
ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡು ಕೇಳಿರುತ್ತೀರಿ. ಈ ಹಾಡೇ ಹೇಳುವಂತೆ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾಗೆ ಮೈಸೂರು ಮದುವಣಗಿತ್ತಿಯಂತೆ ಬಣ್ಣ ಬಣ್ಣದ ಲೈಟುಗಳಿಂದ ಮಿರ ಮಿರ ಮಿಂಚುತ್ತಿದೆ.

ಕತ್ತಲಾಗುತ್ತಿದ್ದಂತೆ ಮೈಸೂರಿನಲ್ಲಿ ಬಣ್ಣದ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತೆ. ಈ ದಸರಾ ಸಡಗರ-ಸಂಭ್ರಮಕ್ಕೆ ಇಂದು ತೆರೆ ಬೀಳಲಿದೆ.

ಬಣ್ಣ ಬಣ್ಣದ ಲೈಟುಗಳಲ್ಲಿ ಕಂಗೊಳಿಸುವ ಮೈಸೂರನ್ನು ನೋಡುವುದೇ ಚಂದ.

ಈ ಬಾರಿ ದೀಪಾಲಂಕಾರವನ್ನು ಹೆಚ್ಚುವರಿಯಾಗಿ ಐದು ದಿನಗಳ ಕಾಲ ವಿಸ್ತರಿಸಲು ಚಿಂತನೆ ನಡೆದಿದೆ.

ದೀಪಾಲಂಕಾರಗೊಂಡಿರುವ ಮೈಸೂರಿನ ಪ್ರಮುಖ ವೃತ್ತಗಳು.

ದೀಪಾಲಂಕಾರದಲ್ಲಿ ಮಿಂಚುತ್ತಿರುವ ಮೈಸೂರು ರಸ್ತೆಗಳು.

ನಕ್ಷತ್ರವೇ ಧರೆಗಿಳಿದು ಬಂದಂತೆ ಕಣ್ಣುಗಳಿಗೆ ಆಕರ್ಷಣೀಯವಾಗಿರುವ ಮೈಸೂರು ನಗರ.

ದೀಪಾಲಂಕಾರದಲ್ಲಿ ಮಿನುಗುತ್ತಿರುವ ಮೈಸೂರು ಅರಮನೆ