Homa Havan: ಯಾವ ಇಷ್ಟಾರ್ಥ ಸಿದ್ಧಿಗಾಗಿ ಯಾವ ಹೋಮ ಸೂಕ್ತ?

| Updated By: Digi Tech Desk

Updated on: Dec 08, 2022 | 5:14 AM

ಯಾವ ಮನೋಕಾಮನೆಗಳಿಗೆ ಯಾವ ಹೋಮ ಸೂಕ್ತ? ಈ ಕೆಳಗೆ ನೀಡಿರುವ ಎಲ್ಲಾ 16 ಹೋಮಗಳನ್ನು ನಾವು ನಂಬಿದ ಜ್ಯೋತಿಷಿಗಳಿಂದ ಜಾತಕವನ್ನು ಪರಿಶೀಲಿಸಿ, ಯೋಗ್ಯ ಸಲಹೆ ಪಡೆದು ಆಚರಿಸಬೇಕು.

Homa Havan: ಯಾವ ಇಷ್ಟಾರ್ಥ ಸಿದ್ಧಿಗಾಗಿ ಯಾವ ಹೋಮ ಸೂಕ್ತ?
ಯಾವ ಮನೋಕಾಮನೆಗಳಿಗೆ ಅಂದರೆ ಯಾವ ಇಷ್ಟಾರ್ಥ ಸಿದ್ಧಿಗಾಗಿ ಯಾವ ಹೋಮ ಸೂಕ್ತ?
Follow us on

ಯಾವ ಮನೋಕಾಮನೆಗಳಿಗೆ ಯಾವ ಹೋಮ ಸೂಕ್ತ? ಉದಾಹರಣೆಗೆ ಜನ್ಮಾಂತರದಲ್ಲಿ ಮಾಡಿದ ಪಾಪ ಕರ್ಮದ ಫಲವಾಗಿ ಮಕ್ಕಳು ಆಗದೆ ಇದ್ದಾಗ: ಸಂತಾನ ಗೋಪಾಲಕೃಷ್ಣ ಹೋಮ, ನಾಗರಾಜ ಮಂತ್ರ ಹೋಮ, ಪುರುಷ ಸೂಕ್ತ ಹೋಮ, ಶ್ರೀ ವಿದ್ಯಾ ಹೋಮ, ಶ್ರೀ ರುದ್ರ ಹೋಮ (ಲಘು ರುದ್ರ, ಶತ ರುದ್ರ, ಮಹಾ ರುದ್ರ, ಅತಿ ರುದ್ರ) ಮಾಡಬೇಕು. ಆದಾಗ್ಯೂ, ಈ ಕೆಳಗೆ ನೀಡಿರುವ ಎಲ್ಲಾ 16 ಹೋಮಗಳನ್ನು ನಾವು ನಂಬಿದ ಜ್ಯೋತಿಷಿಗಳಿಂದ ಜಾತಕವನ್ನು ಪರಿಶೀಲಿಸಿ, ಯೋಗ್ಯ ಸಲಹೆ ಪಡೆದು ಆಚರಿಸಬೇಕು (Spiritual).

  1.  ಗಣಹೋಮ: ಎಲ್ಲಾ ಕಷ್ಟಗಳು ಮತ್ತು ಕಾರ್ಯದಲ್ಲಿ ಬರುತ್ತಿರುವ ವಿಘ್ನಗಳನ್ನು ನಿವಾರಣೆಗೊಳಿಸಲು
  2.  ವಲ್ಲಭ ಗಣಪತಿ ಹೋಮ: ಗಣಪತಿ ಅನುಗ್ರಹ ಪ್ರಾಪ್ತಿಗಾಗಿ
  3.  ಶೀಘ್ರ ವಿವಾಹ ಪ್ರಾಪ್ತಿಗಾಗಿ: ಹರಿದ್ರಾ ಗಣಪತಿ ಹೋಮ, ಬಾಲ ಗಣಪತಿ ಹೋಮ, ತ್ರೈಲೋಕ್ಯ ಮೋಹನ ಗಣಪತಿ ಹೋಮ
  4.  ಲಕ್ಷ್ಮೀ ಗಣಪತಿ ಹೋಮ: ಲಕ್ಷ್ಮಿ ಪ್ರಾಪ್ತಿಗಾಗಿ
  5.  ಚಿಂತಾಮಣಿ ಗಣಪತಿ ಹೋಮ: ಮನಸ್ಸಿನ ಎಲ್ಲಾ ಕಾಮನೆಗಳನ್ನು ಪಡೆಯಲು
  6.  ವಿದ್ಯಾ ಪ್ರಾಪ್ತಿಗಾಗಿ: ಮೇಧಾ ಗಣಪತಿ ಹೋಮ, ಬುದ್ಧಿ ಗಣಪತಿ ಹೋಮ, ಸಿದ್ಧಿ ಗಣಪತಿ ಹೋಮ, ಅಷ್ಟ ದ್ರವ್ಯ ಗಣಹೋಮ
  7.  ಸಾಲದ ಬಾಧೆ ನಿವಾರಣೆಗೆ: ಋಣ ಹರಣ ಗಣಪತಿ ಹೋಮ, ಕ್ಷಿಪ್ರ ಗಣಪತಿ ಹೋಮ, ಸ್ವರ್ಣ ಗಣಪತಿ ಹೋಮ, ಸಂಕಟಹರ ಗಣಪತಿ ಹೋಮ
  8.  ವಿದ್ಯಾ ಪ್ರಾಪ್ತಿಯಲ್ಲಿ ಬರುತ್ತಿರುವ ದೋಷ ನಿವಾರಣೆಗಾಗಿ : ವಾಕ್ ಸರಸ್ವತಿ ಹೋಮ, ನೀಲಾ ಸರಸ್ವತಿ ಹೋಮ, ದಕ್ಷಿಣಾ ಮೂರ್ತಿ ಹೋಮ
  9.  ಗ್ರಹ ಬಾಧೆಯಿಂದ ಜೀವನದಲ್ಲಿ ಬರುವ ರೋಗ ಪೀಡಾ ಪರಿಹಾರಕ್ಕಾಗಿ ಮತ್ತು ಅಕಾಲ ಮೃತ್ಯು ನಿವಾರಣೆಗಾಗಿ : ಮಹಾ ಮೃತ್ಯುಂಜಯ ಹೋಮ, ಅಮೃತ ಮ್ರತ್ಯುಂಜಯ ಹೋಮ, ಅಭಯಾಯುಷ್ಯ ಹೋಮ, ಉಗ್ರ ನರಸಿಂಹ ಹೋಮ, ದೂರ್ವಾ ಮೃತ್ಯುಂಜಯ ಹೋಮ
  10. ವಿರೋಧಿಗಳು ಮಾಡುವ ಮಂತ್ರ, ತಂತ್ರ, ಯಂತ್ರಾದಿ ದುಷ್ಕರ್ಮ ಉಚ್ಛಾಟನೆಗಾಗಿ, ರಕ್ಷೆಗಾಗಿ: ಮಹಾ ಸುದರ್ಶನ ಹೋಮ, ಅಘೋರಾಸ್ತ್ರ ಹೋಮ, ಪ್ರತ್ಯಂಗಿರಾ ಹೋಮ, ಬಗಲಾಮುಖಿ ಹೋಮ, ಶರಭೇಶ್ವರ ಹೋಮ, ಶೂಲಿನಿ ದುರ್ಗಾ ಹೋಮ, ದತ್ತಾತ್ರೇಯ ಮಾಲಾಮಂತ್ರ ಹೋಮ, ಆಂಜನೇಯ ಮಂತ್ರ ಹೋಮ
