Temple Tour: ಅಹಲ್ಯಾ ದೇವಿ ಮಾರಮ್ಮನಾಗಿ ನೆಲೆ ನಿಂತ ಪೌರಾಣಿಕ ಕಥೆ ಏನು?
ಗೋಹತ್ಯಾ ದೋಷ ನಿವಾರಣೆಗಾಗಿ ತಪಸ್ಸು ಮಾಡಿ ಇಲ್ಲೇ ನೆಲೆಸಿದ್ದರು. ಮಾರಮ್ಮನಾಗಿ ನೆಲೆ ನಿಂತಿರುವ ಅಹಲ್ಯಾ ದೇವಿಯ ಸನ್ನಿಧಿಗೆ ವಾರದಲ್ಲಿ ಮೂರು ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ್ತಾರೆ.
ನಾಡಿನಲ್ಲಿರುವ ಕೆಲವು ದೇಗುಲಗಳು ಪೌರಾಣಿಕ ಹಿನ್ನಲೆಯಲ್ಲಿ ಪ್ರಸಿದ್ಧಿಯನ್ನ ಪಡೆದಿವೆ. ಅಂತಾ ಒಂದು ದೇಗುಲ ಮಂಡ್ಯದಲ್ಲಿದೆ. ರಾಮಾಯಣದ ಹಿನ್ನೆಲೆಯುಳ್ಳ ದೇಗುಲಕ್ಕೆ ನಿತ್ಯ ಅಪಾರ ಪ್ರಮಾಣದ ಜನರು ಹರಿದು ಬರುತ್ತಿದ್ದಾರೆ.ಅಹಲ್ಯಾ ದೇವಿ ಮಾರಮ್ಮನಾಗಿ ಈ ಕ್ಷೇತ್ರದಲ್ಲಿ ನಿಂತ ಕಥೆ ಪೌರಾಣಿಕ ಹಿನ್ನೆಲೆಯದ್ದು. ಗೌತಮ ಮಹರ್ಷಿಗಳ ಪತ್ನಿಯಾದ ಅಹಲ್ಯಾಯೆ ಇಲ್ಲಿ ಮಾರಮ್ಮನ ಅವತಾರದಲ್ಲಿ ಭಕ್ತರನ್ನು ಉದ್ಧರಿಸುತ್ತಿದ್ದಾಳೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಅಂದು ಗೌತಮ ಮಹರ್ಷಿಗಳ ಕಾವೇರಿ ತೀರದಲ್ಲಿ ನೆಲೆಸಿದ್ದರು ಎಂಬ ಮಾತಿಗೆ ಪೂರಕ ಎನ್ನುವ ಹಾಗೆ ಕಾವೇರಿ ನದಿ ತೀರದಲ್ಲಿ ಗುಹೆಯೊಂದಿದೆ. ಗೋಹತ್ಯಾ ದೋಷ ನಿವಾರಣೆಗಾಗಿ ತಪಸ್ಸು ಮಾಡಿ ಇಲ್ಲೇ ನೆಲೆಸಿದ್ದರು. ಮಾರಮ್ಮನಾಗಿ ನೆಲೆ ನಿಂತಿರುವ ಅಹಲ್ಯಾ ದೇವಿಯ ಸನ್ನಿಧಿಗೆ ವಾರದಲ್ಲಿ ಮೂರು ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ್ತಾರೆ.
Latest Videos