
ಶನಿದೇವನನ್ನು ಕರ್ಮದ ಫಲವನ್ನು ನೀಡುವ ಹಾಗೂ ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಒಂಬತ್ತು ಗ್ರಹಗಳಲ್ಲಿಯೂ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಗ್ರಹವೆಂದರೆ ಶನಿ. ಶಿಸ್ತು, ಸದಾಚಾರ, ಪರಿಶ್ರಮ, ಕರ್ಮ ಹಾಗೂ ಆಧ್ಯಾತ್ಮಿಕತೆಯ ಮೇಲೆ ಶನಿಯ ಪ್ರಭಾವ ಅತ್ಯಂತ ಗಾಢವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವೂ ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿಚಕ್ರ ಸ್ಥಾನವನ್ನು ಬದಲಾಯಿಸುತ್ತದೆ. ಈ ಗ್ರಹ ಸಂಚಾರಗಳು ಮಾನವ ಜೀವನದ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಅದರಲ್ಲೂ ಶನಿಯ ಸಂಚಾರವು ದೀರ್ಘಕಾಲಿಕ ಬದಲಾವಣೆಗಳನ್ನು ತರುತ್ತದೆ ಎನ್ನುವುದು ಜ್ಯೋತಿಷ್ಯರ ಅಭಿಪ್ರಾಯ.
ಪ್ರಸ್ತುತ ಶನಿಗ್ರಹವು ಮೀನ ರಾಶಿಯ ಮೂಲಕ ಸಂಚರಿಸುತ್ತಿದ್ದು ತನ್ನ ನಕ್ಷತ್ರವನ್ನು ಬದಲಾಯಿಸಲಿದೆ. ಈ ನಕ್ಷತ್ರಗಳ ಬದಲಾವಣೆ ಮಾರ್ಚ್ 13ರಂದು ಸಂಜೆ 7:13ಕ್ಕೆ ಶನಿದೇವ ಮೀನ ರಾಶಿಯಲ್ಲಿ ಅಸ್ತವಾಗಲಿದೆ. ಸುಮಾರು 30 ವರ್ಷಗಳ ಬಳಿಕ ನಡೆಯುತ್ತಿರುವ ಈ ಅಪರೂಪದ ಸಂಯೋಗವು ಕೆಲ ರಾಶಿಚಕ್ರಗಳಿಗೆ ವಿಶೇಷವಾಗಿ ಶುಭಫಲಗಳನ್ನು ನೀಡಲಿದೆ. ಶನಿಯ ಈ ಸಂಚಾರವು ಸಕಾರಾತ್ಮಕ ಶಕ್ತಿ, ಸ್ಥಿರತೆ ಮತ್ತು ಅದೃಷ್ಟವನ್ನು ತರಲಿದೆ ಎಂದು ಜ್ಯೋತಿಷ್ಯ ಹೇಳುತ್ತದೆ.
ಮೀನ ರಾಶಿಯಲ್ಲಿ ಶನಿಗ್ರಹದ ಸ್ಥಾನವು ಧನು ರಾಶಿಯವರಿಗೆ ಅತ್ಯಂತ ಶುಭಕರವಾಗಿರುತ್ತದೆ. ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಬಯಸಿದ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೆಚ್ಚುವರಿ ಜವಾಬ್ದಾರಿಗಳು ಸಿಗುತ್ತವೆ. ಹೊಸ ವ್ಯವಹಾರವನ್ನು ಆರಂಭಿಸಲು ಇದು ಅತ್ಯುತ್ತಮ ಸಮಯ. ಆದಾಯದಲ್ಲಿ ಹೆಚ್ಚಳವಾಗುವುದರಿಂದ ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವರು. ವಿದೇಶ ಪ್ರಯಾಣದ ಅವಕಾಶಗಳು ಸಿಗಬಹುದು. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತಿದ್ದು, ಗಂಡ-ಹೆಂಡತಿ ಒಟ್ಟಾಗಿ ದೀರ್ಘ ಪ್ರವಾಸಕ್ಕೆ ತೆರಳುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ಕುಂಭ ರಾಶಿಯವರಿಗೆ ಶನಿಯ ಮೀನ ರಾಶಿ ಸಂಚಾರವು ಬಹು ನಿರೀಕ್ಷಿತ ಶುಭಫಲಗಳನ್ನು ತರುತ್ತದೆ. ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳು ನಿಧಾನವಾಗಿ ಬಗೆಹರಿಯಲಾರಂಭಿಸುತ್ತವೆ. ಹಠಾತ್ ಆರ್ಥಿಕ ಲಾಭಗಳು ದೊರೆಯುವ ಸಾಧ್ಯತೆ ಇದೆ. ಹಳೆಯ ಸಾಲಗಳನ್ನು ತೀರಿಸುವಲ್ಲಿ ಯಶಸ್ಸು ಸಿಗುತ್ತದೆ. ಆಸ್ತಿ ಹಾಗೂ ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅನುಕೂಲಕರ ನಿರ್ಧಾರಗಳು ಕೈಗೂಡುತ್ತವೆ. ಬಹುಕಾಲದಿಂದ ಬಾಕಿ ಉಳಿದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಕ್ಷೇತ್ರದ ಅಡೆತಡೆಗಳು ದೂರವಾಗುತ್ತವೆ. ಕುಟುಂಬದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತವೆ. ಹೊಸ ವ್ಯವಹಾರ ಆರಂಭಿಸುವ ಅವಕಾಶ ಸಿಗಬಹುದು. ಹಿಂದಿನ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವ ಸೂಚನೆಗಳಿವೆ.
ಶನಿಗ್ರಹವು ಸ್ವಂತ ರಾಶಿಯಾದ ಮೀನದಲ್ಲಿ ಸಂಚರಿಸುವುದರಿಂದ ಮೀನ ರಾಶಿಯವರಿಗೆ ಸಂಪತ್ತು, ಗೌರವ ಹಾಗೂ ಖ್ಯಾತಿ ಹೆಚ್ಚಾಗಲಿದೆ. ಮಾರ್ಚ್ ತಿಂಗಳಿನಿಂದ ಕುಟುಂಬದ ಆರ್ಥಿಕ ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗಲು ಪ್ರಾರಂಭಿಸುತ್ತವೆ. ಹಳೆಯ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಆಸ್ತಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶ ಸಿಗಬಹುದು. ಉದ್ಯಮಿಗಳು ವ್ಯವಹಾರದಲ್ಲಿ ಬೆಳವಣಿಗೆ ಮತ್ತು ಲಾಭವನ್ನು ಕಾಣುತ್ತಾರೆ. ಹೊಸ ವ್ಯಾಪಾರ ಒಪ್ಪಂದಗಳು ಕೈಗೂಡುತ್ತವೆ. ಮನೆ, ವಾಹನ ಅಥವಾ ಆಭರಣ ಖರೀದಿಸುವ ಯೋಗವೂ ಇದೆ. ಅವಿವಾಹಿತರಿಗೆ ಶೀಘ್ರದಲ್ಲೇ ಉತ್ತಮ ಜೀವನ ಸಂಗಾತಿ ದೊರೆಯುವ ಸೂಚನೆಗಳಿವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Sat, 31 January 26