  11. ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿ ಮತ್ತು ಉದ್ಯೋಗ, ವ್ಯವಹಾರ ಜಯ ಪ್ರಾಪ್ತಿಗಾಗಿ: ಶ್ರೀಸೂಕ್ತ ಹೋಮ, ಲಕ್ಷ್ಮೀ ಹೋಮ (ಕಮಲದ ಹೂವಿನಿಂದ), ಲಕ್ಷ್ಮಿ ನೃಸಿಂಹ ಹೋಮ, ಲಕ್ಷ್ಮಿ ನಾರಾಯಣ ಹೃದಯ ಹೋಮ, ಕುಬೇರ ಲಕ್ಷ್ಮೀ ಹೋಮ, ಚಂಡಿಕಾ ಹೋಮ (ನವ, ಶತ, ಸಹಸ್ರ)
  12. ರೋಗ ನಿವಾರಣೆಗಾಗಿ: ಧನ್ವಂತರಿ ಹೋಮ, ಅಪಸ್ಮಾರ ದಕ್ಷಿಣಾಮೂರ್ತಿ ಹೋಮ, ನವಗ್ರಹ ಹೋಮ (ಪ್ರತ್ಯೇಕ ಗ್ರಹಶಾಂತಿ), ಸುಬ್ರಹ್ಮಣ್ಯ ಹೋಮ, ಜಾತಕದಲ್ಲಿ ಸೂಚಿಸಿದಂತೆ ರೋಗಕ್ಕೆ ಅನುಸಾರವಾಗಿ
  13. ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ, ಆತಂಕಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು: ಉಗ್ರ ನರಸಿಂಹ ಹೋಮ (25 ಸಾವಿರ ಜಪ ಮಾಡಬೇಕು), ಸ್ವಯಂವರ ಪಾರ್ವತಿ ಹೋಮ (10 ಸಾವಿರ ಜಪ ಮಾಡಬೇಕು), ಬಾಣೇಶಿ ಹೋಮ (10 ಸಾವಿರ ಜಪ ಮಾಡಬೇಕು), ಅಶ್ವಾರೂಢ ಪಾರ್ವತಿ ಹೋಮ (10 ಸಾವಿರ ಜಪ ಮತ್ತು ಹೋಮ)
  14. ಜನ್ಮಾಂತರದಲ್ಲಿ ಮಾಡಿದ ಪಾಪ ಕರ್ಮದ ಫಲವಾಗಿ ಮಕ್ಕಳು ಆಗದೆ ಇದ್ದಾಗ: ಸಂತಾನ ಗೋಪಾಲಕೃಷ್ಣ ಹೋಮ, ನಾಗರಾಜ ಮಂತ್ರ ಹೋಮ, ಪುರುಷ ಸೂಕ್ತ ಹೋಮ, ಶ್ರೀ ವಿದ್ಯಾ ಹೋಮ, ಶ್ರೀ ರುದ್ರ ಹೋಮ (ಲಘು ರುದ್ರ, ಶತ ರುದ್ರ, ಮಹಾ ರುದ್ರ, ಅತಿ ರುದ್ರ)
  15. ಕಳೆದು ಹೋದ ವಸ್ತು ಪ್ರಾಪ್ತಿಗಾಗಿ: ಕಾರ್ತವೀರ್ಯಾರ್ಜುನ ಜಪ ಹೋಮ
  16. ನಮ್ಮ ಕ್ಷೇತ್ರಗಳನ್ನು, ಬೆಳೆಗಳನ್ನು ರಕ್ಷಿಸಲು, ದುಷ್ಟ ಪ್ರಾಣಿಗಳು ಮತ್ತು ದುರ್ಜನರಿಂದ ರಕ್ಷಣೆ ಪಡೆಯಲು: ವನ ದುರ್ಗಾ ಹೋಮ, ಭೂ ವರಾಹ ಹೋಮ, ರಾಮತರಕ ಹೋಮ, ಹನುಮಾನ್​ ಹೋಮ.