Owl: ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ

ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದ್ರೆ ತಂತ್ರಶಾಸ್ತ್ರದಲ್ಲಿ ಗೂಬೆಗೆ ವಿಶೇಷ ಮಹತ್ವವಿದೆ. ಜೊತೆಗೆ ಅದು ಅತ್ಯಂತ ಬುದ್ದಿವಂತ ಪ್ರಾಣಿಗಳಲ್ಲಿ ಒಂದು. ಬನ್ನಿ ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ ಎಂಬ ಬಗ್ಗೆ ತಿಳಿದುಕೊಳ್ಳಿ.

Owl: ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ
ಗೂಬೆ
Updated By: ಆಯೇಷಾ ಬಾನು

Updated on: Oct 19, 2022 | 6:30 AM

ರಾತ್ರಿಯ ರಾಜ ಎಂದು ಕರೆಯಲ್ಪಡುವ ಗೂಬೆ ಬಗ್ಗೆ ನಮ್ಮಲ್ಲಿ ಅನೇಕ ನಂಬಿಕೆಗಳಿವೆ. ಕೆಲವರು ಗೂಬೆಯನ್ನು ಶುಭವೆಂದು ನಂಬಿದರೆ ಮತ್ತೆ ಕೆಲವರು ಅದನ್ನು ಅಶುಭವೆನ್ನುತ್ತಾರೆ. ಸಾಮಾನ್ಯವಾಗಿ ಮೂರ್ಖ ಎಂದು ಬೈಯ್ಯುವಾಗ ಗೂಬೆ ಪದ ಬಳಸಲಾಗುತ್ತದೆ. ಆದ್ರೆ ಮೂಲತಃ ಇದು ತಪ್ಪು. ಗೂಬೆ, ತಾಯಿ ಲಕ್ಷ್ಮಿಯ ವಾಹನ. ಜೊತೆಗೆ ಅದು ಅತ್ಯಂತ ಬುದ್ದಿವಂತ ಪ್ರಾಣಿಗಳಲ್ಲಿ ಒಂದು. ಬನ್ನಿ ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ ಎಂಬ ಬಗ್ಗೆ ತಿಳಿದುಕೊಳ್ಳಿ.

ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದ್ರೆ ತಂತ್ರಶಾಸ್ತ್ರದಲ್ಲಿ ಗೂಬೆಗೆ ವಿಶೇಷ ಮಹತ್ವವಿದೆ. ಪ್ರಾಚೀನ ಕಾಲದಲ್ಲಿ ಹವಾಮಾನದ ಬಗ್ಗೆ ತಿಳಿಯಲೂ ಗೂಬೆಯನ್ನು ಬಳಕೆ ಮಾಡ್ತಾ ಇದ್ದರು. ಪುರಾಣ ಕಾಲದ ಉಲ್ಲೇಖದಂತೆ ಮಂತ್ರ-ತಂತ್ರ ಮಾಡುವವರು ಅಮವಾಸ್ಯೆ ರಾತ್ರಿಯಂದು ಗೂಬೆಯನ್ನು ಬಲಿ ಕೊಡ್ತಾರಂತೆ. ಇದರಿಂದ ಲಕ್ಷ್ಮಿ ಪ್ರಸನ್ನಳಾಗ್ತಾಳೆ ಎಂಬುದು ಅವರ ನಂಬಿಕೆ. ಆದ್ರೆ ಯಾವುದೇ ಬಲಿಯಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುವುದಿಲ್ಲ. ಅದೇನೇ ಇರಲಿ, ಗೂಬೆ ಕೆಲ ಶುಭ ಸಂಕೇತಗಳನ್ನೂ ನೀಡುತ್ತದೆ.

ಗೂಬೆಯ ಕೆಲ ಶುಭ ಸಂಕೇತಗಳು

  • ಬೆಳಿಗ್ಗೆ ಪೂರ್ವದಲ್ಲಿ ಕುಳಿತಿರುವ ಗೂಬೆಯನ್ನು ನೋಡಿದ್ರೆ ಅಥವಾ ಧ್ವನಿ ಕೇಳಿದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಅಥವಾ ಪ್ರಯಾಣ ಮಾಡುವ ದಾರಿಯಲ್ಲಿ ಗೂಬೆಯನ್ನು ಕಂಡರೆ ಶುಭ ಎನ್ನಲಾಗುತ್ತೆ.
  • ರಾತ್ರಿ ವೇಳೆ ಹೊರಗೆ ಹಾಕಿರುವ ಮಂಚದ ಮೇಲೆ ಗೂಬೆ ಬಂದು ಕುಳಿತಲ್ಲಿ ಆ ಮನೆಯಲ್ಲಿ ಶೀಘ್ರವೇ ಮದುವೆ ನಡೆಯಲಿದೆ ಎಂದರ್ಥ.
  • ಗರ್ಭಿಣಿ ಹೆರಿಗೆಗೆ ಹೋಗುವ ವೇಳೆ ಗೂಬೆ ನೋಡಿದ್ರೆ ಆಕೆಗೆ ಅವಳಿ ಮಕ್ಕಳು ಜನಿಸುತ್ತವೆ ಎಂಬ ನಂಬಿಕೆ ಇದೆ.
  • ಗೂಬೆ ದೇಹ ರೋಗಿ ಮೈಗೆ ತಾಕಿದ್ರೆ ಆತ ಬೇಗ ಗುಣಮುಖನಾಗುತ್ತಾನೆಂದರ್ಥ. ಬಿಳಿ ಗೂಬೆ ಕಾಣಿಸಿಕೊಂಡರೆ ಶುಭ. ಬಿಳಿ ಗೂಬೆ ನೋಡಿದವರು ಶುಭ ಸುದ್ದಿಯನ್ನು ಕೇಳುತ್ತೀರಿ ಎನ್ನಲಾಗಿದೆ.
  • ಬೆಳಗ್ಗೆ ಸಮಯದಲ್ಲಿ ಗೂಬೆ ಕಂಡರೆ ಶುಭ ಸಂಕೇತ ಎನ್ನಲಾಗಿದೆ. ಬೆಳಗ್ಗೆ ಸಮಯದಲ್ಲಿ ಗೂಬೆ ಕಂಡವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ.
  • ನೀವು ಎಲ್ಲಾದರೂ ಹೋಗುತ್ತಿರುವಾಗ ಗೂಬೆ ನಿಮ್ಮ ದಾರಿಗೆ ಅಡ್ಡ ಬಂದರೆ ಅದು ಶುಭ ಸಂಕೇತ. ನಿಮ್ಮ ಜೀವನದಲ್ಲಿ ಏನೇ ಅಡೆ ತಡೆಗಳಿದ್ದರೂ ಅಥವಾ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ.