‘ನನ್ನ ಎರಡ್ಮೂರು ಲವ್​​ಸ್ಟೋರಿ ಹೊಗೇನೆ’; ಪ್ರೀತಿ-ಪ್ರೇಮದ ವಿಚಾರ ಮಾತನಾಡಿದ ಧರ್ಮಣ್ಣ

ಟಿವಿ9 ಕನ್ನಡದ ಜತೆ ಧರ್ಮಣ್ಣ ಮಾತನಾಡಿದ್ದಾರೆ. ಈ ವೇಳೆ ತಮ್ಮ ಬಾಲ್ಯದ ದಿನಗಳ ಬಗ್ಗೆ ಹಾಗೂ ಲವ್​ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ.

ನಟ ಧರ್ಮಣ್ಣ ಸ್ಯಾಂಡಲ್​ವುಡ್​ನಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಮಾಡುವ ಕಾಮಿಡಿ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ಧರ್ಮಣ್ಣ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ಟಿವಿ9 ಕನ್ನಡದ ಜತೆ ಧರ್ಮಣ್ಣ ಮಾತನಾಡಿದ್ದಾರೆ. ಈ ವೇಳೆ ತಮ್ಮ ಬಾಲ್ಯದ ದಿನಗಳ ಬಗ್ಗೆ ಹಾಗೂ ಲವ್​ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ಶಾಲೆಗೆ ಹೋಗುವಾಗ ಹಣ್ಣು ತೆಗೆದುಕೊಂಡು ಹೋಗುತ್ತಿದ್ದೆ. ಆಗ ಎಲ್ಲ ಹೆಣ್ಣುಮಕ್ಕಳು ನನ್ನ ಬಳಿ ಬರುತ್ತಿದ್ದರು. ಸೆಂಟರ್​ ಆಫ್​ ಅಟ್ರ್ಯಾಕ್ಷನ್​ ಆಗಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು. ಹಾಗೆ ನೋಡೋಕೆ ಹೋದ್ರೆ, ಎರಡು-ಮೂರು ಲವ್​ ಸ್ಟೋರಿಗಳು ಹೊಗೆ ಆಗಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: 40 ಕೆಜಿ ಇದ್ದ ಅಕ್ಕ 15 ಕೆಜಿಗೆ ಇಳಿದ್ರು, ಆಮೇಲೆ ತೀರೋದ್ರು; ಭಾವುಕರಾದ ಧರ್ಮಣ್ಣ

Click on your DTH Provider to Add TV9 Kannada