Temple Tour: ಮಿನಿಮಂತ್ರಾಲಯಕ್ಕೆ ಗುರುವಾರದಂದು ತಪ್ಪದೇ ಭೇಟಿ ನೀಡಿ

| Updated By: shivaprasad.hs

Updated on: Oct 16, 2021 | 9:30 AM

ಪ್ರತಿ ಗುರುವಾರಕ್ಕೊಮ್ಮೆ ರಥೋತ್ಸವ, ಪಲ್ಲಕ್ಕಿ ಸೇವೆ, ಅಷ್ಟಾವಿಧಾನ ಸೇವೆಗಳು ನಡೆಯುತ್ತವೆ. ಪ್ರತಿ ವರ್ಷ ಆರಾಧನಾ ಮಹೋತ್ಸವ ಇಲ್ಲಿ ನಡೆಯುತ್ತದೆ. ಭಾಗವತ ಪ್ರವಚನ, ಧಾರ್ಮಿಕ ಪ್ರವಚನಗಳು ಆರಾಧನಾ ಮಹೋತ್ಸವ ವೇಳೆ ನಡೆಯುತ್ತವೆ.

ಬಾಗಲಕೋಟೆ: ರಾಘವೇಂದ್ರ ಮಠ ಅಂದರೆ ಸಾಕು ಮಂತ್ರಾಲಯ ನೆನಪಾಗುತ್ತದೆ. ಆದರೆ ಉತ್ತರಕರ್ನಾಟಕದಲ್ಲಿ ಬಾಗಲಕೋಟೆಯಲ್ಲೂ ಗುರು ರಾಘವೇಂದ್ರರ ಶಾಖಾಮಠವಿದ್ದು, ಮಿನಿಮಂತ್ರಾಲಯ ಎಂದು ಹೆಸರಾಗಿದೆ. ಕಳೆದ ಮೂವತ್ತೆಂಟು ವರ್ಷಗಳ ಹಿಂದೆ ನಿರ್ಮಾಣವಾದ ರಾಯರ ಮಠ ಭಕ್ತರ ಆಶಾಕಿರಣವಾಗಿದೆ. ಮೂವತ್ತೆಂಟು ವರ್ಷಗಳ‌ ಹಿಂದೆ ಸುಜೀಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಮೂಲ ವತ್ತಿಕಾ ವೃಂದಾವನ ಇಲ್ಲಿ ಸ್ಥಾಪಿಸಲ್ಪಟ್ಟಿದೆ. 35 ವರ್ಷಗಳಿಂದ ಬಾಗಲಕೋಟೆ ರಾಯರ ಮಠ ಭಕ್ತರ ಮನದಲ್ಲಿ ಬೆಳಕು ಮೂಡಿಸುತ್ತಿದೆ. ನಿತ್ಯವೂ ಪೂಜೆ ಪುನಸ್ಕಾರ, ಪಂಚಾಮೃತ ಅಭಿಷೇಕ, ನಿರ್ಮಾಲ್ಯ ವಿಸರ್ಜನೆ, ಹಸ್ತೋದಕ ಮಹಾಂಮಗಳಾರತಿ, ಇಲ್ಲಿ ನಡೆಯುತ್ತದೆ.

ಪ್ರತಿ ಗುರುವಾರಕ್ಕೊಮ್ಮೆ ರಥೋತ್ಸವ, ಪಲ್ಲಕ್ಕಿ ಸೇವೆ, ಅಷ್ಟಾವಿಧಾನ ಸೇವೆಗಳು ನಡೆಯುತ್ತವೆ. ಪ್ರತಿ ವರ್ಷ ಆರಾಧನಾ ಮಹೋತ್ಸವ ಇಲ್ಲಿ ನಡೆಯುತ್ತದೆ. ಭಾಗವತ ಪ್ರವಚನ, ಧಾರ್ಮಿಕ ಪ್ರವಚನಗಳು ಆರಾಧನಾ ಮಹೋತ್ಸವ ವೇಳೆ ನಡೆಯುತ್ತವೆ. ಎಲ್ಲ ಜಾತಿ ಧರ್ಮದ ಜನರು ದಿನಾಲೂ ಬಂದು ಇಲ್ಲಿ ರಾಯರ ದರ್ಶನ ಪಡೆಯುತ್ತಾರೆ. ಆರಾಧನಾ ಮಹೋತ್ಸವವನ್ನೇ ಜಾತ್ರೆ ಎಂದು ಕರೆಯುತ್ತಾರೆ. ರಾಯರ ಮಠದ ಅರ್ಚಕರು ಹೇಳುವ ಸಾಮೂಹಿಕ ಮಂತ್ರ ಪಠಣ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ.

ಇದನ್ನೂ ಓದಿ:
Temple Tour: ರಾಕ್ಷಸರು ಕಟ್ಟಿದ ಗುಡಿಯಲ್ಲಿ ಉದ್ಭವವಾದ ಹನುಮಂತ

Temple Tour: ಅಹಲ್ಯಾ ದೇವಿ ಮಾರಮ್ಮನಾಗಿ ನೆಲೆ ನಿಂತ ಪೌರಾಣಿಕ ಕಥೆ ಏನು?