ಪಂಚಾಂಗದ ಪ್ರಕಾರ, 2022ರ ಜನವರಿ 28ರ ಪುಷ್ಯಮಾಸದ ಕೃಷ್ಣ ಪಕ್ಷದ ಏಕಾದಶಿ ದಿನದಂದು ಷಟ್ತಿಲ ಏಕಾದಶಿ ಎಂದು ಕರೆಯುವ ವೈಷ್ಣವೈಕಾದಶಿಯನ್ನು ಆಚರಿಸಲಾಗುತ್ತೆ. ಷಟ್ತಿಲ ಏಕಾದಶಿಯ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಎಳ್ಳನ್ನು ವಿಷ್ಣುವಿಗೆ ಅರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶಟಿಲ ಏಕಾದಶಿಯಂದು ಎಳ್ಳನ್ನು ದಾನ ಮಾಡುವುದರಿಂದ ಸ್ವರ್ಗಕ್ಕೆ ದಾರಿ ಸಿಗುತ್ತದೆ. ಮತ್ತು ಎಳ್ಳನ್ನು ದಾನ ಮಾಡಿದವರಿಗೆ ಸಾವಿರ ವರ್ಷಗಳವರೆಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ ಎನ್ನಲಾಗುತ್ತೆ. ಪಾಪಗಳು ಮತ್ತು ದುಃಖಗಳು ದೂರವಾಗುತ್ತವೆ.
ಷಟ್ತಿಲ ಏಕಾದಶಿ 2022 ದಿನಾಂಕ ಮತ್ತು ಮುಹೂರ್ತ
ಹಿಂದೂ ಕ್ಯಾಲೆಂಡರ್ ಪ್ರಕಾರ, ಪುಷ್ಯಮಾಸದ ಕೃಷ್ಣ ಪಕ್ಷದ ಏಕಾದಶಿ ದಿನವು ಶುಕ್ರವಾರ, ಜನವರಿ 28 ರ ಮುಂಜಾನೆ 02:16 ಕ್ಕೆ ಪ್ರಾರಂಭವಾಗುತ್ತದೆ. ಹಾಗೂ ಅದೇ ದಿನ ರಾತ್ರಿ 11.35 ಕ್ಕೆ ಕೊನೆಗೊಳ್ಳುತ್ತದೆ.
ಷಟ್ತಿಲ ಏಕಾದಶಿಯ ದಿನ ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಬಹುದು. ಈ ದಿನ ಅಭಿಜಿತ್ ಮುಹೂರ್ತವು ಮಧ್ಯಾಹ್ನ 12.13 ರಿಂದ 12.56 ರವರೆಗೆ ಇರುತ್ತದೆ. ಮಧ್ಯಾಹ್ನ 02.22 ರಿಂದ 03.05 ರವರೆಗೆ ವಿಜಯ ಮುಹೂರ್ತ.
ಷಟ್ತಿಲ ಏಕಾದಶಿ 2022 ಪರಾನಾ
ಷಟ್ತಿಲ ಏಕಾದಶಿಯ ಉಪವಾಸವನ್ನು ಆಚರಿಸುವವರು ಜನವರಿ 29 ರ ಶನಿವಾರದಂದು ಬೆಳಿಗ್ಗೆ 07.11 ರಿಂದ 09.20 ರವರೆಗೆ ಪಾರಣ ಮಾಡಬಹುದು. ಈ ದಿನ ದ್ವಾದಶಿ ತಿಥಿ ರಾತ್ರಿ 08:37 ಕ್ಕೆ ಮುಕ್ತಾಯವಾಗುತ್ತದೆ.
ಷಟ್ತಿಲ ಏಕಾದಶಿಯ ದಿನ ನೀರಿನಲ್ಲಿ ಎಳ್ಳು ಹಾಕಿ ಸ್ನಾನ ಮಾಡುತ್ತಾರೆ. ನಂತರ ಈ ದಿನ ಉಪವಾಸ ಮತ್ತು ವಿಷ್ಣುವಿನ ಪೂಜೆಗೆ ಮೀಸಲಿಡಲಾಗಿದೆ. ಹೂವುಗಳು, ಹಣ್ಣುಗಳು, ಅಕ್ಷತೆ, ಎಳ್ಳು ಲಡ್ಡುಗಳು, ಪಂಚಾಮೃತ, ತುಳಸಿ ಎಲೆಗಳು ಇತ್ಯಾದಿಗಳನ್ನು ವಿಷ್ಣುವಿಗೆ ಪೂಜೆಯಲ್ಲಿ ಅರ್ಪಿಸಲಾಗುತ್ತದೆ. ಪೂಜೆಯ ಸಮಯದಲ್ಲಿ, ಷಟ್ತಿಲ ಏಕಾದಶಿ ಉಪವಾಸದ ಕಥೆಯನ್ನು ಕೇಳುತ್ತಾರೆ ಮತ್ತು ಅಂತಿಮವಾಗಿ ವಿಷ್ಣುವಿಗೆ ಆರತಿಯನ್ನು ಬೆಳಗುತ್ತಾರೆ.
ಇದನ್ನೂ ಓದಿ: ಇಂದು ಮೋಕ್ಷದ ವೈಕುಂಠ ಏಕಾದಶಿ ದಿನ: ಭಗವಾನ್ ವಿಷ್ಣುವನ್ನು ಪೂಜಿಸುವುದು ಹೇಗೆ? ವಿಷ್ಣುವಿನ ಆಶೀರ್ವಾದಕ್ಕಾಗಿ ಹೀಗೆ ಮಾಡಿ