ಶವ ಯಾತ್ರೆಯನ್ನು ನೋಡುವುದು ಶುಭವೋ, ಅಶುಭವೋ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

| Updated By: ಆಯೇಷಾ ಬಾನು

Updated on: Jul 19, 2022 | 6:45 AM

ಮನುಷ್ಯನ ಮರಣದ ನಂತರ ಶವವನ್ನು ನೋಡುವುದನ್ನು ಕೆಲವರು ಅ ಶುಭವೆಂದು ಭಾವಿಸುತ್ತಾರೆ ಹಾಗೂ ಕೆಲವರು ಶುಭವೆಂದು ಭಾವಿಸುತ್ತಾರೆ. ಆದ್ರೆ ಶವ ಯಾತ್ರೆ ನೋಡಿದ್ರೆ ಅನೇಕ ಶುಭ ಫಲಗಳು ಪ್ರಾಪ್ತಿಯಾಗಲಿವೆ ಎಂದು ಹೇಳಲಾಗುತ್ತೆ.

ಶವ ಯಾತ್ರೆಯನ್ನು ನೋಡುವುದು ಶುಭವೋ, ಅಶುಭವೋ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?
ಶವ ಯಾತ್ರೆ
Follow us on

ಜಗತ್ತಿನಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗಳು ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಸಾವಿನಿಂದ ಯಾವೊಬ್ಬ ವ್ಯಕ್ತಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ. ಜನನದ ಬಳಿಕ ಮರಣ ಇದ್ದೇ ಇದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಮರಣದ ನಂತ್ರ ಆತ್ಮ ಪಂಚ ಭೂತಗಳಲ್ಲಿ ಲೀನವಾಗುತ್ತೆ. ಬಳಿಕ ಅದೇ ಆತ್ಮ ಪುನರ್ಜನ್ಮ ಪಡೆಯುತ್ತೆ ಎಂದು ಹೇಳಲಾಗುತ್ತೆ. ಆದ್ರೆ ಮನುಷ್ಯನ ಮರಣದ ನಂತರ ಶವವನ್ನು ನೋಡುವುದನ್ನು ಕೆಲವರು ಅ ಶುಭವೆಂದು ಭಾವಿಸುತ್ತಾರೆ ಹಾಗೂ ಕೆಲವರು ಶುಭವೆಂದು ಭಾವಿಸುತ್ತಾರೆ. ಆದ್ರೆ ಶವ ಯಾತ್ರೆ ನೋಡಿದ್ರೆ ಅನೇಕ ಶುಭ ಫಲಗಳು ಪ್ರಾಪ್ತಿಯಾಗಲಿವೆ ಎಂದು ಹೇಳಲಾಗುತ್ತೆ.

ಆಕಸ್ಮಿಕವಾಗಿ ಶವ ಯಾತ್ರೆ ನೋಡಿದರೆ ಏನು ಮಾಡಬೇಕು?

ನಾವು ಹೊರಗಡೆ ಹೋಗುವಾಗ ಆಕಸ್ಮಿಕವಾಗಿ ನಮ್ಮ ಮುಂದೆ ಶವಯಾತ್ರೆ ಹೋದರೆ, ಅಥವಾ ನಾವು ಹೋಗುವ ದಾರಿಯಲ್ಲಿ ಎಲ್ಲೂ ಮನೆಯ ಮುಂದೆ ಶವ ಇಟ್ಟಿದ್ದರೆ ಸಾಮಾನ್ಯವಾಗಿ ಅದನ್ನು ನೋಡಿದ ವ್ಯಕ್ತಿ ಶವಕ್ಕೆ ಕೈ ಮುಗಿಯುತ್ತಾನೆ. ಶಿವಶಿವ ಎಂದು ಶಿವ ನಾಮ ಜಪಿಸ್ತಾನೆ. ದೇವರನ್ನು ನೆನೆಪಿಸಿಕೊಂಡು ಒಳ್ಳೆಯದಕ್ಕಾಗಿ ಬೇಡುತ್ತಾನೆ. ಇದಕ್ಕೆ ಬಲವಾದ ಕಾರಣವಿದೆ. ಸಾವನ್ನಪ್ಪಿದ ವ್ಯಕ್ತಿ ತನ್ನ ಜೊತೆ ತನ್ನ ಶವಕ್ಕೆ ನಮಸ್ಕರಿಸಿದ ವ್ಯಕ್ತಿಯ ನೋವು, ದುಃಖವನ್ನೆಲ್ಲ ಕೊಂಡೊಯ್ಯುತ್ತಾನಂತೆ. ಶವ ಯಾತ್ರೆ ನೋಡಿದ ವೇಳೆ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು, ಶಿವನ ಧ್ಯಾನ ಮಾಡಿದ್ರೆ ಸಾವನ್ನಪ್ಪಿದ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಸಿಗಲಿದೆಯಂತೆ. ಹೀಗಾಗಿ ಶವ ಯಾತ್ರೆಯನ್ನು ನೋಡುವುದು ಕೆಟ್ಟದಲ್ಲ ಎಂದು ಭಾವಿಸಲಾಗಿದೆ. ದೇವರ ಬಳಿ ಹೋಗುವ ಆತ್ಮವು, ಶವವನ್ನು ನೋಡಿ ಕೈ ಮುಗಿಯುವ ವ್ಯಕ್ತಿಯ ಕಷ್ಟ, ಸಮಸ್ಯೆಗಳನ್ನು ತೆಗೆದುಕೊಂಡು ಹೋಗುತ್ತದಂತೆ.

ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಶವ ಯಾತ್ರೆ ನೋಡುವುದು ಶುಭ ಎಂದು ಪರಿಗಣಿಸಲಾಗಿದೆ. ಶವ ಯಾತ್ರೆ ನೋಡಿದ್ರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ. ದುಃಖ ದೂರವಾಗುವುದಲ್ಲದೆ, ಮನಸ್ಸಿನ ಆಸೆ ಪೂರೈಸುತ್ತದೆಯೆಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಮನುಷ್ಯ ಬದುಕಿದ್ದಾಗ ಕೊಡುವ ಬೆಲೆಯನ್ನೂ ಸತ್ತ ಮೇಲೆ ಮಣ್ಣಾಗುವವರೆಗೂ ಕೊಡಬೇಕು. ಆದ್ರೆ ಸಾಮಾನ್ಯವಾಗಿ ಸತ್ತ ಮೇಲೆ ಆ ಮನುಷ್ಯನನ್ನು ಮೃತ ದೇಹ ಎಂದು ಪರಿಗಣಿಸುತ್ತೇವೆ. ಇದು ಎಂತಹ ವಿಪರ್ಯಾಸ ಅಲ್ವಾ.