಜೊತೆ ಕಟ್ಟುವಿಕೆ ಕಾರ್ಯ ನಡೆದಿದೆ. ಈ ಬಾರಿ ಮೈಸೂರು, ಬೆಂಗಳೂರು, ಚಾಮರಾಜನಗರ, ಚನ್ನಪಟ್ಟಣದಿಂದ ತಲಾ ಒಬ್ಬರು ಜೆಟ್ಟಿಗಳು ಭಾಗಿಯಾಗಲಿದ್ದಾರೆ. ಕಳೆದೆರಡು ವರ್ಷ ಸಿಂಪಲ್ಲಾಗಿ ನಡೆದಿದ್ದ ದಸರಾ ಈ ಬಾರಿ ವೈಭವೋಪೇತವಾಗಿ ನಡೆಯಲಿದೆ. ಜಂಬೂಸವಾರಿಗೆ ನಾಳೆ ಒಂದೇ ದಿನ ಬಾಕಿ ಇದ್ದು, ಅಂತಿಮ ಹಂತದ ಸಿದ್ಧತೆಗಳು ಜೋರಾಗಿ ನಡೀತಿವೆ.