ಕಾರ್ತಿಕ ಮಾಸದಲ್ಲಿ ನಡೆಯಿತು ದೊಡ್ಡ ಪವಾಡ! ತೆಂಗಿನ ಮರದ ಬೇರುಗಳ ನಡುವೆ ಶಿವಲಿಂಗ ಉದ್ಭವ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2024 | 4:25 PM

ಈಗ ಕಲಿಗಾಲವಾದ್ದರಿಂದ ಕಟುಕರು ಹೆಚ್ಚಾಗಿ ಒಳ್ಳೆಯತನ ಇಲ್ಲದಂತಾಗಿದೆ ಎಂದು ಹಳೆಯವರು ಹೇಳುವಾಗ ಪವಾಡಗಳು ಈಗಲೂ ಆಗುತ್ತಾ ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಭಕ್ತಿ, ನಂಬಿಕೆ ಇದ್ದಾಗ ಊಹಿಸಲೂ ಸಾಧ್ಯವಾಗದ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ತೆಂಗಿನ ಮರದ ಬಳಿ ಶಿವಲಿಂಗ ಪತ್ತೆಯಾಗಿರುವ ಘಟನೆಯೇ ಸಾಕ್ಷಿ. ಇದರಲ್ಲಿ ಏನಿದೆ ವಿಶೇಷತೆ? ಕಂಡು ಬಂದಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಬಹುದು? ಅವುಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರ್ತಿಕ ಮಾಸದಲ್ಲಿ ನಡೆಯಿತು ದೊಡ್ಡ ಪವಾಡ! ತೆಂಗಿನ ಮರದ ಬೇರುಗಳ ನಡುವೆ ಶಿವಲಿಂಗ ಉದ್ಭವ
ವೈರಲ್​​ ಫೋಟೋ
Follow us on

ನಮ್ಮ ಸುತ್ತ ಮುತ್ತ ಅನೇಕ ರೀತಿಯ ಪವಾಡಗಳು ನಡೆಯುತ್ತಿರುತ್ತವೆ. ಕೆಲವನ್ನು ಕಣ್ಣಾರೆ ಕಂಡರೆ ಇನ್ನು ಹಲವನ್ನು ನಾನಾ ರೀತಿಯಲ್ಲಿ ಕೇಳಿ ತಿಳಿದುಕೊಂಡಿರುತ್ತೇವೆ. ಈಗ ಕಲಿಗಾಲವಾದ್ದರಿಂದ ಕಟುಕರು ಹೆಚ್ಚಾಗಿ ಒಳ್ಳೆಯತನ ಇಲ್ಲದಂತಾಗಿದೆ ಎಂದು ಹಳೆಯವರು ಹೇಳುವಾಗ ಪವಾಡಗಳು ಈಗಲೂ ಆಗುತ್ತಾ ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಭಕ್ತಿ, ನಂಬಿಕೆ ಇದ್ದಾಗ ಊಹಿಸಲೂ ಸಾಧ್ಯವಾಗದ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ತೆಂಗಿನ ಮರದ ಬಳಿ ಶಿವಲಿಂಗ ಪತ್ತೆಯಾಗಿರುವ ಘಟನೆಯೇ ಸಾಕ್ಷಿ. ಇದರಲ್ಲಿ ಏನಿದೆ ವಿಶೇಷತೆ? ಕಂಡು ಬಂದಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಬಹುದು? ಅವುಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಂಧ್ರಪ್ರದೇಶದ ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ (ಕರಾವಳಿ ಆಂಧ್ರದ ಕೋನಸೀಮಾ ಪ್ರದೇಶದಲ್ಲಿ ಗೋದಾವರಿ ನದಿಯ ಉಪನದಿಗಳ ನಡುವೆ ಇದೆ) ಪಿ.ಗನ್ನವರಂ ಬೋಡಪತಿವಾರಿಪಲೆಂನ ಮುಖ್ಯ ರಸ್ತೆಯ ಬಳಿ ಇರುವ ಕೊಂಡಲಮ್ಮ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳ ಹಿಂಭಾಗದಲ್ಲಿ ಒಂದು ತೆಂಗಿನ ಮರವಿದ್ದು ಆ ಮರದ ಬೇರುಗಳ ನಡುವೆ ಶಿವಲಿಂಗ ಪತ್ತೆಯಾಗಿದೆ. ಕಾರ್ತಿಕ ಮಾಸದ ಸೋಮವಾರದಂದು ಈ ಶಿವಲಿಂಗ ಭಕ್ತರಿಗೆ ಗೋಚರಿಸಿದೆ ಎನ್ನಲಾಗಿದೆ. ಶಿವನ ಪವಿತ್ರ ದಿನದಂದು ಪಂಚಲೋಹದ ಶಿವಲಿಂಗ ಉದ್ಭವವಾಗಿದ್ದು ಸ್ಥಳೀಯರು ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ.

