AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara 2022: ಇಂದು ಅರಮನೆಯಲ್ಲಿ ಆಯುಧ ಪೂಜೆ: ಇತರೆ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಮೈಸೂರು ದಸರಾ  ಉತ್ಸವದಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಅರಮನೆಯಲ್ಲಿ ಇಂದು (ಅ 4) ಆಯುಧಪೂಜೆ ಮಾಡಲಾಗುತ್ತಿದೆ.

Mysore Dasara 2022: ಇಂದು ಅರಮನೆಯಲ್ಲಿ ಆಯುಧ ಪೂಜೆ: ಇತರೆ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ
ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ರಿಂದ ನಾಳೆ ಆಯುಧ ಪೂಜೆ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 04, 2022 | 6:23 AM

Share

ಮೈಸೂರು: ನವರಾತ್ರಿಯ ಸಂಭ್ರಮ ಸಡಗರ ಇಂದಿಗೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರಿನಲ್ಲಿ (Mysore Dasara) ವಿಶ್ವವಿಖ್ಯಾತ ದಸರಾ ಉತ್ಸವವು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜನರು, ಭಕ್ತರು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇನ್ನು ಇಂದು (ಅ 4) ಅರಮನೆಯಲ್ಲಿ ಆಯುಧಪೂಜೆ ಮಾಡಲಾಗುತ್ತದೆ. ಮೈಸೂರು ದಸರಾ  ಉತ್ಸವದಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಾಳೆ ಮೈಸೂರಿನಲ್ಲಿ ಯಾವೆಲ್ಲ ಕಾರ್ಯಕ್ರಮ ನಡೆಯಲಿದೆ ಎಂಬ ವಿವರ ಈ ಕೆಳಗಿನಂತಿದೆ.

ಇಂದಿನ (ಅ 4) ದಸರಾ ಕಾರ್ಯಕ್ರಮಗಳ ವಿವರ

ಅರಮನೆಯಲ್ಲಿ ಆಯುಧಪೂಜೆ: ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ ಪೂಜಾ ವಿಧಿ ವಿಧಾನ ಆರಂಭವಾಗಲಿದ್ದು, 9 ಗಂಟೆಗೆ ಚಂಡಿ ಹೋಮ ಪೂರ್ಣಾಹುತಿಯಾಗುತ್ತದೆ. 07.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನವಾಗುತ್ತದೆ.

8.10ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಲಾಗುವುದು. 9.25ಕ್ಕೆ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ಆಗಮನ. 11.02 ರಿಂದ 11.25ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಪೂಜೆ ಮಾಡಲಿದ್ದಾರೆ. (ಇದು ಸುಮಾರು 45 ನಿಮಿಷ ನಡೆಯುತ್ತದೆ).

ರಾತ್ರಿ ಖಾಸಗಿ ದರ್ಬಾರ್, ಸಿಂಹ ವಿಸರ್ಜನೆ ನಡೆಯುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಾತ್ರಿ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡುತ್ತಾರೆ. ವಿಸರ್ಜನೆ ನಂತರ ದಪ್ತಾರ್ ಪೂಜೆ ಮಾಡಲಾಗುತ್ತದೆ.

ನಾಡಹಬ್ಬ ದಸರಾ ಮಹೋತ್ಸವ ಕಾರ್ಯಕ್ರಮ

ಸ್ಥಬ್ದಚಿತ್ರಗಳ ತಯಾರಿಕೆ. ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಸಿದ್ದತೆ ಮಾಡಲಾಗುವುದು. ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿ ಮೂರ್ತಿ ಸಿದ್ದತೆ. ಜಂಬೂಸವಾರಿಗೆ ಆನೆಗಳು ಸಿದ್ದತೆ ಮಾಡಲಾಗುವುದು. ಬನ್ನಿಮಂಟಪದದಲ್ಲಿ ಪಂಜಿನ ಕವಾಯತು ಮೈದಾನದಲ್ಲಿ ಸಿದ್ದತೆ. ನಂದಿಧ್ವಜ ಸ್ಥಂಬ, ನಂತರ ಫಿರಂಗಿ ಪೂಜೆ ಮಾಡಲಾಗುವುದು.

ಪೂಜೆ ಸಾಮಾಗ್ರಿಗಳ ಬೆಲೆ ದುಪ್ಪಟ್ಟು

ಆಯುಧ ಪೂಜೆ ಹಿನ್ನೆಲೆ ಅಗತ್ಯ ಸಾಮಾಗ್ರಿಗಳ ಬೆಲೆಯನ್ನು ದಪ್ಪಟ್ಟು ಏರಿಸಲಾಗಿದೆ. ಆಯುಧ ಪೂಜೆಗೆ ಅಗತ್ಯವಾಗಿರುವ ಹೂವು, ಕುಂಬಳಕಾಯಿ, ಬಾಳೆ ಕಂಬ ದರ ದುಪ್ಪಟ್ಟಾಗಿದ್ದು, ಹೆಚ್ಚಿನ ಬೆಲೆ ತೆತ್ತು ಸಾಮಾಗ್ರಿಗಳನ್ನು ಖರೀದಿಸುವ ಸ್ಥಿತಿ ಸಾರ್ವಜನಿಕರದ್ದಾಗಿದೆ. ಆದರೆ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಯಾವುದೇ ದರ ಏರಿಕೆಗಳು ಆಗಿಲ್ಲ ಎಂಬುದು ಕೊಂಚ ಸಮಾಧಾನಕರ ಸಂಗತಿ.

ಬೆಂಗಳೂರು ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೂ ಎರಡು ದಿನ ಮುನ್ನವೇ ಖರೀದಿ ಭರಾಟೆ ಜೋರಾಗಿದೆ. ಅ.3 ಮತ್ತು 4 ಹೂ, ಕುಂಬಳಕಾಯಿ ದರ ಮತ್ತಷ್ಟ ಹೆಚ್ಚಳ ಸಾಧ್ಯತೆ ಹಿನ್ನೆಲೆ ಗ್ರಾಹಕರು ಖರೀದಿಗೆ ಮುಂದಾಗಿದ್ದರು. ಮಳೆ, ಬೆಳೆ ನಷ್ಟ ಹಿನ್ನೆಲೆ ದರ ಏರಿಕೆ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಳೆದ ವಾರ 10 ರೂಪಾಯಿ ಇದ್ದ ಕೆ.ಜಿ ಕುಂಬಳಕಾಯಿ ಇಂದು 30ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ಮತ್ತಷ್ಟು ದರ ಏರಿಕೆ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಹೂವಿನ ದರಗಳಲ್ಲೂ ಹೆಚ್ಚಳವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:04 pm, Mon, 3 October 22

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