ಶಿವಲಿಂಗ ಗೋಚರಿಸಿದ್ದು ಹೇಗೆ?

ಸ್ವಪ್ನಾ ಎಂಬ ಭಕ್ತೆ, ವೆಂಕಟೇಶ್ವರ ದೇವಸ್ಥಾನದಿಂದ ದೇವರ ಪ್ರಸಾದ ತೆಗೆದುಕೊಂಡು ಹೊರಬರುತ್ತಿದ್ದಾಗ ಅಚಾನಕ್ಕಾಗಿ ಒಂದು ಹಾವನ್ನು ನೋಡುತ್ತಾಳೆ. ಅದು ಎಲ್ಲಿಗೆ ಹೋಗುತ್ತಿದೆ ಎಂದು ನೋಡಿದಾಗ ಹಾವು ತೆಂಗಿನ ಮರದ ಬಳಿಗೆ ಹೋಗಿ ಕಣ್ಮರೆಯಾದದ್ದನ್ನು ಕಂಡು ಹೆದರಿ ಸುತ್ತಮುತ್ತಲಿನವರಿಗೆ ಈ ಅಚ್ಚರಿಯ ವಿಷಯವನ್ನು ತಿಳಿಸುತ್ತಾಳೆ. ಇದು ಒಬ್ಬರ ಬಾಯಿಯಿಂದ ಇನ್ನೊಬ್ಬರಿಗೆ ತಲುಪಿ ಪಟ್ಟಣದಾದ್ಯಂತ ಈ ವಿಷಯ ಸುದ್ದಿಯಾಗುತ್ತದೆ. ಇದನ್ನು ಕೇಳಿದ ಅಲ್ಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ನೋಡಿದಾಗ ಆ ಸ್ಥಳದಲ್ಲಿ ಪಂಚಲೋಹಗಳಿಂದ ಕೂಡಿದ ಶಿವಲಿಂಗ ಕಂಡು, ಕಾರ್ತಿಕ ಮಾಸದ ಸೋಮವಾರ ಶಿವನೇ ಪ್ರತ್ಯಕ್ಷನಾಗಿದ್ದಾನೆ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಸ್ಥಳೀಯರು ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಏಕಲವ್ಯ ಕ್ಷತ್ರಿಯ ಎಂಬ ಕಾರಣಕ್ಕೆ ದ್ರೋಣಾಚಾರ್ಯರು ವಿದ್ಯೆ ಹೇಳಿಕೊಟ್ಟಿಲ್ಲವೇ? ಇದು ನಿಜವಲ್ಲ ಎನ್ನುತ್ತಾರೆ ಬಿಬೇಕ್ ಡೆಬ್ರಾಯ್

ವಿಷಯ ತಿಳಿದು ದೂರದ ಊರುಗಳಿಂದ ಶಿವನ ದರ್ಶನ ಪಡೆಯಲು ಭಕ್ತರು ಬರುತ್ತಿದ್ದಾರೆ. ಶಿವಲಿಂಗಕ್ಕೆ ನಮಸ್ಕರಿಸಿ ಹೂವು, ಹಣ್ಣುಗಳನ್ನು ಇರಿಸಿ ಬಾಲಾಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಅಥವಾ ನಿಜವಾಗಿಯೂ ನಡೆದಿದೆಯೇ ಎಂಬುದು ತಿಳಿದು ಬಂದಿಲ್ಲ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